ಪುಟ:Aramane.pdf/೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೊನ್ನಗಿರಿ ಪ್ರಾಂತದ ಕಡೇಕ ಗುಳೇ ಹೊಂಟಿರುವಾಗ್ಗೆ.. ಯಿತ್ತ ಕುದುರೆಡವು ಪಟ್ಟಣದ ಅರಮನೇಲಿ ರಾಜಮಾತೆ ಭಯ್ರಮಾಂಬೆಯು ತನ್ನ ಸವತಿ ಮಗ ಕಾಟಯ್ಯ ನಾಯಕನೊಂದಿಗೆ ವಂದು ಕಾಸಿನ ಸರದ ಯಿಷಯದಲ್ಲಿ ಜಗಳವಾಡುತಲಿದ್ದಳು. ತಿರುಪಾಲಯ್ಯ ಶ್ರೇಷಿವಿಯು ತನ್ನ ಮನೆಯ ನೆಲಮಾಳಿಗೆಯೊಳಗೆ ತಾನೊಬ್ಬನೆ ಕೂತುಕೊಂಡು ರಾಣಿ ರೂಪಾಯಿಗಳನ್ನು ಯಣಿಕೆ ಮಾಡುತಲಿದ್ದನು. ಪ್ರಸಿದ್ಧ ಪುರುವಿಕರ ವಂಶಸ್ಥನೂ, ಸರಸೊತಿ ದೇವಿಯ ವರಪುತ್ರನೂ ಆಗಿದ್ದಂಥ ಭಟ್ರಾಜು ರಾಮರಾಜುವು ಚುಟುಚುಟು ಗುಟ್ಟುತಲಿದ್ದ ಹೊಗಳಿಕೆಯ ಮಾತುಗಳನ್ನು ತನ್ನ ಗೇಣುದ್ದದ ನಾಲಿಗೆ ಮ್ಯಾಲಿಂದ ಯಕ್ಕಿ ತೆಗೆದು ತಾಳೆಯೋಲೆಯ ಮ್ಯಾಲೆ ಕಟೆದಿಡುತ ಹೊಗಳಿಕೆ, ತೆಗಳಿಕೆಗೆ ಸಂಬಂದಿsಸಿದ ನಿಘಂಟೊಂದನ್ನು ರಚನೆ ಮಾಡುತಲಿದ್ದನು. ಮ್ಯಾಗಳಗೇರಿಯಲ್ಲಿ ವಂದು ಕಸಬಾರಿಗೆ ಯಿಷಯದಲ್ಲಿ ಆಮಾತ್ಯ ಗವುಡಿಕೆ ಸಣಸಿದ್ದಪ್ಪನ ಚತುರ್ತ ಪತ್ನಿಯಾದ ಗವುರವ್ವನೂ, ಸೇನಾಧಿಪತಿ ಗೋಯಿಂದಪ್ಪನ ಪಂಚಮ ಪತ್ನಿಯಾದ ಯಂಕಮ್ಮನೂ ತಾಸೊತ್ತಿನಿಂದ ಜಗಳಾಡೀ ಆಡೀ ದಣದು ಅದೇ ಇನ್ನು ತಮ ತಮ್ಮ ಮನೆಗಳನ್ನು ಸೇರಿಕೊಂಡು ವಟವಟಗುಟ್ಟುತ ಧಮ್ಮಾರಿಸಿಕೊಳ್ಳುತಲಿದ್ದರು.. ರಣಬಯಲಲ್ಲಿದ್ದ ಹವಾ ಮಹಲೊಳಗೆ ಗೊಂಜಾಡಲರ ಡವಯ್ಯನೂ, ಮ್ಯಾಲಗಿರಿ ತಿಮ್ಮನೂ, ಕಜ್ಜುಲೀರಯ್ಯನೂ, ಸಂದಿsಯಿಗ್ರಹಿ ರಾಮಪ್ಪ ಸ್ವಾಮಿಯೂ ತಮ್ಮ ಮುಂದೆ ಚದುರಂಗದ ಪರಿಕರವನ್ನು ಯಿಟುಕೊಂಡು ರಾಜಪರಿವಾರದ ಹುದ್ದರಿಗಳಿಗಾಗಿ ಕಾಯುತಲಿದ್ದರು.. ದಿನತುಂಬಿದ ಬಸುರೇರು ನೋವು ತಿಂಬುತಲಿದ್ದರು.. ನೀರು ತರೋರು ಹೊನ್ನಮ್ಮನ ಹಳ್ಳದಿಂದ ನೀರು ತರುತಲಿದ್ದರು.. ಹೊಲದ ಬದುಕೀಗೆ ಹೋಗೋರು ತಮ ತಮ್ಮ ಹೊಲಗಳ ಕಡೀಕೆ ಹೊಂಟಿದ್ದರು.. ನೆಲ ಸಾರಿಸೋರು ನೆಲ ಸಾರಿಸುತಲಿದ್ದರು.. ಕಸ ಗುಡಿಸೋರು ಕಸ ಗುಡಿಸುತಲಿದ್ದರು.. ಹಲ್ಲಿದ್ದೋರು ಹುರುಗಡ್ಲಿ ಜಮಡುತಲಿದ್ದರು.. ಹಲ್ಲಿಲ್ಲದೋರು ಜಮ್ಮೆಕಡ್ಡಿ ನಮಲುತಲಿದ್ದರು.. ತಮ ತಮ್ಮ ಹೊಟ್ಟೆ ಪ್ರದೇಶವ ಕೆರಕೋತ ಸಿಪಾಯಿಗಳು ಅಲ್ಲೊಬ್ಬರು, ಯಿಲ್ಲೊಬ್ಬರಂತೆ ಗಸ್ತು ತಿರುಗತಲಿದ್ದರು.. ಕುದುರೆಡವು ಪಟ್ಟಣದ ವರ್ತಮಾನವನ್ನು ವಂದೇ ಮಾತಲ್ಲಿ ಹೇಳಲಕಂದರೆ ಆರು ಮೂರರ ನಡುವೆ ಮಿಸುಕಾಡುತಲಿತ್ತು. ವಂದು ಯೇರಿಕೆ ಯಂಬುದಿರಲಿಲ್ಲ, ವಂದು ಯಿಳಿಕೆ ಯಂಬುದಿರಲಿಲ್ಲ, ನಿನ್ನೆ ಯಂಬುದಿರಲಿಲ್ಲ, ಯಿಂದು ಯಂಬುದಿರಲಿಲ್ಲ, ನಾಳೆ ಯಂಬು ದಿರಲಿಲ್ಲ. ಮ್ಯಾಲಿದ್ದೋರು ಕೆಳಗಿದ್ದೋರನು