ವಿಷಯಕ್ಕೆ ಹೋಗು

ಪುಟ:Aramane.pdf/೨೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಡೆವವರಿಗೆ ಕಾಲಾಗುತಲಿದ್ದನು.. ಚೋಜಿಗದ ರೀತಿವಳಗss ಸಿವನೇ....

ದೇವಿ ಸಾಂಬವಿ ಹೊಳೆಗೆ ಬಿಜಯಂಗಯ್ಯಲಿರುವ ಸಂಗತಿ ಸುತ್ತೇಳೂ ಲೋಕಗಳೊಳಗ ಅಡಾವುಡೀನ ಯಬ್ಬಿಸಿದ್ದರ ಸಲುವಾಗಿ, ಬಂದವರನ್ನು ಬರ್ರಿಯಂಬುವ ಸಲುವಾಗಿ, ಹೋಗುವವರನ್ನು ಹೋಗಿ ಎಂಬುವ ಸಲುವಾಗಿ, ಯಾರ್ಯಾರಿಂದ ಯಾವ್ಯಾವ ಅನಾಹುತವಾಗುತ್ತದೆ ಯಂದು ಅರಿಯುವ ಸಲುವಾಗಿ, ಸರುವನ್ನೊಂದು ಯಿಗ್ನಗಳನ್ನು ಸಾಸ್ತರೋಕ್ತವಾಗಿ ನಿವಾರಣೆ ಮಾಡುವ ಸಲುವಾಗಿ, ದಿಗ್ಬಂಧನಗಳ ಜಗೇವುಗಳನ್ನು ಮುಂಗಡ ಪತ್ತೆ ಹಚ್ಚುವ ಸಲುವಾಗಿ, ಪುರುವಿಕನಾದ ಹಂಪಜ್ಜನು ಆಗಾಗ್ಗೆ ಧ್ಯಾನಸ್ಥನಾಗುತಲಿದ್ದುದು ಅನಿವಾರ್ಯವಾಗಿತ್ತು.. ಸದರಿ ಮಹಿಮಾನ್ವಿತ ಪಟ್ಟಣಕ್ಕ ಯೇರುಪಟ್ಟಿದ್ದ ಅಗೋಚರ ಹಾದಿಗಳು ಸಾವುರ ಸಾವುರ ಸಂಖೆಯಲಿದ್ದವಷ್ಟೆ.. ಸಣ್ಣ ಬಲಿಯಿಂದ ಹಿಡುದು ಮಾ ಬಲಿವರೆಗೆ ಯಾವತ್ತೂ ಫಲವನ್ನು ಗಬಕಾಯಿಸುವಲ್ಲಿ ಸಿದ್ದಹಸ್ತೆಯರೆನಿಸಿರುವ ಗ್ರಾಮದೇವತೆಗಳು ವಂದಾ.. ಯರಡಾs ಅವರು ಯಾರು ಯಾರಪ್ಪಾ ಅಂದರ ಮಡ್ರಳ್ಳಿ ಮಡ್ಡಮ್ಮ, ಚೆನ್ನಾಪ್ರದ ಚೆನ್ನಮ್ಮ, ಬಂiÀÄ್ನಳ್ಳಿ ಬಂiÀÄ್ಯಮ್ಮ, ವುರುಕುಂದಿಯ ವುರುಕುಂದೆಮ್ಮ, ವುದ್ದಾನಳ್ಳಿಯ ವುದ್ದಾನಮ್ಮ, ಮದ್ದಿಕೇರಿಯ ಮದ್ದಮ್ಮ, ಗೂಳ್ಯಾದ ಗೂಳಮ್ಮ, ಆಲೂರಿನ ಆರುಮೊಳದಮ್ಮ, ಮಯಸೂರಿನ ಮಯಸೂರಮ್ಮ, ಚಿಕ್ಕನಳ್ಳಿಯ ಚಿಕ್ಕಮ್ಮ, ಸಕಲೇಸಪುರದ ಸಕಲೇಸಮ್ಮ, ಬೇಕನಳ್ಳಿಯ ಬೇಕಾದಮ್ಮ, ಕೋಟ್ಯಾಳಿನ ಕೋಟೆಮ್ಮ, ಬೇಲೂರಿನ ಬೇಲೂರಮ್ಮ, ಶೆಟ್ಟಿಗ್ಗೆರೆಯ ಶೆಟ್ಟೆಮ್ಮ ಯಿವರೇ ಮೊದಲಾದ ಸತಸಹಸ್ರಗ್ರಾಮದೇವತೆಗಳು.. ಅವರಾರಿಗೆ ಯೇಕರಿಕೆ ಯಂಬುದುಂಟಾ? ದೇಕರಿಕೆ ಯಂಬುದುಂಟಾ? ಮರಗಳ ಪೊಟರೆ ಗುಡ್ಡಗಳ ಕಲ್ಲು ಸಂಧು, ಪಾಳು ಮನೆಯ ತೊಲೆ ಸಂಧು, ಅಷ್ಟೇ ಯಾಕ? ಕಂಡಕಂಡವರ ತುರುಬುಗಳೊಳಗ, ಹಲ್ಲು ಸಂಧುಗಳೊಳಗ, ಅಂಗಯ್ಯ ರೇಖೆಗಳೊಳಗ, ಅಂಗಾಲ ಬಿರುಕುಗಳೊಳಗ ಹಿಂಗ ಯಲ್ಲಂದರಲ್ಲಿ ವಾಸ ಮಾಡುತ್ತಿರುವ ಅವರಿಗೆ ವಂದು ಗುಡಿ ಯಂಬುದುಂಟಾ? ವಂದು ಮನೆ ಯಂಬುದುಂಟಾ? ವಂದು ಮಠ ಯಂಬುದುಂಟಾ? ವಂದು ಥಟಗು ರಗುತದ ಮ್ಯಾಲ, ವಂದು ಬಿಂದು ಬೆವರ ಮ್ಯಾಲ, ವಂದು ನೆನಪ ಮ್ಯಾಲ ಜೀವನ ಮಾಡುವಂಥ ಅವರಿಗೆ ಪರಸಾದ ಅಂದರೇನು ಗೊತ್ತು? ತೀರ್ಥ ಅಂದರೇನು ಗೊತ್ತು? ಬಿಸಿಲಂದರೇನು ಗೊತ್ತು? ಚಳಿ ಅಂದರೇನು ಗೊತ್ತು? ಮಳೆ ಅಂದರೇನು