ವಿಷಯಕ್ಕೆ ಹೋಗು

ಪುಟ:Aramane.pdf/೨೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾವಿಸಿ ತನಗೊದಗಿರುವ ದುಸ್ಥಿತಿಯನ್ನು ನಿವೇದನೆ ಮಾಡತೊಡಗಿತು. ಭದ್ರತಾದಳವು ಅಲ್ಲಿ ಅರವೆ ಸುಡುತಯ್ತಾ? ಯಿಲ್ಲಿ ಅರವೆ ಸುಡುತಯ್ತಾ ಯಂದು ಸುತಮುತ್ತ ಬೆದಕಾಡಲಾರಂಬಿsಸಿದರು. ಅಲ್ಲಿ ಅರುವೆ ಸುಡಾತಾ ಯಿಲ್ಲ.. ಯಿಲ್ಲಿ ಅರುವೆ ಸುಡುತಾಯಿಲ್ಲ.. ಯಲ್ಲಿ ಅರುವೆ ಸುಡುತ್ತಿರಬಹುದು? ಯಂದು ಭದ್ರತಾ ದಳವು ಸುತಮುತ್ತ ಬೆದಕಾಡಲಾರಂಬಿsಸಿತು. ಮನ್ರೋ ಸಾಹೇಬನು “ಭಲಾ ನಾಗಿರೆಡ್ಡೀ ಭಲಾ” ಯಂದು ವುದ್ಗಾರ ಮಾಡಿದನು. ನಾಗಿರೆಡ್ಡಿಯ ವಸ್ತರ ಯಿನ್ಯಾಸವು “ಗಂಡಸಾದರ ನೀನೂ ನನ್ನ ಸುಡು ಮತ್ತೆ” ಯಂದು ಸವಾಲು ಹಾಕುತ್ತಿರುವಂತೆ ಭಾಸವಾಯಿತು. ಸುಡುವುದು ದೊಡ್ಡ ಮಾತಲ್ಲ.. ಸುಟ್ಟಲ್ಲಿ ಅದೂ ಹೊಗೆ ರೂಪದ ರಾಯಭಾರಿಯಾಗಿ ಹೋಗಿ ನಾಗಿರೆಡ್ಡಿಗೆ ವರದಿ ಮಾಡದೆ ಯಿರದು? ಅದಕ್ಕೆಂದೆ ತಾನು ಯೇನು ಮಾಡಿದನೆಂದರೆ.... ವಂದು ಸ್ಕೆಲಟನ್ನನ್ನು ತರಿಸಿ ಅದಕ್ಕೆ ನಾಗಿರೆಡ್ಡಿಯ ವುಡುಪನ್ನು ತೊಡಿಸಿ ಯದುರಿಗೆ ಮುರುಕು ಕುರುಚಿಯ ಮ್ಯಾಲ ಕುಂಡರಿಸಿಟ್ಟುಕೊಂಡನು. ಕೂಡಲೆ ಕೇಂದ್ರಕಾರಾಗ್ರುಹಕ್ಕೆ ಹೋಗಿ ನಾಗಿರೆಡ್ಡಿಯ ಸಹಚರರನ್ನು ಕಂಡು ರೆಡ್ಡಿಯ ಗುಣಗಾನ ಮಾಡಿ ಬಿಡುಗಡೆ ಮಾಡಿದನು.. ಯಂಜಲು ಯಿನಿಮಯ ಮಾಡಿಕೊಂಡಿರುವುದರಿಂದ ತಾನಿಲ್ಲೇ ಯಿರುವುದು ವಳಿತಲ್ಲ ಯಂದು ಬಗೆದು ದುಪಟಿಕಲೆಟ್ಟರು ಕ್ಯಾಂಪಬೆಲ್ಲು, ಹೆನ್ರಿಮುಂತಾದವರನ್ನು ತನ್ನ ಖೋಲಿಗೆ ಕರೆಯಿಸಿಕೊಂಡು ಅವರ ಕಿವಿಯೊಳಗ ಪಿಸಿ ಪಿಸಿ ನುಡಿವುತ ತನ್ನ ಕಣ್ಣುಗಳಲಿ ಯರþಡು ಚಮಚ ನೀರು ತಂದುಕೊಂಡನು.. ಗದ್ಗದಿತನಾಗುತ್ತಲ್ಲೇ ಮಾತನ್ನು ಅರ್ಧಕ್ಕೆ ನಿಲ್ಲಿಸಿ ಸಭೆಯನ್ನು ಬರಕಾಸ್ತು ಮಾಡಿದನೆಂಬಲ್ಲಿಗೆ ಸಿವ ಸಂಕರ ಮಾದೇವss

ಅತ್ತ ಹರಪನಹಳ್ಳಿ ವಳಿತದ ಹಲವು ಗ್ರಾಮಗಳೊಳಗ ಸರ್ರೇ.. ಸರ್ರೇ...

ಅತ್ತ ಕೂಡ್ಲಿಗಿ ಪಟ್ಟಣದೊಳಗ ಜೆನ್ನಿಫರಮ್ಮಳ ಸಾಯದಿಂದ ಯಾವ ಬಣ್ಣಕ್ಕೆ ಯಾವ ಬಣ್ಣವನ್ನು ಕಲೆಯಿಸಿದರ ಯಾವ ಬಣ್ಣ ಮೂಡುತದ ಯಂಬುವಷ್ಟರ ಮಟ್ಟಿಗೆ, ಬಣ್ಣದ ಕುಡುಕೆಯೊಳಗ ಕುಂಚ ಅದ್ದಿ ತೆಗೆಯುವಷ್ಟರ ಮಟ್ಟಿಗೆ, ನಾಲಕಾರು ಚಿತ್ರಗಳನ್ನು ರಚನೆ ಮಾಡುವಷ್ಟರ ಮಟ್ಟಿಗೆ ಯೇಂಜಲು ಅಂದರ ಚಿನ್ನಾಸಾನಿ ಕಲಿತುಕೊಂಡಿದ್ದರ, ಚಿನ್ನಾಸಾನಿಯ ಸಾಯದಿಂದ ನಿರಿಗೆ ಬರುವಂತೆ ಸೀರೆ, ಕುಬುಸು ವುಟ್ಟುಕೊಳ್ಳುವಷ್ಟರಮಟ್ಟಿಗೆ, ಕಾಲಿಗೆ ಗೆಜ್ಜೆ ಕಟ್ಟಿಕೊಳ್ಳುವಷ್ಟರಮಟ್ಟಿಗೆ, ತಂದಾನ ಯಂದು ಹೆಜ್ಜೆ ಹಾಕುವಷ್ಟರಮಟ್ಟಿಗೆ, ಕರಿವದನ