ವಿಷಯಕ್ಕೆ ಹೋಗು

ಪುಟ:Aramane.pdf/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಜಮಾತೆ ಭಯ್ರಮಾಂಬೆಯು ಆ ದಂಪತಿಗಳೀರ್ವರನ್ನು ಪರಾಧೀನ ಅರಮನೆಗೆ ಕರೆದೊಯ್ದು ಸತ್ಕರಿಸುತ್ತ ತನಗ ವಾರಸತ್ವರೀತ್ಯಾ ಸಲ್ಲಬೇಕಾದ ಚರಾಸ್ತಿ ಕೊಡಬೇಕೆಂದೂ.. ತನಗ ಪಿಂಚಣಿ ಗೊತ್ತುಮಾಡಿದ್ದಲ್ಲಿ ಯಿಹಲೋಕವನ್ನು ತ್ರಿಕರಣಪುರ್ವಕವಾಗಿ ತ್ಯಜಿಸುವುದಾಗಿಯೂ ಅರಕೆ ಮಾಡಿಕೊಳ್ಳುತ್ತಿರುವಾಗ್ಗೆ, ಜೆನ್ನಿಫರ್ರು, ಆ ಅರಮನೆಯೊಳಗೆ ಅಡ್ಡಾಡುತ ಯಿಂಗಲೆಂಡಿನ ಬಂಕಿಂಗ್ ಹ್ಯಾಮ್ ಅರಮನೆಯನ್ನು ತುಲನ ಮಾಡುತ ಯಿದ್ದಳು. ಅದು ಯತ್ತ? ಯಿದು ಯತ್ತ? ರೋಮ ರಹಿತ ಕಾಟಯ್ಯನಾಯಕನು ಆಕೆಯನ್ನು ಜಾಲಂದರದ ಕಿಂಡಿಯೊಳಗ ನೋಡುತ್ತಿರದೆ ಯಿರಲಿಲ್ಲ..

  • * * *

ಅತ್ತ ಬಳ್ಳಾರಿಯೊಳಗ ವಸ್ತಿ ಮಾಡಿರ್ದ ಮನ್ರೋ ಸಾಹೇಬನು ಮುಂದ ಮುಂದ, ಮ್ಯಾಕ ಸಾಹೇಬನು ಹಿಂದ ಹಿಂದ.. ವಾಸ್ತು ರೀತ್ಯಾ ಯೀಶಾನ್ಯಬಿsಮುಖ ಬಾಗಿಲನ್ನು ಹೊಂದಿದ್ದ ಆ ಕಾರಾಗ್ರುಹವು ಕಲೆಟ್ಟರ ಸಾಹೇಬನ ಕನಸಿನ ಕೂಸು. ಕುಂಪಣಿ ಸರಕಾರದ ಪ್ರತಿಷೆವಿಯ ಲಾಂಛನ. ನೋಡಿದೊಡನೆ ಯಂಥವರೂ ಕುಂಪಣಿ ಸರಕಾರದ ಸ್ವಾಮಿತ್ವವನ್ನು ನೋಟ ಮಾತ್ರದಿಂದ ವಪ್ಪಿಕೊಂಡುಬಿಡಬೇಕು. ಅಂಥ ಕಟ್ಟಡವು.. ಮುಂದೆ ಬಂಧನಕ್ಕೊಳಗಾಗಲಿರುವ ಗಡೇಕಲ್ಲು ಭೀಮಲಿಂಗೇಸ್ವರನ ನಿಜಭಕುತನಾದ ಬೊಬ್ಬಿಲಿ ನಾಗಿರೆಡ್ಡಿಯ ವಝಿಯನ್ನು ಸದರಿ ಕಟ್ಟಡವು ತಡಕಂತದಾ ಯಂಬ ಪ್ರಸ್ನೆಯು.. ಹಲ್ಲಿ ವೂಸರುವಳ್ಳಿ ಜಾಯಮಾನದ ಯಲ್ಲಾಪ್ರಕೊರಚರಟ್ಟಿಯ ಚೋರರನ್ನು ಸದರಿ ಕಟ್ಟಡವು ತಡಕಂತದಾ ಯಂಬ ಯಿನ್ನೊಂದು ಪ್ರಸ್ನೆಯು... ಹಾಲಿ ಕಟ್ಟಡದೊಳಗ ಶಿಕ್ಷೆಯು ಅನುಭವ ವೇದ್ಯವಾಗುತ್ತಿರುವುದೋ ಯಿಲ್ಲಮೋ ಯಂಬ ಮಗುದೊಂದು ಪ್ರಸ್ನೆಯು, ಯಿಂಥತ್ತಿಪ್ಪತ್ತು ಪ್ರಸ್ನೆ, ಅನುಮಾನಗಳನ್ನು ಹೆಜ್ಜೆಗೊಂದೊಂದರಂತೆ ಧರಿಸುತ್ತ ಅಷ್ಟು ದೂರದಲ್ಲಿದ್ದ ಕಾರಾಗ್ರುಹವನ್ನು ಅಲುಪ ಸೊಲುಪ ಆತಂಕದಿಂದಲೇ ಪ್ರವೇಶ ಮಾಡಿದನು. ಯಿಯಿಧ ಅಪರಾಧಗಳಂಗಯ್ದು ಶಿಕ್ಷೆ ಅನುಭವ ಮಾಡುತಲಿದ್ದ ಖಯ್ದಿಗಳ ಯೋಗ ಕ್ಷೇಮವನ್ನು ಯಿಚಾರಿಸಿದನು. ಹಂಗೆ ಹೋಗುತಾ ಹೋಗುತಾ ಬೊಬ್ಬಿಲನಾಗಿರೆಡ್ಡಿಯ ಬಲಗಯ್ಯಿ ಬಂಟನಾದ ವಲಸಾರೆಡ್ಡಿಯನ್ನು ತಲುಪಿ ಯೀಗಲಾದರೂ ಪ್ರಾಣವುಳುಸಿಕೋ ಯಂದು ಕೇಳಲಾಗಿ ಆ ಗಿಡ್ಡಾಕ್ರುತಿಯು ‘ಪ್ರಾಣ ಕೊಡುವೆನೇ ವಿನಾ.. ನಮ್ಮ ದೇವರ ಗುಟ್ಟು ಬಿಟ್ಟುಕೊಡುವುದಿಲ್ಲ’ ಯಂದು ಖಡಾಖಂಡಿತವಾಗಿ ಹೇಳಿದನು. ಅದಕ್ಕಿದ್ದು ಕಲೆಟ್ಟರು ಸಾಹೇಬನು