ವಿಷಯಕ್ಕೆ ಹೋಗು

ಪುಟ:Aramane.pdf/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೋಬಯfyನೇ, ಪಟ್ಟಣದಿಂದ ನಗೆ, ಸುಖ ಸಂತೋಷವನ್ನಪಹರಣ ಮಾಡಿಬುಟ್ಟು ಮಂಗಮಾಯವಾಗಿಬಿಟ್ಟಿರುವಿಯಲ್ಲಾ, ವುಂಡ ಮನೆಗೆ ಯರಡು ಬಗೆದಿರುವ ನೀನೆಲ್ಲೋ, ಬೆಳೆದ ಪಟ್ಟಣವನ್ನು ಕಣ್ಣೀರೊಳಗ ಕಯ್ಯಬುಟ್ಟು ನೀನೋದಿಯಲ್ಲೋ, ನಗಿ ಯಲ್ಲಯ್ತೆ ತಾ.. ಸುಖ ಸಂತೋಷ ಯಲ್ಲಯ್ತೆ ತತ್ತಾರೋ.. ನರಮನುಶ್ಯೋರೆಂದ ಮ್ಯಾಲ ಕುವ್ವಾಡ ಮಾಡದಂಗಿರುತಾರಾ.. ವಂದು ಚಾಸ್ಟಿ ಮಾಡದಂಗಿರುತಾರಾ.. ಅದಕ ಯಿಷ್ಟು ಘನ ಘೂೕರ ಶಿಕ್ಷೆ ಕೊಡಲಕ ನಿನಗ್ಯಾರು ಅದಿsಕಾರ ಕೊಟ್ಟರಲೋ.. ನಿನ್ನ ನೀನು ರಾಜನಂದುಕೊಂಡ್ಯಾ.. ಗುಡಿ ಹಿಂದಲ ಮನೇನ ಅರಮನೆ ಅಂದುಕೊಂಡ್ಯಾ... ಯಂದು ಮುಂತಾಗಿ ತನಪಾಡಿಗೆ ತಾನು ವಟವಟಗುಟ್ಟೂತ, ಕಯ್ಯಲ್ಲಿದ್ದ ರಾಜದಂಡವನ್ನು ಹೆಜ್ಜೆಹೆಜ್ಜೆಗೆ ಕುಟ್ಟೂತ.. ಸಾರಾಸಗಟ ಅರಮನೇನೇ ತನ್ನಂಥ ರುದ್ದೆಯಾತೀ ರುದ್ದರೂಪದಲ್ಲಿ ಬೀದಿ ತುಂಬೆಲ್ಲ ನಡೆದಾಡಲಕ ಹತ್ತಯಿತೆ ಯಂಬುದನು ಸಾಬೀತು ಪಡಿಸೂತ, ಕಣ್ಣೀರು ವರೆಸುವ ನೆಪದಲ್ಲಿ ಕಯ್ಯಿಗಳನು ಚಾಚೂತ, ಚಾಚಿ ತನ್ನ ಮುಂಗಯ್ಯಿಗಿದ್ದ ಕಡಗಗಳು ನಕಲಿಯವಲ್ಲ ಯಂದು ಜಗಜ್ಜಾಹೀರು ಮಾಡುತ ನಸುಗುನ್ನಿಕಾಯಿ ವಡೆದು ಸಾವುರು ರೂಪ ಧಾರಣ ಮಾಡಿರುವಂತೆ ಹಾದಿ ಬೀದಿ ತುಂಬೆಲ್ಲ ಹರಿದಾಡಲಕ್ಕ ತೊಡಗಿದ್ದಳು. ತಾನು ಯೇಸು ಮಾಡುತಲಿದ್ದರೂ ತನ್ನ ಹೆಸರು ನೊಂದವರ ಬಾಯೊಳಗ ಸಬುಧಧಾರಣ ಮಾಡುತಾ ಯಿಲ್ಲಲ್ಲಾ.. ಪ್ರತಿಯೊಬ್ಬರ ಬಾಯೊಳಗ ಸಾಂಬವಿ ಯಂಬ ಮೂರಕ್ಕರದ ಕಮಲ ಅರಳುತಲಿರುವುದಲ್ಲಾ.. ಅಯ್ಯೋ ತನ್ನ ನತದ್ರುಸ್ಟವೇ.. ಅಯ್ಯೋ ತನ್ನ ಕರುಮವೇ..

ರಾಜಸತ್ತೆಯ ಡುಬ್ಬದ ಮ್ಯಾಲ ಬರೆ ಹಾಕಿದಂತೆ ಸಂತರಸ್ತ ತಾಯಂದಿರು ರಾಜಮಾತೆ ಯಂಬ ಪುರುವ ಕಾಲದ ಮುದೇಕಿ ಅಗಾ ಅಲ್ಲಿ ಬರುತಾಳಂದರ ಯಿಗಾ ಯಿಲ್ಲಿ ವಂದು ಜಾಮು ತುಂಬ ಕಣ್ಣೊಳಗಿಂದ ನೀರನ್ನು ಬಸಿದಿಟ್ಟುಕೊಂಬುಲಿದ್ದರು, ಹತ್ತಿರ ಬಂದೊಡನೆ ಆಕೆ ಯದುರು ಜಿಗಿದು “ನಡದೂ ನಡದೂ ನೀರಡಕೆ ಆಗಯ್ತೇನವ್ವಾ.. ಯಿಕಾ ಕುಡುದು ದಾಹ ಪರ್ಯಾರ ಮಾಡಿಕೊಳ್ಳವ್ವಾ” ಯಂದು ಬ್ರುತಿಮಾಲ್ಯಾಡುತಲಿದ್ದರು.. ಹ್ಹಾ..ಹ್ಹಾ..ತನ್ನ ಪ್ರಜೆಗಳಿಗೆ ತನ್ನ ಮ್ಯಾಲ ಯೇಟೊಂದು ಗವುರವ, ಕನುಕರ ಅಯಿತೆಂದು ಭಾವಿಸಿ ಮುದೇಕಿ ಗಟಗಟಾಂತ ಕುಡುದು.. ವುಪುಸಿಪ್ಪಯಿತೆ, ವಗರೊಗರಯಿತೆ ಯಂದು ತನ್ನ ಮುಖವನ್ನೊಂದು ನಮೂನಿ ಮಾಡಿಕೊಳ್ಳುತ ಮುಂದ ಮುಂದಕ ಹೆಜ್ಜೆ ಹಾಕುತಲಿದ್ದಿತು.. ಮತ ಮತ ಮುಂದಕ ಹೋದರೆ ತಾಯಂದಿರು ಸಕುಟುಂಬ