ಮಾದೇವss
ಅತ್ತ ಯಿಮ್ಮಡಿ ಸೋಮಸೇಕರ ಮಾರಾಜನ ಕಯ್ಯಿಂದ ಪಾರಿತೋಷಕ ಪಡೆವುತ್ತ.. ಬಾಯಿಯಿಂದ ರಣಭಯಂಕರ ಯಂದು ಹೊಗಳಿಸಿಕೊಂಡಿದ್ದಂಥ ಭರಮನಗೌಡನು ಸೂರ ಸಿಪಾಯಿ ದಂಡೋಜಿ ಜೊತೆ ಅದು ಯಿದು ಮಾತಾಡುತ್ತಾ ಮಾತಾಡುತ್ತಾ ಫಲಾನ ದಿವಸದಂದು ಹರಪನಳ್ಳಿಯ ಬಿಡದಿ ಮನೆಯಲ್ಲಿ ಕಳೆದೆರಡು ದಿವಸಗಳಿಂದ ಸ್ಟೂವರ್ಟನ ಕರೆಗಾಗಿ ಯದುರು ನೋಡುತಲಿದ್ದನು. ಅಲ್ಲಿ ಆತನು ಯಾರೊಂದಿಗೂ ಕಲೆಯುವಂತಿರಲಿಲ್ಲ.. ಪಟ್ಟಣದ ಯಾವ ಕಡೆಗೂ ಹೋಗುವಂತಿರಲಿಲ್ಲ.. ತನ್ನ ಬಳಿಗೆ ಬಂದು ಹೋಗುತ್ತಿದ್ದಂಥವರು ಸೂಜಿಗೆ ಮುದ್ದುಕೊಟ್ಟಂತೆ ಅಗಾಧವಾಗಿ ಮಾತಾಡುತಲಿದ್ದರು. ಕ್ರಮೇಣ ಅವಯ್ಯಗೆ ಅರ್ಥವಾದದ್ದೇನೆಂದರೆ ತನ್ನನ್ನು ಗ್ರುಹಬಂಧನದಲ್ಲಿ ಯಿರಿಸಲಾಗಿದೆ ಯಂಬ ಸಂಗತಿಯು.. ಪಲಾಯನ ಮಾಡಬೇಕೆಂದರೆ.. ಅದೂ ಆಗುತ್ತಿಲ್ಲ.. ಯೇನು ಮಾಡುವುದಪ್ಪಾ ಯಂದು ಗವುಡನು ಯಸನ ಮಾಡುತ್ತಿರಬೇಕಾದರ ವಂದಿಬ್ಬರು ಸಿಪಾಯಿಗಳು ಬಂದು ಕರದೊಯ್ದು ಸ್ಟೂವರ್ಟನೆದುರು ಹಾಜರುಪಡಿಸಿದರು. ಅದೇ ಮೊದಲ ಸಲಕ್ಕ ತಾವಿಬ್ಬರು ಪರಸ್ಪರ ಭೆಟ್ಟಿಯಾದದ್ದು.. ವಳ್ಳೆ ಖಡುಗದಂತಿರುವನು ಗವುಡ ಯಂದು ಕುಂಪಣಿ ಅದಿsಕಾರಿಯೂ, ವಳ್ಳೆ ಯೀಟಿ ಯಿದ್ದಂತಿರುವನು ಸ್ಟೂವರ್ಟು ಯಂದು ಗವುಡನೂ ಅಂದುಕೊಂಡರು. ಸ್ಟೂವರ್ಟನು ತರುವಾಯ ವಂದರ ಮ್ಯಾಲ ವಂದರಂತೆ ಪ್ರಸ್ನೆಗಳನ್ನು ಹಾಕುತ್ತ ಹೋದನು. ಅದಕ ಗವುಡನು ಪ್ರತಿಯೊಂದಕೂ ಸಮಚಿತ್ತದಿಂದ ಜವಾಬು ಕೊಡುತ್ತ ಹೋದನು. ತಾನು ಕುಂಪಣಿ ಸರಕಾರದ ಯಿರುದ್ದ ಯಾವುದೇ ವÆರನ್ನು ಯತ್ತಿ ಕಟ್ಟುತ್ತಿಲ್ಲವೆಂದೂ, ಫಲಾನವೂರುಗಳಲ್ಲಿ ತಲೆದೋರಿರುವ ಅರಾಜಕತೆಯನ್ನು ಹೋಗಲಾಡಿಸುವ ಸಲುವಾಗಿ, ಸುಖ ನೆಮ್ಮದಿ ನೆಲೆಗೊಳ್ಳುವಂತೆ ಮಾಡುವ ಸಲುವಾಗಿ ಸಂಚಾರ ಮಾಡುತ್ತಿರುವುದಾಗಿ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದನು. ಅದಕ್ಕಿದ್ದು ಅದಿsಕಾರಿಯು ಯಿದಕ್ಕೆ ಸರಕಾರದ ಪರವಾನಿಗೆ ಪಡೆಯಬೇಕಿತ್ತಲ್ಲಾ ಯಂದು ಕೇಳಿದ್ದಕ್ಕೆ ಆ ರಣ ಭಯಂಕರ ಬಿರುದಾಂಕಿತನು ಯಾವ ಸರಕಾರ? ಯಾಕ ಪಡೆಯಬೇಕು? ಯಂದು ತುಟಿ ಜಾರಿ ನುಡಿದು ಯಿರುಕಿನಲ್ಲಿ ಸಿಕ್ಕುಕೊಂಡನು. ಅಂಥದೇ ಜವಾಬಿಗಾಗಿ ಯದುರು ನೋಡುತಲಿದ್ದ ಅದಿsಕಾರಿಯು “ಹ್ಹಾ.. ಯಾವ ಸರಕಾರ? ಯಾಕ ಪರವಾನಿಗಿ?” ಯಂದು