ವಿಷಯಕ್ಕೆ ಹೋಗು

ಪುಟ:Aramane.pdf/೩೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಾರೊತಿ ಪತಿ ಹರ ಹರ ಮಾದೇವ ಅಂದಕಂತ ಹಿರಿಹಿರಿ ಹಿಗ್ಗಿದರು. ಫಲಾನ ಜೆಗೇವು ತಲುಪಿದರು.. ಜಾಗ ಕದಲಿರದ ಮಹಿಷವು ಗವುರವ ಪುರುವಕವಾಗಿ ಅವರನ್ನು ಸ್ವಾಗತಿಸಿತು. ತನ್ನ ಪವುರಾಣಿಕ ಕಾಲದ ದಿವ್ಯ ಸರೀರದ ಮ್ಯಾಲಣ ಕೂನ ಗುರುತುಗಳನ್ನು ತೋರಿಸಿಕೊಟ್ಟಿತು.. ಅದರಿಂದ ಸಂತುಷ್ಟರಾದ ಹಿರೀಕರು "ಯೀರಯ್ಯss ನಸುವರವಾದ ಅಯ್ದು ಕೂರಿಗಿ ಹೊಲ ಬ್ಯಾಡಂಬುತಿ.. ಚಪಲವಾದ ಬೆಳ್ಳಿ ರೂಪಾಯಿಗಳನು ಬ್ಯಾಡಂಬುತಿ.. ಸಾಸುವತವಾದ ಮೋಕ್ಷ ಪದವಿ ಬೇಕೆಂಬುತೀ.. ಆಯ್ತು.. ಮೋಕ್ಷ ಪ್ರಾಪ್ತಿರಸ್ತು” ಯಂದಾಸಿರುವಾದ ಮಾಡಿದರು. ಹಂಪಜ್ಜನಿಗೆ ಅರಿಕೆ ಮಾಡಿಕೊಳ್ಳುವ ನಿಮಿತ್ತ ಪಟ್ಟಣದ ಕಡೇಕ....

ಅವರು ಆನಂದತುಂದಿಲರಾಗಿ ಪಟ್ಟಣವನ್ನು ಪ್ರವೇಸ ಮಾಡಿದ ಹೊತ್ತಿನಲ್ಲಿ ದಳವಾಯಿ ಬಾಗಿಲ ಮುಂದುಗಡೆ ಮುಳ್ಳಿನ ಪೀಠದ ಮ್ಯಾಲ ನಿಟಾರನೆ ನಿಂತಿದ್ದ ಕಾಲಗ್ನಾನಯ್ಯನು....

“.....ಆದಿ, ಅನಾದಿ, ಅನಂತ, ಅರ್ಬುದ, ತಮಂಧ, ತಂಡಜ, ವಾರಿಜ, ಬಿsನ್ನಯುಕ್ತ, ಆಯುಕ್ತ ಮನಿರಣ, ಮಾನ್ಯರಣ, ಯಿಸುವಾವಸು, ಅಲಂಕ್ರುತ, ತ್ರೇತಾ, ದ್ವಾಪರ, ಕಲಿ.. ಕಲಿಯುಗದಲ್ಲಿ ಮೂಳೆಮೋಬಂiÀÄ್ಯನೇ ನಿಜಭಕುತ ಕೇಳಿರಯ್ಯಾ.. ಸಾಂಬವಿಮೋರ್ವಳೇ ನಿಜದೇವತೆ ಕೇಳಿರಯ್ಯಾ.. ಯಿವರೀರ್ವರಲ್ಲಿ ಬಿsನ್ನ ಬೇದವ ಮಾಡಬ್ಯಾಡಿರಯ್ಯಾ, ತಾಯ ಮಯ್ಮೆಯ ಪ್ರಾಬಲ್ಯವುಂಟು ಮಾಡಲಕೆಂದೇ ಮೋಬಯ್ಯನ ಜನನವಾಯಿತ್ತು ಕೇಳಿರಯ್ಯಾ.. ಆಕೆ ಪ್ರವೇಶ ಮಾಡಿದ್ದು ರಾಕ್ಷಸನಾಮ ಸಮುವತ್ಸರ ಪಾಲ್ಗುಣ ಸುಕ್ಲ ಹನ್ನೆರಡು ಮಂಗಳವಾರ ಯಿಪ್ಪತ್ತೆಂಟನೇ ಗಳಿಗೆಯಲ್ಲಿ ಕೇಳಿರಯ್ಯಾ.. ಯೀ ಹುಣ್ಣುಮಿ ವಳಗಾಗಿ ಆದಿಸಗುತೀನ್ನ ಹೊಳೆಗೊಂಡಿಸದಿದ್ದಲ್ಲಿ ಆಗುವ ಅನಾಹುತವ ಕೇಳಿರಯ್ಯಾ.. ಬಂದವ್ವನ ಸರೀರದಿಂದ ಅಂದ ಅಳೀತದೆ ಕೇಳಿರಣ್ಣಾ.. ಹೆಂಗಸರ ಮುಖದ ಮ್ಯಾಲ ಗಡ್ಡಮೀಸೆ ಮೂಡುತಾವ ಕೇಳಿರಣ್ಣಾ.. ಗಂಡಸರು ಬಸುರಾಗುತಾರ ಕೇಳಿರಣ್ಣಾ... ಅವರು ಮೀಸೆವುಳ್ಳ ಕೂಸುಗಳನು ಹಡಿತಾರ ಕೇಳಿರಣ್ಣಾ.. ಮಳಿಗಾಲ ಅಡಗ್ಯಾವು, ಬೆಳೆಗಳು ವುಡುಗ್ಯಾವು ಮರೆಯದಿರಣ್ಣಾ.. ಕುದುರೆಡವು ಮಂದಿ ಅನ್ನವs ಕಾಣಾದೆ ಮನಿಮನಿಯ ತಿರುಗ್ಯಾರು ಕೇಳಿರಣ್ಣಾ.. ಆಕಾಸ ಅದುರೀತು.. ಭೂಮ್ತಾಯಿ ನಡುಗ್ಯಾಳು ಕೇಳಿರಣ್ಣಾ. ಕುಹಕಾರರ ಬಂದ ಕಡೆ ಮಾಟವಾದೀತು ನೋಡಿರಣ್ಣಾ.. ಲೋಕಕ್ಕೆ ಮೀರಿದ ಜ್ಯೋರ್ಯಾರು ಬರುತಾರ ನೋಡಿರಣ್ಣಾ.. ಮಾರಾಟ ನಡೆಯೂದು ಹೋರಾಟವಾದೀತು ಕೇಳಿರಣ್ಣಾ.. ಯಚ್ಚಾರ