ವಿಷಯಕ್ಕೆ ಹೋಗು

ಪುಟ:Aramane.pdf/೨೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಾಹೇಬನು ರಕುತಪಾತಕ್ಕಿಂತ ರಾಜಿಕಬೂಲಿಯೇ ವಾಸಿ ಯಂದು ಹೇಳಿದ. ಯೀಗಾಗಲೆ ಗುಂತಕಲ್ಲು ಪ್ರಾಂತದ ಜನಸಾಮಾನ್ಯ ಮಂದಿಯ ಯದೆ ವಳಗೆ ಗುಡಿಗುಂಡಾರ ಕಟ್ಟಿಕೊಂಡಿರುವ ಬೊಬ್ಬಲಿ ಬಿರುದಾಂಕಿತ ನಾಗೆರಡ್ಡಿಯ ಯಿಸುವಾಸ ಸಂಪಾದನೆ ಮಾಡಬೇಕಾದರ ಕುಂಪಣಿ ಸರಕಾರದ ಪ್ರತಿನಿದಿsಯಾಗಿ ತಾನು ಆ ರಾಬಿನ್ ಹುಡ್ ಬಡಿಸುವ ಬಾನವನ್ನು ಸೊಯಂಪ್ರೀತಿಯಿಂದ ವುಂಬಲಿರುವುದಾಗಿ ಖಡಾಖಂಡಿತವಾಗಿ ಹೇಳಿದ. ಹೆನ್ರಿಯನ್ನು ಮಾತ್ರಹಿಂದೆ ಯಿಟುಕೊಂಡು ಫಲಾನ ದಿವಸದಂದು ಪ್ರಯಾಣ ಬೆಳೆಸಿ ಫಲಾನ ವೂರನ್ನು ಸೇರಿಕೊಂಡ. ಅಸಂಖ್ಯಾತವಾಗಿ ಸೇರಿದ್ದ ಮಂದಿ ಅವರೀರ್ವರನ್ನು ದಿಬ್ದೀರ್ತಿಯಿಂದ ಸ್ವಾಗತಿಸಿದರು. ಮನ್ರೋನಿಗಾದರೋ ತಾನು ನಾಗಿರೆಡ್ಡಿಯನ್ನು ಯಾವಾಗ ಕಾಣುವೆನೋ ಯಂಬ ಹಂಬಲವು. ಆತನಿರಬೌದೆ ಅವಯ್ಯನು? ಯೀತನಿರಬೌದೇ ಅವಯ್ಯನು, ಹಂಗಿರಬೌದಾ ಅವಯ್ಯನು? ಹಿಂಗಿರಬೌದಾ ಅವಯ್ಯನು..

ಛೇ.. ಛೇ.. ಯಿವನಲ್ಲ ಅವಯ್ಯನು.. ಛೇ.. ಛೇ ಅವನಲ್ಲ ಯಿವಯ್ಯನು, ಮತ್ತಾರಿದ್ದಿರಬೌದು? ಯಂಬ ಸಂದೇಹದ ಸಂದೂಕದೊಳಗಿದ್ದ ಕಲೆಟ್ಟರ ಸಾಹೇಬನನ್ನು ವಂದ ನಾಕುಮಂದಿಯು ಕಕ್ಕುಲಾತಿಯಿಂದ ಸಿಂಗಾರಗೊಂಡಿದ್ದ ಝೋಪಡಿ ವಳಕ್ಕೆ ಕರೆದೊಯ್ದರು. ಗಿಡ್ಡನೆಯ ಬಾಗಿಲನ್ನು ಕಲೆಟ್ಟರನು ತಲೆಯೊಂದನ್ನಲ್ಲದೆ ನಡು ಬಗ್ಗಿಸಿ ದಾಟಿದೊಡನೆ ಜನ ವುಘೕ ವುಘೕ ಅಂತು. ರಂಡೀ ರಂಡೀ.. ಕಲೆಟ್ಟರ ಸಾಹೇಬss ಯಂದು ಸ್ವಾಗತ ಪಲುಕಿದ ಮಟ್ಟಸ ನಿಲುವಿನ ಯಕ್ತಿಯೇ ನಾಗಿರೆಡ್ಡಿ ಆಗಿದ್ದನು. ತಿಳಿದು ಭಾವಪರವಸನಾದ ಮನ್ರೋನು ‘ಓಹ್.. ನಾಗಿರೆಡ್ಡಿಗಾರೂ’ ಯಂದುದ್ಗಾರ ತೆಗೆಯುತ್ತ ಧಾವಿಸಿ ಆಲಿಂಗನ ಮಾಡಿದನು. ನಾಗಿರೆಡ್ಡಿಯ ರುದಯದೊಳಗ ಕುಂಪಣಿ ಸರಕಾರ ಸಂಲಗ್ನಗೊಂಡಿತೋ, ಅವರೀರ್ವರು ತಮ ತಮ್ಮ ಹಿಂದಲ ಜಲುಮದಲ್ಲಿ ವಂದೇ ತಾಯಿಯ ಹೊಟ್ಟೆಯ ವಳಗಿದ್ದರೋ, ವಂಛಣ ಹೊತ್ತು ಅಪ್ಪುಗೆ ಸಯ್ಲ ಆಗಲಿಲ್ಲ. ವಬ್ಬರ ವುಸುರನು ವಬ್ಬರು ಕುಡಿದರು, ಬೆವರ ಯಿನಿಮಯ ಮಾಡಿಕೊಂಡರು, ಗದ್ಗದಿತರಾದರು.. ಚಾವತ್ತಿನ ನಂತರ ಪರಸ್ಪರಹಿಡಿತ ಸಡಲ ಮಾಡಿದರು, ಯವೆಯಿಕ್ಕದೆ ನೋಡಿಕೊಂಡರು.. ಅವಯ್ಯನೊಳಗ ಯಿವಯ್ಯನು ತನ್ನನ್ನೂ, ಯಿವಯ್ಯನೊಳಗ ಅವಯ್ಯನು ತನ್ನನ್ನೂ ಬೆದಕಾಡಿಕೊಂಡರು, ವಬ್ಬರೊಳಗ ಯಿನ್ನೊಬ್ಬರ ದೀವಿಯಂದುಕೊಂಡರು ಸಿವನೇ.. ಅವರಿಗೆ ದ್ರುಸ್ಟಿ ತಗಲುವಂತೆ