ವಿಷಯಕ್ಕೆ ಹೋಗು

ಪುಟ:Aramane.pdf/೨೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಟಾಂ.. ಟಾಂ..

ಬಸುರಾಗಬಾರದು.. ಹಡವಣಿಗೆಯಾಗಬಾರದು ಟಾಂ.. ಟಾಂ..

ವುಪ್ಪರಿಗೆ ಯೇರಬಾರದು.. ಮಂಚದ ಮ್ಯಾಲ ಮಲಗಬಾರದು ಟಾಂ.. ಟಾಂ..

ಹಾಸಿಗೆ ಪತ್ಯೇವು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಟಾಂ.. ಟಾಂ..

ಚಾಸ್ಟಿಕುವ್ವಾಡ ಮಾಡಬಾರದು, ಬಾಯಿಯಿಂದ ಮೋಕು ಮಾತು ಆಡಬಾರದು ಟಾಂ.. ಟಾಂ..

ಮಯ್ಗೆ ಯರಕಂತಿರಬೇಕು ಟಾಂ.. ಟಾಂ...

ವುತ್ರಾಣಿ ಕಡ್ಡಿಯಿಂದ ದಂತ ಮಜ್ಜಣ ಮಾಡುತಿರಬೇಕು ಟಾಂ.. ಟಾಂ..

ವುಂಬುವ ಬಾನ ತಾಯ ಪರಸಾದ ಯಂದು ತಿಳಿಯಬೇಕು.. ಕುಡಿಯೋ ನೀರು ತಾಯಿಯ ತೀರ್ಥ ಯಂದು ತಿಳಿಯಬೇಕು ಟಾಂ.. ಟಾಂ..

ಜಾವ ಜಾವಕ್ಕೊಂದೊಂದು ಸಲ ತಾಯಿಯ ನಾಮಸ್ಮರಣೆ ಮಾಡಬೇಕು ಟಾಂ.. ಟಾಂ..

ಅವರು ಹಾಕಿದ ಟಾಮು ಟಾಮು ವಂದಾದರ, ಅದು ಮಂದಿಯ ಕಿವಿಯೊಳಗ ಬಿದ್ದು ಪಡಕಂಡ ರೂಪ ವಂದೇ ಯರಡೇ. ಆಸ್ತೀಕ ಮಂದಿ ವಂಧಮಾಡಲಕೊಂದು ಮಯ್ಲು.. ಯರಡs ಮಾಡಲಕ ಯರಡು ಮಯ್ಲು ದೂರ ಹೋಗಲಾರಂಭಿಸಿದರು ಮಂದಿ.. ಯಲ್ಡು ತಂಬಿಗೆ ನೀರು ಕುಡಿಯೋರು ವಂದು ತಂಬಿಗೆ ನೀರು ಕುಡಿಯಲಾರಂಬಿsಸಿದರು ಮಂದಿ.. ತಮ್ಮನ್ನು ಯೇರದವರಿಲ್ಲದೆ ವುಪ್ಪರಿಗೆಗಳು ಬಿಕೋ ಅಂಬತೊಡಗಿದವು. ಮಂಚ ವರಸುಗಳು ತಮ್ಮ ಮ್ಯಾಲ ಮಲಗುವವರಿಲ್ಲದೆ ಮೂಲೆಗುಂಪಾದವು.. ಗಂಡ ಹೆಂಡಿರು ಪರಸ್ಪರ ಬೆನ್ನು ಮಾಡಿ ಮಲಗಲಾರಂಬಿsಸಿದರು.. ಚಾಸ್ಟಿ ಕುವ್ವಾಡಗಳನ್ನು ತಮ ತಮ್ಮ ಗಂಟಲುಗಳಿಂದ ವಕ್ಕಲೆಬ್ಬಿಸಿದರು ಮಂದಿ.. ಬಯ್ಗಳಿಂದ ದೂರವುಳಿದರು ಮಂದಿ.. ಸಾಂಬವಿ ಯಂಬ ಸಬುಧವು ಪಟ್ಟಣದ ಅಣುರೇಣು ತ್ರುಣಕಾಷವಿಗಳಲ್ಲಿ ರಸದುಂಬಿಕೊಂಡಿತು.. ಆ ಮಹಿಮಾನ್ವಿತ ಸಬುಧವು ಚಲಾವಣೆಗೊಳ್ಳುತ್ತ ತನಗ ತಾನೇ ರೂಢಿಗೊಂಡಿತು.. ಅರಮನೆಯೂ ಅಳುಕಿನಿಂದಲೇ ಟಾಂ ಟಾಮನ್ನು ಜಾರಿ ತಾರದೆ ಯಿರಲಿಲ್ಲ.. ಅದರ ಬೇಯಿನಮರದ ಬುಡದಲ್ಲಿ ಗುಡುಲು ಹಾಕಿಕೊಂಡು ವಾಸಿಸುತಲಿದ್ದ ಜಗಲೂರೆವ್ವ ಸರ್ರೆಸರ್ರೆ....