ವಿಷಯಕ್ಕೆ ಹೋಗು

ಪುಟ:Aramane.pdf/೩೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗುರುತು ಹತ್ತಿತ್ತು.. ವಂದು bsÀಣ ಕಣ್ಣುಗಳಿಗೆ ಮಂಪರಡರಿದಂಗಾತು.. ಬೆಮತು ವುಟ್ಟ ಬಟ್ಟೆ ವದ್ದೆ ಆದಂಗಾತು.. ವರ್ತಮಾನ ಕಾಲ ಯಂಬ ತಿಪ್ಪೆ ಅಡಿಯಿಂದ ಭೂತಕಾಲ ಮ್ಯಾಲಕೆದ್ದು ಬಂತು..ಹ್ಹಾ.. ಅಗೋ.. ಅದೇ ಮಂಟಪ!.. ಹ್ಹಾ.. ಅಗೋ ಅದೇ ಪುಷ್ಕರಣಿ!.. ಹ್ಹಾ.. ಅಗೋ ಅಲ್ಲಿ ವಂದು ದೇವದಾರು ರುಕ್ಷ ಯಿತ್ತಲ್ಲಾ.. ಹ್ಹಾ.. ಯಿಗೋ ಯಿಲ್ಲಿ.. ಮತ್ತ್ಯಾವುದೋ ಯಿತ್ತಲ್ಲಾ!

‘‘ಹಾಯ್.. ಯೇಣುಗೋಪಾಲಸ್ವಾಮಿ ಯೇನಿದಪ್ಪಾ ನಿನ್ನೀ ಮಾಯೇ.. ನೀನು ಕಣಸೊಳಗ ಮೂಡಿ ಅಪ್ಪಣೆ ಮಾಡಿದ್ದೇನು? ನೀನು ಯಾಕ ಹಾದಿ ತಪ್ಪಿಸಿದಿಯಪ್ಪಾ? ಯಿಲ್ಲಿಗೆ ಯಾಕ ಕರಕೊಂಡು ಬಂದು ಬಿಟ್ಟಿಯಪ್ಪಾ.. ನೆನಪುಗಳ ಬೆರಣಿ ವಟ್ಟಿ ನನ್ನ ಸುಡಬೇಕಂತ ಮಾಡಿಯಾ ಹೆಂಗ?’’ ಯಂದನಕಂತ ತಾಯಕ್ಕ ಬಾಯಿಗಡ್ಡ ಸೀರೆ ಸೆರಗನ ಯಿಟ್ಟುಕೊಂಡಳು.

ಹಾಯ್.. ಭೂತ ಭುಜಂಗನಾಥನೇ..!!

ಅಲ್ಲೇ ವಂದು ದರುಮ ಛತ್ರಯಿತ್ತಲ್ಲ.. ಅದರ ಮೇಲ್ವಿಚಾರಕ ದಯಾನಾಥ ಯಂಬಾತ ಯಿದ್ದನಲ್ಲ.. ಆತ ಅದಾವ ಪ್ರೇರಣೆಯಿಂದಲೋ ಬಂದು ಅವರನ್ನು ಕರೆಯೊಯ್ದು bsÀತ್ರದೊಳಗ ವಸತಿ ಯಿತರೆ ಸವುಲಭ್ಯಗಳನ್ನು ಕಲ್ಪಿಸಿಕೊಟ್ಟ. “ಯಿದೇನವ್ವಾ.. ಯಿದಾವುದೋ ಗೊತ್ತು ಗುರಿಯಿಲ್ಲದ ದೇಸಕ್ಕ ಯಾಕ ಕರಕೊಂಡು ಬಂದಿ” ಯಂದು ಕೇಳುತ ಚಿನ್ನಾಸಾಮಿ ಆಕಳಿಸಿದಳು. ‘‘ಯೇನೋ ಮಗಳೇ ಆ ಭೂತ ಭುಜಂಗನಾಥಂದೇ’’ ಯಿದೆಲ್ಲ ಜವಾಬು ನೀಡುತಾ ತಾನೂ ಹ್ಹಾ.. ಯಂದಾಕಳಿಸಿದಳು ತಾಯಕ್ಕ...

ರಾತಿರಿ ವಂದು ಹೊತ್ತಿನಲ್ಲಿ.. ಯಿಷ್ಟಗಲ ಅಷ್ಟುದ್ದದ ವಂದು ಕಣಸು ಬಿತ್ತು.. ಅದರೊಳಗೆ ಸನ್ಯಾಸಿಯೋರ್ವ ಯೀಶಾನ್ಯ ದಿಕ್ಕಿನಿಂದ ನಡಕೋತ ಬಂದ, ಬಡಿದು ತಾಯಕ್ಕನನ್ನು ಯಬ್ಬಿಸಿದ.. ಯಾರಿರಬವುದಂತ ತಿಬ್ಬಳಿಸಿ ನೋಡಿದಳು.. ಅರೆ! ಭೂತಭುಜಂಗನಾಥರು.. ಯಷ್ಟು ವರುಷಂಗಳ ನಂತರ ತಾನಿವರನ್ನು ನೋಡುತ್ತಿರುವುದು.. ‘‘ಸ್ವಾಮಿ...’’ ಅಡಿಗಳಿಗೆರಗಿದಳು. ನಾಥರು ತಬ್ಬಿಕೊಂಡರು.. ‘‘ಪ್ರಿಯೇ.. ನಮಗೆ ನಮ್ಮ ಪ್ರೀತಿಯ ಕುವರಿಯನ್ನು ನೋಡುವ ಆಸೆ ಆಯಿತು ಅದಕ್ಕೆ....’’

ಅತ್ತ ಕುದುರೆಡವು ಪಟ್ಟಣದೊಳಗ ಆ ಸುದ್ದಿ.. ಅಂದರ ಅಧಸುದ್ದಿ ಕಿವಿಗೆ ಬಿದಲಾಗಾಯ್ತು ಮಾತ್ರುಮೂರ್ತಿಯಾದ ಜಗಲೂರೆವ್ವ ವಂಧವಂದು ಅಗುಳು ಬಾನ ಮುಟ್ಟಲಿಲ್ಲ.. ವಂಧವಂದು ಸೆರೆಮುಕ್ಕ ನೀರನ್ನು ಹಾಕ್ಕೊಂಡು