ಸದರಿ ಪಟ್ಟಣದ ಯಿನ್ನೊಂದು ಮೂಲೆಯಲ್ಲಿದ್ದ ತಿಲ್ಲಾನ ತಾಯಕ್ಕ ಅಂತೂ ತನ್ನ ಮಗಳು ಚಿನ್ನಾಸಾನಿಯನ್ನು ಸೊರತಿ ಯಾಮೋಹದಿಂದ ಯಿಮುಕ್ತಿಗೊಳಿಸುವಲ್ಲಿ ತಕ್ಕಮಟ್ಟಿನ ಯಶಸ್ಸು ಸಾದಿsಸಿದ್ದಳೆಂದೇ ಹೇಳಬೌದು. ತನ್ನ ಕುಂಡಿಯ ಮ್ಯಾಲ ಬದನೇಕಾಯಿ ಗಡುತರದ ಯರಡು ಕುರುಗಳೆದ್ದಿದ್ದ ಕಾರಣಕ್ಕೆ ಬೋರಲು ಮಲಗಿಕೊಂಡೇ ಬುಗಡಿ ನೀಲಕಂಠಪ್ಪನು ಆಕೆಯ ಬುದ್ಧಿಮತ್ತೆಯನ್ನು ಮನಸೇಚ್ಫೆ ಕೊಂಡಾಡಿದನು. ಪಾರಪಂಚಿಕ ಯಾಮೋಹದಿಂದ ಪುಟ್ಟಂ ಪುರ್ತಿ ದೂರ ವುಳಿದಲ್ಲಿ, ಮಗಳು ಮುಂದೆ ಮದುವೆಯಾಗದಿದ್ದಲ್ಲೇನು ಗತಿ? ಮದುವೆಯಾಗಿ ಗಂಡನನ್ನು ಸೇರದಿದ್ದಲ್ಲೇನು ಗತಿ? ಗಂಡನ ಸೇರಿ ಮಕ್ಕಳ ತಾಯಿಯಾಗದಿದ್ದಲ್ಲೇನು ಗತಿ? ಅಪುತ್ರಸ್ಯಗತಿರ್ನಾಸ್ತಿ.. ಯಂದು ಮುಂತಾಗಿ ವಾದ ಮಂಡನೆ ಮಾಡಿದ ಅವಯ್ಯಗ ತಾಯಕ್ಕ ಹೇಳುತ್ತಾಳೆ, ತಮ್ಮ ಮನೆಯಲ್ಲಿ ಯೀಗಾಗಲೆ ಯಿರುವ ಕಳಪೆ ಗುಣಮಟ್ಟದ ಕನ್ನಡಿಗಳನ್ನು ಬದಲಾಯಿಸಿ ವುತ್ತಮ ದರ್ಜೆಯ ಕನ್ನಡಿಗಳನ್ನು ಅಮರಿಸುವುದೆಂದು....
ಯಿತ್ತ ಕುದುರೆಡವು ಪಟ್ಟಣದ ಸಿಡೇಗಲ್ಲ ಅಗಸೆ ಬಾಕಲಾಚ್ಚೇ ಕಡೇಕ ಯಿದ್ದ ಕರುಗಲ್ಲ ಜಗೇವಳಗ ಮೋಬಂiÀÄ್ಯನು ಪಲ್ಲಾಕಿಯಿಂದ ಜಿಗಿದಿಳಿದು ಕೂತುಬಿಟ್ಟಿದ್ದನು. ಜಪ್ಪಯ್ಯಾ ಅಂದರೂ ಕರಗಲ್ಲೀಚ್ಚೆ ಕಡೇಕ ವಂದು ಹೆಜ್ಜೇನ ತೆಗೆದಿಡಲಿಲ್ಲ. ಯವ್ವಾ... ತಾಯೇ ಯಂದು ಮಂದಿ ಮನಾರ ಬೇಡಿಕಂತು.. ಆದರೆ ಅವಯ್ಯನ ರುದಯ ಕರಗಲಿಲ್ಲ.. ಆವಯ್ಯನ ರಾಯಭಾರಿ ಹಾಂಗಿದ್ದ ಗಂಟಲಯ್ಯನು “ಸುಮಸುಮಕ ತಾಯಿ ತನ್ನ ಪಾದವನ್ನು ವೂರೊಳೀಕ್ಕೆ ಯಿಡೂಂದರ ಹೆಂಗ ಯಿಟ್ಟಾಳು. ಆಕೆ ಯೇನು ನಮ ನಿಮ್ಮಂಗ ಮಾಮೂಲು ಮನುಸ್ಯೋಳೇನು? ಭವುತಿಕ ರೂಪ ಅಯಿತಂದ ಮಾತ್ರಕ್ಕೆ ಅದೇನು ನಸ್ವರ ಜಾತಿಯ ಮಾಮೂಲ ಸರೀರವs ಯಿಂದ್ಯಾ ಪರವುತದ ಸಾಲೇ ಅದೆಂದು ತಿಳಕೋರಿ.. ಅದರೊಳಗೆ ವಸ್ತಿ ಮಾಡಿರುವಾಕಿ ಯಿಂದ್ಯಾವಾಸಿನಿ ಯಂದೇ ತಿಳಕೋರಿ.. ಆಕಿ ಕೋಟಿ ಕಿವಿಗಳಿಂದ ನೋಡಾವಳss ಆಕೆ ಕೋಟಿ ಕಣ್ಣುಗಳಿಂದ ಕೇಳಾವಳss ಆ ಮಾತಾಯಿ ಕರುಗಲ್ಲ ಮಟಾ ಬಿಜಯಂಗಯ್ದಿರೋದೆ ಪುಣ್ಯ ಅಂತ ತಿಳಕೋರಿ.. ಆಕೆ ನಮ ನಿಮ್ಮ ಕಣ್ಣಳತೆ, ಕೂಗಳತೆಯೊಳಗ ವಸ್ತಿ ಮಾಡಿರೋದೇ ಪಟ್ಟಣದ ಸುಕ್ರುತ ಅಂಥ ತಿಳಕೋರಿ.. ತಾಯೀದು ಸುಚುಮ ಪ್ರಕ್ರುತಿಯಿರತದ.. ಯೇನಾರ ಅಂದಾಡಿ ಮಾತಿನ ಮಯ್ಲಿಗಿ ಮಾಡಿದಿರಂದರ ಸುಟ್ಟು ಭಸುಮಾತೀರಿ...’’ ಯಂದನಕಂತ ಅವರನ್ನೆಲ್ಲ ಭಯದ ಮಿಣಿಯಿಂದ