ವಿಷಯಕ್ಕೆ ಹೋಗು

ಪುಟ:Aramane.pdf/೨೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಯರಾಗ್ಯ ಯಂಬುದನು ಸಾಬೀತುಪಡಿಸಿದೊಡನೆ.. ಅಯಿವತ್ತರ ಸರೀರದೊಳಗಿಂದ ಯಿಪ್ಪತ್ತರ ಹರೆಯನ್ನು ಹೆಕ್ಕಿ ತೆಗೆಯುವುದು ತನಗಾವ ಲೆಕ್ಕ ಯಂಬುದನು ಸಾಬೀತುಪಡಿಸಿದೊಡನೆ.. “ನಮಸ್ಕಾರ” ಯಂಬ ನಲ್ನುಡಿಯಿಂದ ಹೆಡಮುರುಗೆ ಕಟ್ಟಿದೊಡನೆ... ಸಂಭವಿಸಲಿದ್ದ ಮೂರ್ಫೆಯಿಂದ ಚೇತರಿಸಿಕೊಂಡವನಾದ ರಾಯ, ನಭೂತೋ ನಭವಿಷ್ಯತಿ ಯಂಬ ಮುಖಬೆಳೆಯುಳ್ಳ ಸವುಂದರ್ಯವನ್ನು ಕಣ್ಣಾರೆ ನೋಡಿ ದಂಗಾದ ರಾಯ. ಯಲ್ಲಿ ತನ್ನೊಳಗಿನ ಯೇಕ ಪತ್ನಿತ್ವದ ನಿಷೆವಿ ದಹನಗೊಂಡಿತೋ? ಮೂರನೇ ತಿಂಗಳÀಲ್ಲೂ ತವರು ಮನೆಯೊಳಗುಳಿದಿರುವ ತ್ರಿಕಾಲಗ್ನಾನಿಣಿಯಾದ ತನ್ನ ಪತ್ನಿಗೆ ತಾನು ಅಪರಿಮಿತ ಸವುಂದರ್ಯರಾಸಿಯದುರು ವುಪಸ್ಥಿತಿನಿರುವ ಸಂಗತಿ ತಿಳಿದರೇನು ಗತಿ ಯಂದರಗಳಿಗೆ ಕಂಗಾಲಾದ ರಾಯ ಬೇರೆ ದಾರಿಯಿಲ್ಲದೆ..

ಮಾಣಿಕ್ಯ ವೀಣಾ ಮುಪಲಾಸ ಯಂತೀಂss

ಮದಾಲಸಾಂ ಮಂಜುಳ ವಾಗ್ವಿಲಾಸಂsss

ಮಹೇಂದ್ರನೀಲದ್ಯುತಿ ಕೋಮಲಾಂಗೀಂss

ಮಾತಂಗ ಕನ್ಯಾ ಮನಸಾಸ್ಮರಾಮಿss

ಚತುರ್ಭುಜೇ ಚಂದ್ರಕಳಾವತಂಸೇss

ಕುಚೋನ್ನತೇ ಕುಂಕುಮರಾಗ ಶೋಣೇsss

ಪುಂಡ್ರೇಷು ಪಾಶಾಂಕುಶ ಪುಷ್ಪ ಬಾಣ ಹಸ್ತೇss

ನಮಸ್ತೇ ಜಗದೇಕ ಮಾತss

ಮಾತಾಮರಕತ ಶಾಮಾ ಮಾತಂಗೀ ಮಧುಶಾಲಿನೀsss

ಕುರ್ಯಾತ್ಕಟಾಕ್ಷಂ ಕಲ್ಯಾಣೀs ಕದಂಬ ವನವಾಸಿನೀಂ ಜಯ ಮಾತಂಗ ತನಯೇsss

ಯಂದು ರಾಗದಿಂದ ಹಾಡಿಯಾದ ಮ್ಯಾಲ ‘‘ತಾಯಾಮ್ಮಾ.. ಮಾ ಲಕ್ಷ್ಮಿದೇವಿಯೇ ನಿನ್ನೀ ಮಗಳ ಸರೀರದೊಳಗ ನೆಲೆಸಿರುವಳು.. ಯೀಕೆಯ ಸವುಂದರ್ಯ ರುಥಾ ಆಗುವುದು ಬೇಡ.. ನ್ರುತ್ಯ ಕಲಿಸಿ ಖ್ಯಾತ ನ್ರುತ್ಯೆಕಲಾಯಿದೆಯನ್ನಾಗಿ ಮಾಡು” ಯಂದು ಆಸೀರುವಚನ ಭಂಗಿಯಲ್ಲಿ ನುಡಿದನು. ಅಪುರ್ವ ಲಾವಣ್ಯವತಿಯಾದ ಯೀಕೆಯನ್ನು ಯಡ್ಡವರ್ಡನ ದ್ವಾರ ವಂದು ಸುಗ್ರೀವಾಗ್ನೆಯನ್ನು ಹೊಂಡಿಸಿ ಮುಟ್ಟುಗೋಲು ಹಾಕಿಕೊಂಡು