ವಿಷಯಕ್ಕೆ ಹೋಗು

ಪುಟ:Aramane.pdf/೩೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬೇಕಾದರೂ ಸುಲಭವಾಗಿ ಆಕ್ರಮಿಸಬಹುದು.. ಯಿವರು ಪ್ರಗ್ನಾವಂತರಾಗಲಕ....

ಮನ್ರೋ ಸಾಹೇಬನು ಮಾತ್ರುಭಾಷೆಯಲ್ಲಿ ಶಿಕ್ಷಣ ಕೊಡಿಸಬೇಕೆಂದು ನಿರ್ದರಿಸಿ ಕೂಲಂಕಷ ಯೋಜನೆಯನ್ನು ತಯಾರಿಸಿ ಸರಕಾರದ ವರಿಷವಿರಿಗೆ ಕಳುಹಿಸಿರದೆಯಿರಲಿಲ್ಲ.. ಅದನ್ನು ಕಂಡು ಅವರು ಹುಬ್ಬೇಸಿರದೆ ಯಿರಲಿಲ್ಲ. ತಮ್ಮ ಸರಕಾರದ ರೀತಿ ರಿವಾಜುಗಳನ್ನು ಅರ್ಥ ಮಾಡಿಕೊಳ್ಳುವ ಸಲುವಾಗಿ, ಆಡಳಿತದಲ್ಲಿ ಸ್ವಾಮಿನಿಷೆವಿಯಿಂದ ಭಾಗಿಯಾಗುವ ಸಲುವಾಗಿ ಸದರಿ ದೇಶದ ಸಾಮಾನ್ಯ ಪ್ರಜೆಗಳಿಗೆ ಯಿಂಗ್ಲೀಷು ಭಾಷೆಯಲ್ಲಿ ಶಿಕ್ಷಣ ಕೊಡಿಸಬೇಕೆಂದು ತಾಕೀತು ಮಾಡದೆ ಯಿರಲಿಲ್ಲ.. ಸರಕಾರದ ಯೀ ಸಮಾಜ ಯಿರೋಧೀ ನಿಲುವಿನಿಂದ ತನಗೆ ನಿರಾಸೆಯಾಗದೆ ಯಿರಲಿಲ್ಲ.. ಆದರೆ ತಾನೇನು ಮಾಡಲಾದೀತು. ಯಲಮೋ ಮನ್ರೋ! ಯಂದು ತನ್ನನ್ನು ತಾನು ಸೊಯಂ ನಿಂದನೆ ಮಾಡಿಕೊಳ್ಳದ ಹೊರತು....

ಮನ್ರೋ ಯೀಗ ಸದ್ಯ ಬರೆಯುತಲಿರುವ ಗ್ರಂಥ ಯಾವುದಪ್ಪ ಅಂದರ.. ಅದು ತನ್ನ ಆತುಮಸಾಕ್ಷಿಗೆ ಸಂಬಂದಿsಸಿದ್ದು.. ತಾನು ನಿವ್ರುತ್ತನಾದ ನಂತರ.. ಅಷ್ಟೇ ಯಾಕೆ ತನ್ನ ಮರಣಾನಂತರ ಪ್ರಕಟವಾಗಲಿರು ವಂಥಾದ್ದು.. ಮನ್ರೋ ಅಂದರೇನು ಯಂಬುದನ್ನು ಮಾನವಕುಲಕ್ಕ ಅಚಂದ್ರಾರ್ಕವಾಗಿ ಪರಿಚಯಿಸಲಿರುವಂಥಾದ್ದು.. ಅದರೊಳಗ ತಾನು ಕಂಡುಂಡ ಅನುಭವಗಳನ್ನು ದಾಖಲು ಮಾಡುತವನೆ, ಅದರೊಳಗ ತನ್ನ ಅಸಹಾಯಕತೆಯನ್ನು ದಾಖಲು ಮಾಡುತವನೆ.

ಅತ್ತ ಅವತ್ತು ಬಳ್ಳಾರಿ ಕೇಂದ್ರಕಾರಾಗ್ರುಹದೊಳಗ ಫಲಾನ ದಿವಸ ಫಲಾನ ಮೂರ್ತದಂದು ರೆಡ್ಡಿಲೋ ರೆಡ್ಡಿಯೆನಿಸಿದ್ದ, ಬೊಬ್ಬಿಲಿ ಯಂಬ ಬಿರುದನ್ನು ಜನಸಾಮಾನ್ಯರಿಂದ ಪಡಕೊಂಡಿದ್ದ, ತನ್ನ ತುಟಿ ನಡುವೆ ಮುಗುಳುನಗೇನ ಮುಡಕೊಂಡಿದ್ದ, ವಂದೇ ಮಾತಲ್ಲಿ ಹೇಳಲಕಂದರೆ ಆಗ ತಾನೆ ಹುಟ್ಟಿದ ಮಗುವಿನಿಂತಿದ್ದ ನಾಗಿರೆಡ್ಡಿಯ ಆರೋಗ್ಯ ತಪಾಸಣೆ ಮಾಡಿದ ವಯ್ದ್ಯ ಬಿಕು ಬಿಕ್ಕಿ ಅಳುತ್ತ ಹೋದ. ಅವನೆದುರು ಮಂತ್ರಪಠಣ ಮಾಡುವಾಗ ಜೋಷಿ ಗದ್ಗದಿತನಾದ.. ಕುಂಪಣಿ ಅದಿsಕಾರಿಯೋರ್ವ “ನಿನ್ನ ಅಂತಿಮ ಆಸೆಯೇನು?” ಯಂದು ಕೇಳಿದ್ದಕ್ಕೆ ಯೇನೂ ಇಲ್ಲ ಯಂಬಂತೆ ತಲೆಯನ್ನು ಅಲ್ಲಾಡಿಸಿದ. ನಿಲುವಂಗಿ ತೊಡಿಸಿ.. ಫಲಾನ ಜಾಗಕ್ಕೆ ಕರೆದೊಯ್ದರು.. ಅದೇ ಪನಿಗೆಂದು ನಲಮಲಗೂಡೇಮಿನಿಂದ ವಂದೇ ಮಾತಿಗೆ ಬಂದಿದ್ದ....