ಅವಳೊಬ್ಬಳೇ ಅನುಬೋಸಬೇಕೆನಲೋ ಯಂದವು ಕೂಗಾಡುತ್ತಿರುವುದೇನು.. ಚೀರಾಡುತ್ತಿರುವುದೇನು ಲಂಚ ರುಷುವತ್ತು ಅಮಿಷ ವಡ್ಡುತ್ತಿರುವುದೇನು? ಆದರಾ ವಯ್ಯನು ನಿಷುವಿರವಾಗಿದ್ದನಂತೆ... ಯಾದೋ ವಂದು ಛುದ್ರದೇವತೆಯು ಯಾದೋ ಮಾದಿಯೊಳಗ ಪಟ್ಟಣವನ್ನು ಪ್ರವೇಸ ಮಾಡಿರುವುದೆಂಬ ಅನುಮಾನ ಬಂತಂತೆ.. ದ್ರುಸ್ಟಿಯನ್ನು ಮತ್ತಷ್ಟು ಬಿಗಿಗೊಳಿಸಿದನಂತೆ.. ಆದರದು ಅವನ ನೋಟದ ಚಿಮುಟಿಗೆ ಸಿಕ್ಕಲಿಲ್ಲವಂತೆ.. ಯಿತರೇ ನಾಕು ಯಿಂದ್ರಿಯಂಗಳ ಸವಲತ್ತು ಯಿದ್ದ ಆ ನೋಟವು “ಯಾರಭೇ ನೀನು.. ಯಾಕಬಂದಿ.. ನೋಡಂಗಾಗಯ್ತೆ.. ನಿನ್ನ ಮುಖವನ್ನಾದರೂ ವಂಚೂರು ತೋರುಸು” ಯಂದು ಜಬರದಸ್ತೀಲೆ ಕೇಳಿದ್ದಕ್ಕದು ಕೊಸರಾಡುತ ದೂರ ಸರಕಂತಂತೆ.. ಯಿದನೆಂಗಪ್ಪಾ ಹಿಡಿಯೋದು ಯಂದು ನೋಟವು ಬಗೆಬಗೆಯ ರೀತಿಯಲ್ಲಿ ಯತ್ನ ಪ್ರಯತ್ನಂಗಳ ಮಾಡಿ ರೋಸಿಗಂತಂತೆ.. ಅದು ಹಂಪಜ್ಜನಿದ್ದಲ್ಲಿಗೆ ಮರಳಿ “ಯಜಮಾನss ಅದು ಮಂತ್ರಗಾತಿ bsÀÄದ್ರದೇವತೆ ಯಿದ್ದಂಗಯಿತೆ.. ಹಿಡಿತಕ್ಕೆ.. ಮಾತಿಗೆ.. ಕಯಿಗೆ ಯಟಕುತ್ತಿಲ್ಲ... ಕಾಲಿಗೆ ತೊಡರುತ್ತಿಲ್ಲ” ಯಂದು ಅಸಹಾಯಕತೆಯಿಂದ ನುಡಿಯಿತಂತೆ, ಅದನ್ನು ಕೇಳಿ ಮುದೇತನು ಘಟ ಸರುಪದೊಳು ಕಂಪಿಸಿದನಂತೆ.. ನೆತ್ತರು ಕಲೆಸಿ ಮಣ್ಣಿಂದ ಹೆಣ್ಣು ಗೊಂಬೆಯನ್ನು ಮಾಡಿದನಂತೆ.. ಅಂಗಾತ ಮಲಗಿಸಿ ಮುಂದಕ ಯೇನು ಮಾಡಿದನಂತೆಂದರೆ ಸಿವಸಂಕರ ಮಾದೇವss
- * * *
ಅತ್ತ ಮನ್ರೋ ಸಾಹೇಬನು ನತದ್ರುಸ್ಟ ತೆರನೇಕಲ್ಲನ್ನು ಕಣ್ಣೊಳಗ ತುಂಬಿಕೊಂಡು ಅಡಿಗಡಿಗೊಂದೊಂದು ಸಲಕ ನಿಟ್ಟುಸುರು ಬಿಡುತ್ತ ‘‘ದೇವರೇ ನನ್ನನ್ನು ಕ್ಷಮಿಸು ಯಂದು ಜಾವಕ್ಕೊಂದೊಂದು ಸಲ ಪಾಪ ನಿವೇದನೆ ಮಾಡಿಕೊಳ್ಳುತ ಅಸ್ಪರಿ, ಹಲಗೇರಿ, ಚಿನ್ನೊತ್ತೂರು, ಪೆದ್ದೊತ್ತೂರು, ಗುಡೇಕಲ್ಲುಗಳನ್ನು ವಂದೊಂದಾಗಿ ದಾಟುತ್ತ ಅದವಾನಿಗೆ ಬಂದೊಡನೆ ಸದರಿ ಪಟ್ಟಣದಲ್ಲಿ ಸಿದ್ದೇಮಸೂದುಖಾನ ಯಂಬ ನವಾಬನಿಂದ ಹಣಕಾಸಿನ ಸಾಯ ಪಡದು ದಳವಾಯಿ ಸಿದ್ದೆಂಕಣ್ಣನೆಂಬಾತನು ಕಟ್ಟಿಸಿರ್ಧ ಅಗಾದ ಸಯ್ಲಿಯ ಭಾವಿಯ ಸುತ್ತ ವಂದಾಳೆತ್ತರದ ತಂತಿ ಬೇಲಿಯನ್ನು ಹಾಕಿಸಿದನು. ಪ್ರಜೆಗಳು ಅದರ ನೀರನ್ನು ವುಪಯೋಗ ಮಾಡುವುದನ್ನು ಕಾನೂನು ಮೂಲಕ ನಿರ್ಬಂದಿsಸಿದನು. ಪುರುವಿಕರು ಯಿಂಥ ಬಾವಿಗಳನ್ನು ಕಟ್ಟಿಸಿರುವುದು ವಂದಾನೊಂದು ಕಾಲದಲ್ಲಿ