ವಿಷಯಕ್ಕೆ ಹೋಗು

ಪುಟ:Aramane.pdf/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾಡಿದರೆಂಬ ಕಾರಣಕ್ಕೆ ಬೆಕ್ಕುಗಳನ್ನೂ, ಕೊಕ್ಕೊಕ್ಕೋ ಯಂದು ಕೂಗಿ ಅಪಸವ್ಯ ಮಾಡಿದರೆಂಬ ಕಾರಣಕ್ಕೆ ಕೋಳಿಗಳನ್ನೂ ಬಚ್ಚಿಡುತ್ತಿದ್ದುದೋ.. ತಮ ತಮ್ಮ ಹುಡುಗರುಪ್ಪಡಿಯ ಸಿಂಬಳ ಗೊಣ್ಣಿಯನ್ನು ತಾಯಂದಿರು ವರೆಸುತ್ತಿದ್ದುದೋ, ತಲೆಗೂದಲನ್ನು ವಪ್ಪಮೋರಣ ಮಾಡುತ್ತಿದ್ದುದೋ.. ಅಳ್ಳೋಗಬಾರದೆಂದೂ, ಯದೆಯನ್ನು ಕಲ್ಲು ಮಾಡಿಕೊಂಡಿರಬೇಕೆಂದೂ ಧಯರ್ಯ ತುಂಬುತ್ತಿದ್ದುದೋ.. ತಮ ತಮ್ಮ ಮನೆ ಅಂಗಳದಲ್ಲಿ ಕಸ ಗುಡಿಸಿ ಸೆಳ್ಳೊಡೆದು ರಂಗವಲ್ಲಿ ಹಾಕುತ್ತಿದ್ದುದೋ.. ಮುಪ್ಪಾನು ಮುದುಕರಿಗೆ ಮನೆ ಬಿಟ್ಟು ಹೊಂಡಬ್ಯಾಡಿರೆಂದು ದಯನಾಸ ಪಡುತ್ತಿದ್ದುದೋ..

ಕುಂಪಣಿ ಸಾಹೇಬ ಪತ್ನಿ ಸಮೇತ ಕುದುರೆಡವಿಗೆ ಆಗಮನ ಮಾಡಲಿರುವನೆಂಬ ಸಂಗತಿ ಯಾವ ಮಾದರಿಯಲ್ಲೋ ಅಕ್ಕಪಕ್ಕದ ದೇಸಗಳಾದ ಗುಂಡುಮುಳುಗು, ಕಾನಾಮಡುಗು, ಕುಮತಿ, ವಟ್ಟಮ್ನಳ್ಳಿಗಳಿಗೆಲ್ಲಾ ಹಬ್ಬಿಬಿಟ್ಟಿತ್ತು.. ಹ್ಹಾ ಹ್ಹಾ.. ಸಮುದ್ರಗಳನ್ನು ಕಂಡುಂಡವರು.. ತಿಂಗಳು ಪರ್ಯಂತರ ಸಮುದ್ರಗಳೊಳಗ ಯಾನ ಮಾಡಿರೋರು.. ಗಂಧರ್ವಲೋಕದ ಆಜುಬಾಜಲ್ಲಿ ರೋರು ಫಲಾನ ಪಟ್ಟಣಕ್ಕ ಬರುತ್ತಿರುವರೆಂದ ಮ್ಯಾಲ ತಾವ್ಯಾಕ ಅವರನ್ನು ನೋಡಿ ತಮ ತಮ್ಮ ಕಣ್ಣುಗಳನು ಪಾವನಗೊಳಿಸಿಕೊಳ್ಳಬಾರದೆಂಬ ಯಿಚ್ಚೆಯಿಂದ ಗಂಡೂ, ಹೆಣ್ಣೂ, ಮಕ್ಕಳು ಮರಿ ಕಟ್ಟಿಕೊಂಡು ಸರ್ರನೆ ಯದ್ದು ಬಿರ್ರನೆ ಹೊಂಟು ಬಂದ ಪರಿಣಾಮವಾಗಿ... ಸಿವ ಸಿವಾss....

ಆ ತುದಿಯಲ್ಲಿ ಬಡಗಣ ದಿಕ್ಕು ಕೆಂಧೂಳಿನ ಆಭರಣ ಮುಡಕೊಂಡದ್ದು ತಡವಾಗಲಿಲ್ಲ.. ಧೂಳಿನೊಳಗ ಸಾರೋಟು ಪವ್ವನೆ ಮೂಡಿದ್ದು ತಡವಾಗಲಿಲ್ಲ.. ಕುದುರೆಗಳ ಖುರಪುಟಗಳ ಸದ್ದು ಮ್ರುದಂಗದೋಪಾದಿಯಲ್ಲಿ ನುಡಿಯಲಕ ಹತ್ತಿದ್ದು ತಡ ಆಗಲಿಲ್ಲ.. ಹಾಯ್.. ನಮ್ಮಪ್ಪನೇ.. ಹಾಯ್ ನಮ್ಮವ್ವನೇ.. ಯೇಟು ಕೆಂಪಾನುಕೆಂಪಗದೀರಲ್ಲ.. ನಿಮ್ಮ ಮಯ್ಯಿ ಮ್ಯಾಲ ತೊಗಲಯ್ತೋ ಯಿಲ್ಲವಾ ಯಂದವರಿವರು ವುದ್ಗರಿಸೂತ ಬೊಟ್ಟುಗಳನ್ನು ಮೂಗಿನಮ್ಯಾಲ ಯಿಟುಕೊಂಡಿದ್ದು ತಡವಾಗಲಿಲ್ಲ.. ಅವರಿವರು ಆರತಿ ಬೆಳಗಿದ್ದಾಗಲೀ.. ಕಾಲಿಗೆ ನೀರು ಸುರುವಿದ್ದಾಗಲೀ, ಯಪ್ಪಾ ನೀನು ಬಲಗಾಲಿಟ್ಟು ಪುರ ಪ್ರವೇಶ ಮಾಡು, ಯವ್ವಾ ನೀನು ಹೆಣುಮಗಳದಿ, ಯಡಗಾಲಿಟ್ಟು ಪುರಪ್ರವೇಶ ಮಾಡು ಯಂದದ್ದು ತಡವಾಗಲಿಲ್ಲ..

ಯಡ್ಡವರ್ಡು ಬೆದರುಬೊಂಬೆಯಂತೆಯೂ

ಜೆನ್ನಿಫರ್ರುಹೆತ್ತ ತಾಯಿಯಂತೆಯೂ....