ಪಟ್ಟವನ್ನೇರಿರುವ ಗಳಿಗೆ ಸುಭದಾಯಕಯಿರುವುದು, ರಾಜಯೋಗ ಪ್ರದಾಯಕ ಯಿರುವುದು ಯಂದು ಜೋತಿಷ್ಯ ಸಾಸ್ತರವ ನುಡಿದರೆಂಬಲ್ಲಿಗೆ ಸಿವಸಂಕರ ಮಾದೇವಾss..
ಯವ್ವನದರಮನೆಯ ಹೊಸ್ತಿಲನ್ನು ಯೀಗ ತಾನೆ ದಾಟಿರುವ ತನ್ನ ವಮುಸ ಕುಡಿಯು, ತನ್ನ ಪಂಚಪ್ರಾಣವು ಯೇನು ತಿಂಬಬೇಕು? ಯೇನು ಕುಡಿಯಬೇಕು ಯಂದು ಯೋಚಿಸಿದ ತಾಯಕ್ಕ ವಣದ್ರಾಕ್ಷಿ, ಗೋಡಂಬಿ, ಬಾದಾಮು, ವುತ್ತತ್ತಿ, ಖರಜೂರ, ಕೆನೆತುಪ್ಪ, ಕೆನೆಮೊಸರು, ನೊರೆವಾಲು, ಬಂಗಾರುಮುಡಿ ಅಕ್ಕಿ, ಜವೆಗೋದಿ ಯಿವೇ ಮೊದಲಾದ ದುಬಾರಿಯೂ, ಪುಷ್ಟಿದಾಯಕವÆಆದ ದಿನಿಸನ್ನು ದೂರದ ದೇಸಗಳಾದ, ದಾವಣಗೆರೆ, ರಾಣಿ ಬೆನ್ನೂರುಗಳಿಂದ ಗುಟ್ಟಾಗಿ ತರಿಸಿಕೊಂಡದ್ದು ಯಾಕಂದರ.. ಅದಕ್ಕssss.. ಆದರ ಯೀ ಯಲ್ಲ ಯೇರುಪಾಡು ಯೇಸು ದಿವಸಗಳ ಮಟ ನಡೆಯಲಕಾದೀತು? ಚಂದ್ರಾಮನಿಂದ ಬೆಳದಿಂಗಳನ್ನು ತಡೆಯಲಕಾದೀತಾ? ಪುಷ್ಪರಾಜಿಯಿಂದ ಪರಿಮಳಕ್ಕಡ್ಡ ಗೋಡೆ ಯಬ್ಬಿಸಲಕಾದೀತಾ? ರುತುಮತಿಗೊಂಡ ಸರೀರದ ಮ್ಯಾಲ ವುಬ್ಬು ತಗ್ಗುಗಳು ಮೂಡಧಾಂಗ... ಸಿವನೇ ಅದೆಲ್ಲ ಆಗದ ಮಾತು...
ಚಿನ್ನಾಸಾನಿ ಫಲಾನ ದಿವಸದಂದು ಹಿರೇಮನುಶ್ಯೋಳಾದಳೆಂಬ ಸಂಗತಿಯು ಪಟ್ಟಣದ ಕಿವಿಯೊಳಗ ಪಾನಕದ ಧಾರೆಯಾಗಿ ಸುರಿಯಿತು. ಯಿಡೀ ಪಟ್ಟಣವು ತಾನೇ ರುತುಮತಿ ಗೊಂಡೋಪಾದಿಯಲ್ಲಿ ಸಂಭ್ರಮಿಸಿತೆಂಬಲ್ಲಿಗೆ ಸಿವಸಂಕರ ಮಾದೇವಾss
ಅತ್ತ ಹರಪನಹಳ್ಳಿ ಸೀಮೆ ವಳಿತದೊಳಗೆ ತೆಲಗಿ, ಗುಂಡುಗತ್ತಿ, ಮಸುಲವಾಡ, ಅಲಗಿಲವಾಡ, ಚಿರಸ್ತಳ್ಳಿ, ಅರಸಿಕೆರೆ, ಕಂಬತ್ತಳ್ಳಿಯೇ ಮೊದಲಾದ ಕಾಸಿಗೊಂದು ಕೊಸರಿಗೊಂದ ರಂತಿದ್ದ ಸಮುಸ್ಥಾನಗಳ ರಾಜರುಗಳನ್ನು ನೋಡಿ ವೂಸರುವಳ್ಳಿಗಳೇ ನಾಚಿಕೊಳ್ಳತೊಡಗಿದ್ದವು ಸಿವನೇ.. ಸಿಕ್ಕವರಿಗೆ ಸಿವಲಿಂಗ ಅಂತ ತಾವೇ ವಂದುಕಡೇಲಿಂದ ತಮ ತಮ್ಮ ಪ್ರಜೆಗಳನ್ನು ಮೇಯಲಾರಂಬಿsಸಿದ್ದರು ಸಿವನೇ.. ಕಳ್ಳರಿಗ್ಯಾಕೆ ಪಾಲು ಕೊಡಬೇಕೆಂಬ ಲೆಕ್ಕಾಚಾರದಿಂದ ಕೆಲ ರಾಜರು ರಾತ್ರಿಯಾದೊಡನೆ ಬಂದಿಪೋಟು ಮುಖವಾಡ ಧರಿಸಿ ಖುದ್ಧ ಕಳುವಿಗೆ ಹೋಗಲಾರಂಭಿಸಿದ್ದರು ಮುರಹರನೆ.. ತಮ್ಮೀ ವಾಮಮಾರ್ಗಕ್ಕೆ ಅನುಕೂಲವಾಗುವಂತೆ ತಮ ತಮ್ಮ ರಾಜ್ಯಾಂಗದ ಕಾನೂನುಗಳನ್ನು ತಿದ್ದುಪಡಿ ಮಾಡಿ ಪ್ರಜೆಗಳ ಮ್ಯಾಲ ಯೇರಲ ಕಾರಂಬಿsಸಿದ್ದರು ‘ರಾಜಾ ಪ್ರತ್ಯಕ್ಷದೇವತಾ’ಯ ಸಿಲಾಪಲಕಗಳನ್ನು ತಮ ತಮ್ಮ ರಾಜ್ಯಗಳ ಬೀದಿ