ಮೊದಲಿಗೆ ಸೊರಗ, ನರಕಲೋಕಗಳ ಕಡೇಲಿಂದ ಬಂದಿರಬೌದೆಂದೇ ತಾವು ಭಾವಿಸಿ ಅರಗಳಿಗೆ ಕಂಗಾಲಾದರು. ಯೀ ಗುಡುಗು ಸದ್ರುಸ ದ್ದೊನಿಯು ಸೊರಗ ಲೋಕದ್ದೂ ಅಲ್ಲ.. ನರಕ ಲೋಕದ್ದೂ ಅಲ್ಲ.. ಯಿದು ತಮ್ಮ ಸದರಿ ಪಟ್ಟಣದ ಅದಾದೋ ಮೂಲೆಯಿಂದ ಹೊಂಟು ಗಾಳಿಗುಂಟ ಬಂದಂಗಿರುವುದು.. ಯಿದಾರದ್ದೋ ಯಿದ್ದಂಗಿರುವುದಲ್ಲಾ, ಯಂದವರವರು ತಮ ತಮ್ಮ ಮುಂಗಾಲ ಪುಟುಗೀಲೆ ಯೋಚಿಸುತಾ ಯೋಚಿಸುತಾ.. ಆ ದ್ದೊನಿಯ ಆಧಾರದ ಮ್ಯಾಲ ಆ ಯಕ್ತಿಯ ಆಕಾರ ಸೊರೂಪವನ್ನು ಕಲುಪಿಸುತಾ ಕಲುಪಿಸುತಾ.. ಆ ದ್ದೊನಿಯೇ ಹಿಂಗಿರುವುದೆಂದ ಮ್ಯಾಲ ಅದರ ಮೂಲಕಾರಕವಾಗಿರುವ ಮಾನವ ರೂಪವು ಹಂಗಿರಬೌದಾ ಯಂದು ಭಯಪಡುತಾ ಭಯಪಡುತಾ.. ಅಲಲಲಾ ಯಂಬ ವುದ್ಗಾರ ವಾಚಕದ ವುತ್ತರಾರ್ದಕ್ಕಂಟಿರುವ ‘ಸೂರ’ ಯಂಬ ನಾಮವಾಚಕವನ್ನು ಗಟ್ಟಿಯಾಗಿ ಹಿಡಕೊಳ್ಳುತಾs ಹಿಡಕೊಳ್ಳುತಾ.. ಅರರೇ ಯೀದ್ದೊನಿಯು ಜಗಲೂರವ್ವಂದಲ್ಲಾ ಯಂದು ಯೇಕಧಂ ನಿರಣಯಕ್ಕೆ ಬಂದರು.. ಹ್ಹಾ.. ಹ್ಹಾ.. ಜಗಲೂರವ್ವಾ.. ಹೊ ಹ್ಹೋ ಜಗಲೂರೆವ್ವಾ.. ಯಂದು ಲಯದ ಸಾನ್ನಿಧ್ಯದಲ್ಲಿ ವುದ್ಗಾರ ಮಾಡಿದರು.. ಹ್ಹಾ.. ಹ್ಹಾ.. ತನ್ನ ಗಂಡನ ಸರೀರವನ್ನು ಸೊಯಂ ತ್ಯಾಗ ಮಾಡಿರುವಾಕೆ.. ಹೋಹ್ಹೋ ಸೊಯಂ ಗಂಡನಿಂದ ಪರಿತ್ಯಕ್ತಗೊಂಡಿರುವಾಕೆ.. ಬಿರುಗಾಳಿ ಸದ್ರುಸದ ತನ್ನ ಸರೀರದೊಳಗ ಅಪಾರ ತಂಗಾಳಿಯನ್ನು ಬಚ್ಚಿಟ್ಟುಕೊಂಡಿರುವಾಕೆ.. ಸೊಯಂ ಸಾಂಬವಿ ಯಂಬ ಪ್ರಳಯ ರೂಪೀ ಪ್ರವಾಹದೆದುರು ಯೀಜುತಿರುವಾಕೆ.. ದಯವದ ಸಾಪಗಳಿಗಾತೀತೆಯಾಗಿ ಬದುಕುತ್ತಿರುವಾಕೆ.. ನೂರು ಮಂದಿ ಗಂಡಸರ ತಾಕತ್ತನ್ನು ತನ್ನ ಸರೀರ ಪರ್ಯಂತರ ಮುಡುಕೊಂಡಿರುವಾಕೆ, ತನ್ನ ಚೋಟುದ್ದ ನಾಲಗೆ ಅಟ್ಟದ ಮ್ಯಾಲ ಸಿಡಿಲುಗಳನ್ನು ವಟ್ಟಿಕೊಂಡಿರುವಾಕೆ, ತನ್ನೊಂದು ನೋಟ ಮಾತ್ರದಿಂದ ಭೂತ ಪ್ರೇತ ಪಿಶಾಚಿ ಬೇತಾಳಗಳನ್ನು ಹೆದರಿಸಿ ಮೋಡಿಸುವಂಥಾಕೆ.. ರೋಗ ರುಜಿನಗಳಿಗಾತೀತೆಯಾಗಿ, ಮ್ರುತ್ತುಂಜಯೆಯಾಗಿ ಬದುಕುತ್ತಿರುವಂಥಾಕೆ.. ತನ್ನೆದೆಯೊಳಗ ಹತ್ತಾರು ರಣರಂಗಗಳನ್ನು ಹುಟ್ಟಿದಾರಾಭ್ಯ ಪೋಷಿಸಿಕೊಂಡು ಬರುತ್ತಿರುವಂಥಾಕೆ.. ಹ್ಹಾ.. ಹ್ಹಾ.. ಜಗಲೂರೆವ್ವ.. ನೀನೇ ಕಣ ನಮ್ಮವ್ವನೇ, ಕುಂಪಣಿ ಸರಕಾರಕ್ಕೆ ಸರಿಯಾದ ಹುದ್ದರಿಯು.. ಹಿರೀಕರು ಸಡನ್ನಂತ ಯದ್ದದ್ದಾಗಲೀ, ಕುಂಡಿ ಅಡೀಲಿದ್ದ ವಲ್ಲಿಗಳನ್ನು ಕೊಡವಿ ತಮ್ಮ ತಮ್ಮ ಹೆಗಲ ಮ್ಯಾಲ ಯಿಳಿಬಿಟ್ಟುಕೊಂಡಿದ್ದಾಗಲೀ, ಕಂಕುಳೊಳಗ ಕೂಸಿಟ್ಟುಕೊಂಡು ವೂರೆಲ್ಲಾ
ಪುಟ:Aramane.pdf/೧೩೨
ಗೋಚರ