ಮೊದಲಾದವರು ಕಸುವು ಕಿತ್ತು ಹಲಿಗೆ ಭಾರಿಸಲಾರಂಬಿsಸಿದ್ದೇನು? ವುರುಪÀ, ಕುರುಪ, ಯರಪರೆಂಬ ತ್ರಿವಳಿ ಸೋದರರು ಕಸುವು ಕಿತ್ತು ಕಹಳೆ ವೂದಿದುದೇನು? ಸವುಡ, ಕಿವುಡ, ಮರಿಯ, ಕರಿಯ, ಬರೆಯ, ಬಳಪರೇ ಮೊದಲಾದ bsÀಲವಾದೇರು ಸೊನಾಯ ವೂದಿದುದೇನು? ಯೇತಲ, ಪೀತಲ, ಅಯ್ಯಲ, ಬಯ್ಯಲರೇ ಮೊದಲಾದವರು ರುಮುರುಮು ರುಮ್ಮಿ ಭಾರಿಸಿದುದೇನು? ತಡಿಕೆವ್ವ ಮಡಕೆವ್ವ, ಕೆಸರವ್ವ, ತಂಗಳವ್ವ, ತಿಂಗಳವ್ವಂದಿರೇ ಮೊದಲಾದ ಜೋಗತೇರು ತಮ ತಮ್ಮ ಬಗಲ ಚವುಡಿಕೆಗಳನ್ನು ಭಾರಿಸೂತ ಸಿಪಾಯಿಗಳು “ಯೇಳಯ್ಯಾ ಮೋಬಯ್ಯ ಯೇಟೂತ್ತು ಸುಖನಿದ್ದೆ” ಯಂಬ ಛಂದನೆಯ ಹಾಡುಗಳನ ಹಾಡಿದುದೇನು? ನಿಂಬೆಹಣ್ಣಿನ ಪುಜೆ, ಬನ್ನಿ, ಚಿಲುವ, ವುತ್ರಾಣಿ ಪುಜೆಗಳನು ವಂದರ ಮ್ಯಾಲೊಂದರಂತೆ ಮಾಡಿದುದೇನು? ಕಣ್ಣುಗಳಿಂದ ಹನಿ ಹನಿ ವಕ್ರಾಣಿ ತುಂಬಿಸಿದುದೇನು? ಮಲಕ್ಕೊಂಡವರನ ಯಬ್ಬಿಸಬಹುದು ಯಚ್ಚರಯಿರೋರನ ಯಬ್ಬಿಸಲಕಾತದೇನು?...
ಯಿವರು ಯಬ್ಬಿಸಲಕಾದೀತಾ? ಅವಯ್ಯನು ಯದ್ದೇಳಲಕಾದೀತಾ? ಮಂದಿಯಂಬುವ ಮಂದಿ ತಮ ತಮ್ಮ ಮುಖಗಳ ಮ್ಯಾಲ ಚಿಂತಿಯೆಂಬ ಹುವ್ವ ಮುಡಕೊಂಡಿತು.
ಕುದುರೆಡವ ಮ್ಯಾಲ ಮೋಬಯ್ಯ ಮುನುಸುಕೊಂಡವನೋ, ಮೋಬಯ್ಯನ ಸರೀರವೇ ಮುನುಸುಕೊಂಡಯ್ತೋ, ಸರೀರದೊಳಗ ವಸ್ತಿ ಮಾಡಿರುವ ಆದಿ ಸಗುತಿ ಮುನುಸು ಕೊಂಡವಳೋ, ತಮ್ಮದು ಯೇನು ಕರುಮ ಯಿದ್ದೀತು? ತಾಯಿಯ ಮುನುಸು ಬಗೆ ಹರಿಯಲಕಂದರ ತಾವೇನು ಮಾಡಬೇಕು? ಬಲಿ ಬಗಸಿದಲ್ಲಿ ತಾವು ತಮ ತಮ್ಮ ಸರೀರಗಳನ ಅಡ್ಡಡ್ಡ, ವುದ್ದುದ್ದ ಕುಯ್ದು ಬಲಿ ಕೊಡತೇವಿ ತಾಯೇ.. ಅಂದರೂ ಯಿವಯ್ಯನ ರುದಯ ಕರಗವಲ್ಲದಲ್ಲಾ.. ಅಯ್ಯೋ ತಾಯಿ ತಾವೇನು ಮಾಡಬೇಕೆಂಬುದನ್ನಾರ ಅಪ್ಪಣೆ ಕೊಡುವಲ್ಲಿಯಲ್ಲಾ.. ಸಾವುರ ಸಂಖೇಲಿದ್ದ ಮಂದಿ ವಂದು ಬಾಯಾಗಿ ಗಲಗಲಾ ಅನಕಂತಿರುವಾಗ್ಗೆ, ಅದರ ದುಕ್ಕದ ಕಡಲು ವುಕ್ಕಿ ಸುತ್ತನ್ನಾಕಡೇಕ ಹರಿತಿರುವಾಗ್ಗೆ ತ್ರುಣ ಲತೆಗಳು ಬಾಡಿದವು, ಹುವ್ವುಗಳು ಬಾಡಿ ಬಸವಳಿದವು, ಯಲ್ಲಿ ಸದರಿ ಪ್ರದೇಶ ಬರತಗುಲಿ ಬೆಂಗಾಡಾಗುವುದೋ ಯಂದು ಭೂಮ್ತಾಯಿ ಹವ್ವಾರಿದಳು.
“ಯದ್ದೇಳು ಮಾರಾಯ.. ಯದ್ದು ಹೊಂಡೋ ಮಾರಾಯ.. ನಮ ಜಗೇವನ ಕಬ್ಜಾ ಮಾಡಿಕೊಂಡೇಸು ದಿನವಾದುವು, ಯೇನು ಕಥಿ?” ಎಂದು