ತಮಗ ಆಹಾರವಾದರ ತಪ್ಪೇನು? ಯಂಬ ಅಪಾಯಕಾರಿ ನಿಲುವಿಗೆ ಬಂದುದನ್ನು ಹೇಳುತಾ ಹೋದರೆ...
ಅತ್ತ ಸಂಡೂರು, ಕಣಿವೆಹಳ್ಳಿ, ಯತ್ತಿನಹಟ್ಟಿ, ಗಬ್ಬಲಗುಂಡಿ, ಅಂತಾಪ್ರದಂಥ ಗ್ರಾಮ ಗಳನ್ನಾಳುತಲಿದ್ದ ಜಮೀಂದಾರರು ಸಂತರಸ್ತರನ್ನು ಹತ್ತದಿನಯ್ದು ರೂಪಾಯಿಗಳಿಗೆ ಖರೀದಿ ಮಾಡುತ್ತಿದ್ದುದನು ಹೇಳುತಾss ಹೋದರೆ..
ಅತ್ತ ಮೋರಿಂಗೆರೆ ಗ್ರಾಮದ ಹಿರೇವತನದಾರ ತಿರುಕಪ್ಪಗವುಡನೂ, ಯಲ್ಲಾಪುರ ಕೊರಚರಟ್ಟಿಯ ಚೋರಾಗ್ರೇಸರನೂ ಯದುರಾ ಬದುರಾ ಕೂತುಕೊಂಡು ವುಭಯಕುಶಲೋಪರಿ ಯಿಚಾರಿಸುತ್ತ ವುಂಬುತಲಿದ್ದುದನು, ಅದೇಯಿನ್ನುರುತುಮತಿಯಾಗಿದ್ದ ಗವುಡನ ಮಗಳು ಪಾರೊತಿಯು ಅವರೀರ್ವರಿಗೆ ಅಪ್ಯಾಯಮಾನವಾಗಿ ವುಣಬಡಿಸುತಲಿದ್ದುದನ್ನು ಹೇಳುತ್ತಾ ಹೋದರ...
ಅತ್ತ ಕುದುರೆಡವು ಪಟ್ಟಣದರಮನೆಯೊಳಗೆ ಅಂಜಣ ಹಾಕುವವರನ್ನು ತಾನಿದ್ದಲ್ಲಿಗೆ ಕರೆಯಿಸಿಕೊಂಡು ನೋಡಿರಪ್ಪಾ.. ನಾನು ಕೀರ್ತಿಸೇಸಳಾದ ಬಳಿಕ ಸಮಾದಿs ಕಟ್ಟಿಸಲಕ, ನನ್ನ ಕುರಿತು ಪುರಾಣ ಬರೆಸಲಕ, ಪುಣ್ಯತಿಥಿಗಳಂದು ಸಾವುರಾರು ಮಂದಿಗೆ ಅನ್ನಸಂತರ್ಪಣೆ ಮಾಡಿಸಲಕ ತುರ್ತಾಗಿ ಸಾಯಿರಾರು ಹೊನ್ನು ಬೇಕಾಗಯ್ತೆ.. ಯೇಳು ಕೊಪ್ಪರಿಗೆ ಚಿನ್ನವನ್ನು ನಮ್ಮ ಪುರ್ವಿಕರು ಸದರಿ ಅರಮನೆಯೊಳಗೋ, ವೂರ ಅಚ್ಚೇಕಡೇಲಿರೋ ರಣಮಹಲಿನೊಳಗೆಲ್ಲೋ ವೂತಿಟ್ಟಿರುವಂತೆ.. ಅದನು ನೀವು ನಿಮ್ಮ ತಂತ್ರಯಿದ್ಯೇವ ಖರಚುಮಾಡಿ ಹುಡುಕಿಸಿ ಕೊಡಬೇಕೆಂದು ಸಂತೆ ಹೊತ್ತಿಗೆ ಮೂರು ಮೊಳ ನೇಯುವ ಜಾಯಮಾನದ ರಾಜಮಾತೆ ಭಯ್ರಮಾಂಬೆಯು ತಾಕೀತು ಮಾಡುತಲಿದ್ದುದನ್ನು ಹೇಳುತ್ತ ಹೋದರ..
ಅದೇ ಪಟ್ಟಣದ ಯಿನ್ನೊಂದು ಮೂಲೆಯೊಳಗೆ ಪಟ್ಟಣದ ದಯವಸ್ತರು ವಲ್ಲೇ ವಲ್ಲೇಯಂಬ ರಾಗವನ್ನು ಹಾಡುತಲಿದ್ದ ಜಗಲೂರೆವ್ವಳನ್ನು ರಾಯಭಾರಕ್ಕೆ ಕಳುವಲು ತಲೆಕೆಳಗಾಗಿ ನಿಂತಿದ್ದನ್ನು ಹೇಳುತ್ತ ಹೋದರ...
ಅದೇ ಪಟ್ಟಣದ ಮತ್ತೊಂದು ಮೂಲೆಯಲ್ಲಿ ಸೂರನೆಂಬಬಿsದಾನವುಳ್ಳವನಾದ ಮಹಿಷನು ಮಿಚ್ಚೇರಿಯತ್ತ ಮುಖಮಾಡಿ ಹೊಯ್ಕ ಹೊಯ್ಕ ಯಂದು ವುದ್ದೇಸಯಿಟುಕೊಂಡು ಯಾಕೆ ಕೂಗುತ್ತಲಿದ್ದನೆಂಬುದನ್ನು ಹೇಳುತ್ತ ಹೋದರ..
ಅದೇ ಪಟ್ಟಣದ ಸೆರಗಿಗಂಟಿಕೊಂಡಂತಿದ್ದ ಚತುರ್ಮುಖೀ ಗುಡ್ಡಗಳ ಹಿಂದ