ವಿಷಯಕ್ಕೆ ಹೋಗು

ಪುಟ:Aramane.pdf/೩೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತಮ ತಮ್ಮ ಪಾಲಿನ ಕೆಲಸ ಬೊಗಸೆಗಳನ್ನು ಮಾಡುತಲಿದ್ದರು. ದ್ವಾಪರಯುಗದಲ್ಲಿ ಬಿsೕಮಸೇನನಿಂದ ಸ್ಥಾಪಿತಗೊಂಡಿರುವಂಥ ಭೀಮಲಿಂಗೇಸ್ವರಸ್ವಾಮಿಯ ರಥೋತ್ಸವ ಯಾವ ಕಾರಣಕ್ಕೂ ನಿಂತುದುದಿಲ್ಲ.. ಯಂಥೆಂಥೋ ಪವಾಡ ತೋರಿಸಿರುವ ತಮ್ಮ ಸ್ವಾಮಿ ನಾಗಿರೆಡ್ಡಿ ಯಿಷಯದಲ್ಲಿ ತಾಚ್ಚಾರ ಮಾಡಲಾರನು.. ತನ್ನ ಮಗನ ಯೋಗಕ್ಷೇಮ ನೋಡಿಕೊಳ್ಳುವುದು ಪಿತ್ರುಸ್ಥಾನದಲ್ಲಿರುವಾತನ ಕರ್ತವ್ಯವು....

ಅತ್ತ ಹರಪನಹಳ್ಳಿ ಪ್ರಾಂತದೊಳಗ ಕೀರ್ತಿಸೇಷ ಸೋಮಶೇಖರ ನಾಯಕ ಫವುಜು ಭರಮನ ಗವುಡನ ನೇತ್ರುತ್ವದಲ್ಲಿ ಭಲೇ ಕ್ರಿಯಾಶೀಲವಾಗಿತ್ತು. ಕಮಾಂಡರು ಸ್ಟೂವರ್ಟನು ಆ ಸೊಯಂ ಘೂೕಷಿತ ಪವುಜಿನ ಮ್ಯಾಲ ನಿಗಾ ಯಿಟ್ಟೇ ಹರಪನಹಳ್ಳಿ ವಳಗ ಮೊಕ್ಕಾಂ ಹೂಡಿದ್ದನು. ಅವನ ಗೂಢಾಚಾರರು ವಂದಲ್ಲಾವಂದು ಸುದ್ದಿಯನ್ನು ತಂದು ಅವಯ್ಯನ ಕೆಂಗೂದಲ ಕಿವಿಯೊಳಗ ವುಸುರುತಲಿದ್ದರು. ಬಿಟ್ಟುದ ಬಿಟ್ಟು ಬಂದು ತನ್ನೆದುರು ಹಾಜರಾಗುವಂತೆ ಗವುಡಗೆ ಬುಲಾವು ಕಳಿಸಿದನು. ಮ್ಯಾಗಳಗೇರಿಯನ್ನು ಅದೇ ಯಿನ್ನು ಕಬ್ಜಾ ಮಾಡಿಕೊಂಡು ಅದರ ವುಸ್ತುವಾರಿಯನ್ನು ಹಂಪರಸಪ್ಪಯ್ಯನ ಸಲಹೆ ಮೇರೆಗೆ ದೂದಯ್ಯನಿಗೆ ವಹಿಸಿ ಗ್ರಾಮದ ಹಿರಿಯ ವತನದಾರ ಬಲವಂತಪ್ಪನ ಮನೆಯೊಳಗ ಯಿಸ್ರಾಂತಿ ಪಡಕೊಳ್ಳುತಲಿದ್ದ ಭರಮನಗವುಡನು ಯೀಗ ತನಗೆ ಪುರುಸೊತ್ತಿಲ್ಲ ಯಂದು ಹೇಳಿ ಕಳುವಿದ್ದನು. ಮುಂಡುರುಗಿ, ಡಂಬಳ, ಕೊಂಬಳಿ, ಕುರವತ್ತಿ ಮೊದಲಾದ ಕಡೇಲೆಲ್ಲ ಕುಂಪಣಿ ಸರಕಾರದ ಯಿರುದ್ದದ ದಂಗೆಗಳನ್ನು ನಿರ್ದಾಕ್ಷಿಣ್ಯವಾಗಿ, ಕ್ರೂರವಾಗಿ ಅಡಗಿಸಿ ಕುಖ್ಯಾತನಾಗಿದ್ದ ಸ್ಟೂವರ್ಟನಾದರೋ ಯದುರಾಳಿಗಳ ಮೂಗು ಹಿಡಿದು ಬಾಯಿ ತೆರೆಯುವಂತೆ ಮಾಡಬಲ್ಲ ಚಾಣಾಕ್ಷನು.. ಗವುಡನ ಜವಾಬನ್ನು ವುದ್ದಟತನವೆಂದೇ ಭಾವಿಸಿದನು. ಪುಣೆಯ ಕಾಳಗದಲ್ಲಿ ಕುಂಪಣಿ ಸರಕಾರದ ಪರ ಸಂಚು ರೂಪಿಸಿದ್ದಂಥ, ಖೊಜ್ಜಾನೂ, ಸೂರ ಸಿಪಾಯಿಯು ಆಗಿದ್ದ ದಂಡೋಜಿ ನೇತ್ರುತ್ವದಲ್ಲಿ ಹತ್ತು ಮಂದಿ ಸಿಪಾಯಿಗಳನ್ನು ಬಂದಿsಸಿ ತರಲೆಂದು ಕಳುವಿದನು. ಅಷ್ಟು ಹೊತ್ತಿಗೆ ಮ್ಯಾಗಳಗೇರಿಯಿಂದ ಕಂಚಿಕೇರಿಗೆ ಮೊಕ್ಕಾಂ ಬದಲಾಯಿಸಿದ್ದ ಗವುಡನು ದಂಡೋಜಿ ಮತ್ತವನ ಸಿಪಾಯಿಗಳನ್ನು ಪ್ರೀತಿಯಿಂದ ಬರಮಾಡಿಕೊಂಡನಲ್ಲದೆ ಹೋಳಿಗೆ ವೂಟ ಮಾಡಿಸಿ ಯಿಸ್ರಾಂತಿಗೆ ಬಿಡದಿ ಯೇರುಪಾಟು ಮಾಡಿದನು. ಆತಿಥ್ಯದಿಂದ ಅರ್ಧ ಬಲ ಕಳಕೊಂಡಿದ್ದ ದಂಡೋಜಿಯು ಸ್ಟೂವರ್ಟ್