ವಿಷಯಕ್ಕೆ ಹೋಗು

ಪುಟ:Aramane.pdf/೩೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೀರು ಸುರುವುತಲೂ, ಸೀಗೇಕಾಯಿ ಪುಡಿಯಿಂದ ಅದರ ಮಯ್ಯನ್ನು ಗಸಗಸ ವುಜ್ಜುತಲೂ, ಮಜ್ಜಣವನ್ನು ತಾಸುಗಟ್ಟಲೆ ಮಾಡಿಸಿದರು.. ತರುವಾಯ ರೇಶಿಮೆ ಅರಿವೆಯಿಂದ ಮಯ್ಯ ತಂಗಲನ್ನು ವರೆಸಿದರು.. ಹೊಚ್ಚ ಹೊಸ ಬಟ್ಟೆಬರೆ ತೊಡಿಸಿದರು.. ಮುಖಕ ಅರುಷಣ ಕೊಂಬಿನ ಲೇಹ್ಯವ ಪುಸಿದರು.. ಲೋಬಾನದ ಹೊಗೆ ಆಡಿಸಿದರು.. ವುತ್ತುತ್ತಿ, ಕರಜೂರ, ದ್ರಾಕ್ಷಿ, ಗೋಡಂಬಿ, ಬಾದಾಮು ತಿನ್ನಿಸಿದರು.. ಕೆನೆವಾಲು, ನೊರೆವಾಲು ಕುಡಿಸಿದರು.. ಜೋಂಪಿನಿಂದ ತೂಕಡಿಸಲಾರಂಬಿsಸಿದ ವಸ್ತಿಯನ್ನು ತೂಗು ತೊಟ್ಟಿಲೊಳಗ ಮಲಗಿಸಿದರು.. ‘‘ಮಲಗವ್ವಾ ತಾಯಿ ಮಲಗವ್ವಾ ಮಾಮಾಯಿ’’ ಯಂದು ಪದ ಹಾಡುತ ತೂಗಿದರು.. ಹಂಗ ವಸ್ತಿಯು ಗಪ್ಪಂತ ಕಣ್ಣುಮುಚ್ಚಿ ಮೋಂಕಾರ ಸದ್ರುಸ ಗೊರಕೆಯನ್ನು...

ಹ್ಹಾ.. ಯಿನ್ನೇನು.. ತಾಯಿ ಸಾಂಬವಿ ನಿದ್ದೆಮಾಡುತಾಳ.. ಆಕೆ ಯಚ್ಚರಾಗುವುದರೊಳ ಗಾಗಿ ಹಿಡಿಯಲು ಬಂದ ಅಣ್ಣಂಗಳಿಗೆ ಅಜೇಯನಾಗಿ ವುಳಕೊಂಡಿರುವ ಮಾಬಲಿಯನ್ನು ಹಿಡಿಯಬೇಕದೆ, ಹಿಡಿದು ಕಟ್ಟಬೇಕದೆ! ಕಟ್ಟಿ ಸೊಕ್ಕಡಗಿಸಬೇಕದೆ.. ಅದನೆಂಗ ಹಿಡಿಯೋದು? ಯಂಬ ಪ್ರಸ್ನೆಯೊಂದೆ ನೆಲಮುಗುಲಿಗೇಕಾಗಿ ವುಳಕೊಂತು. ಸದರಿ ಸಮಸ್ಯೆಯನ್ನು ಬಗೆಹರಿಸಲು ನೆರೆತಿದ್ದ ಸಭೆಯ ಯಾರೊಬ್ಬರ ಬಾಯಿಯಿಂದ ವಂದೇ ವಂದು ಸರಿಯಾದ ಸಮಾಧಾನ ವುದುರಲಿಲ್ಲ.. ಯೀಟಿ ಭರಚಿ ಹಿಡಕೊಂಡು ಅದರ ಮ್ಯಾಲ ಯೇರಿ ಹೋಗುವಂತಿಲ್ಲ.. ಕಾಳಗ ಮಾಡುವಂತಿಲ್ಲ.. ಅದರ ಸರೀರದಿಂದ ವಂದೇ ವಂದು ಹನಿಯನ್ನು ನೆಲಕ್ಕ ವುದುರಿಸುವಂತಿಲ್ಲ.. ಯಿದು ವುಪಾಯದಿಂದ ಸಾಧಿಸಬೇಕಿರುವ ಗುರುತರ ಕಾರ್ಯವು.. ಯೇನು ಮಾಡುವುದು? ಹೆಂಗ ಮಾಡುವುದು? ದಾರಿ ಹುಡುಕಿರಪ್ಪಾ.. ದಾರಿ ಹುಡುಕಿರಿ.. ಯೀ ಪ್ರಕಾರವಾಗಿ ಕೇಳಿಕೊಂಡ ಹಿರೀಕರಿಗೆ ಗೊತ್ತಿಲ್ಲದ್ದೇನಯ್ತೆ?

ಹುಲಿ ಹಿಡಕೊಂಡು ಬರ್ರೆಂದರ ಯೇಳುಪಟ್ಟೆ ಹುಲಿಯನ್ನು ರೆಪ್ಪೆ ಮುಚ್ಚಿ ತೆರೆಯುವು ದರೊಳಗ ತಂದು ಮಲಗಿಸತೇವs ಸಿಮ್ಮಾನ ಹಿಡಕೊಂಡು ಬರ್ರೆಂದರ ಮಯ್ನ ಲಟಲಟ ಮುರಿಯುವುದರೊಳಗ ಹಿಡತಂದು ಕೆಡವತೇವss ಆದರs ಆ ಮಾಬಲಿ ಮಾಬಲನೇ ಸಯ್ಯಿ.. ಯಂದು ಜವಾಬು ನೀಡಿದರು ಕಿರೀಕರು...

ಅದರ ಹೊರ ರೂಪ ಕೋಣದ್ದೇನೋ ಸರೆ.. ಆದರ ಅದರೊಳಗ