ವಿಷಯಕ್ಕೆ ಹೋಗು

ಪುಟ:Aramane.pdf/೨೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮ್ಯಾಲ ಬಾರದ ಜಾಬಿನ ಮ್ಯಾಲಣ ಸಿಟ್ಟನ್ನು ಹೇರುತಲಿತ್ತು.. ನೂರಾವಂದು ಬೇತಾಳಗಳನ್ನು ಯರಕ ಹೊಯ್ದರ ವಂದು ಭೂತಬಿಲ್ಲೆ ವುಂಟಾತದೆ ಯಂದು ಮುಂತಾಗಿ....

ಹಿಂಗss ಭೂತಬಿಲ್ಲೆಯ ಪುರುವಾಪರ ಬೆದಕುತ ಕುಂತರ ತಮ್ಮ ಕುತೂಹಲ ತಮಣಿಗೊಳ್ಳುವ ಬಗೆ ಯಂತು? ನಾನೊಲ್ಲೆ ತಾನೊಲ್ಲೆ ಯಂದು ಮೊದಮೊದಲಿಗೆ ಹಿಂಜರಿಕೇನ ಯಕ್ತಪಡಿಸುತಲಿದ್ದ ಮಂದಿ ವಬ್ಬೊಬ್ಬರಾಗಿ ಥೆಳಗೇರಿಗೆ ಹೋಗೋದು ತಮ ತಮ್ಮ ಯೋಗ್ಯತಾನುಸಾರ ದೂರ ದೂರದಲ್ಲಿ ನಿಂತು ಭೂತಬಿಲ್ಲೆಯೂ, ಜಗಲೂರವ್ವನೂ ಪರಸ್ಪರ ಅನ್ಯೋನ್ಯತೆಯಿಂದ ಯಿರುವುದನ್ನು ನೋಡುವುದು.. ಹೊಳ್ಳಿ ಬರುವುದನು ಮಾಡತೊಡಗಿದರು.. ಕ್ರಮೇಣ ದೂರ ಕಿರಿದಾಗಲಾರಂಭಿಸಿತು.. ವಬ್ಬೊಬ್ಬರ ವಂದೊಂದು ಯಿಧದ ಆಹಾರವನ್ನು ವಯ್ದು ಬೇಯಿನ ಮರದ ಬುಡದಲ್ಲಿಡುವುದೋ? ನಿನ್ನನುಗ್ರಹ ತಮ್ಮ ಮ್ಯಾಲ ಅನುಗಾಲ ಯಿರಲೆಂದು ಬೇಡಿಕೊಳ್ಳುವುದೋ? ಕ್ರಮೇಣ ತುಸು ಹೊತ್ತು ಕಳೆವುದೋ.. ಆ ಅಂತರ ಬೆಂತರ ಮಕ್ಕಳ ಸಿದುಗಾಟವನ್ನು ಕಣ್ತುಂಬ ನೋಡುವುದೋ? ಮಾತುಗಳನು ಕಣ್ತುಂಬ ಕೇಳುವುದೋ, ಲೆಕ್ಕಾಚಾರದಲ್ಲಿ ಸ್ಪರುಶ ಮಾಡುವುದೋ? ಮಾಡತೊಡಗಿದರೆಂಬಲ್ಲಿಗೆ ಸಿವಸಂಕರ ಮಾದೇವss...

  • * * *

ಅತ್ತ ಬಳ್ಳಾರಿ ಪಟ್ಟಣದ ಕ್ಯಾಂಪಬೆಲ್ಲು, ಹೆನ್ರಿ, ಸ್ವೋನ, ಹ್ಯಾರೀಸು ಯಂಬಿವೇ ಮೊದಲಾದ ಅದಿsಕಾರಿಗಳ ಕಿವಿಯೊಳಗ ಅನಬಾರದ ಮಾತುಗಳನ್ನು ಪಿಸುಗುಟ್ಟಿದ ಥಾಮಸು ಮನ್ರೋ ಸಾಹೇಬನು ಗುತ್ತಿ ತಾಡಪತ್ರಿ, ಚಾಗಲ ಮರ್ರಿ.. ಪುಲಿಯಂದುಲ, ಕವುಕುಂಟಲ ಯಿವೇ ಮೊದಲಾದ ಸಮುಸ್ಥಾನ ಪಾಳೇಪಟ್ಟು ಜಾಗೀರುಗಳನ್ನು ಹಾದೂss ಹಾದು ಕಡಪಾ ಯಂಬ ಮೂರು ಸರಳಾಕ್ಕರಗಳ ಹೆಸರಿನ ಪಟ್ಟಣವನ್ನು ಸೇರಿಕೊಂಡು ಯಿವತ್ತಿಗೆ ಯೇಸು ದಿವಸಗಳಾಗಿದ್ದವೆಂದರೆ ಫಲಾನ ಆಸು ದಿವಸಗಳಾಗಿದ್ದವು.. ತಾನು ಅದಿsಕಾರಿಗಳಿಗೆ ಹೇಳಿದ್ದ ಮಾತುಗಳು ಯಷ್ಟರ ಮಟ್ಟಿಗೆ ಸರಿ? ಆ ಮಾತುಗಳು ತನ್ನ ಘನಂದಾರಿಗೆ ತಕ್ಕದಾಗಿ ಯಿದ್ದವಾ? ಯಿಲ್ಲವಾ? ತಾನಾ ಸಂಚಿನ ರೂವಾರಿಯಾಗದಿದ್ದಲ್ಲಿ ತನ್ನ ಅದಿsಕಾರಿಗಳೇ ತನ್ನ ಸರಕಾರ ನಿಷೆವಿಯ ಬಗ್ಗೆ ಅನುಮಾನ ತಾಳುತ್ತಿರಲಿಲ್ಲವಾ? ತನ್ನ ನೆಮ್ಮದಿಗ ಭಂಗ ಬರುತ್ತಿರಲಿಲ್ಲವಾ? ನಾಗಿರೆಡ್ಡಿಯಿಂದ ಹಲವರು ಸ್ಪೂರ್ತಿ ಪಡೆಯುತ್ತಿರಲಿಲ್ಲವಾ? ಯಂಬಿವೇ