ವಿಷಯಕ್ಕೆ ಹೋಗು

ಪುಟ:Aramane.pdf/೩೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಧೂಳೆಬ್ಬಿಸಿತು. ಅದು ಅಪಾಯದ ಮನ್ಸೂಚನೆ ಯಂದರ್ಥ ಮಾಡಿಕೊಂಡ ಭಟ್ರಾಜುವು “ಸ್ರೀಮನ್ ಮಹಾರಾಜದಿsರಾಜ.. ರಾಜಪರಮೇಸ್ವರಾss.. ಭಾಷೆಗೆ ತಪ್ಪುವ ರಾಯರ ಗಂಡss ಪರರಾಜ ಭಯಂಕರಾss ದುಷ್ಟ ಶಾರ್ದೂಲ ಮರ್ಧನss ಗಂಡಭೇರುಂಡಾss.. ಕುದುರೆಡವು ರಾಜ್ಯ ರಮಾರಮಣss” ಯಂದು ಮುಂತಾಗಿ ದ್ದೊನಿಯನ್ನು ಯೇರಿಸುತ್ತೇರಿಸುತ್ತ ಹೋಗಲು ಆ ದ್ದೊನಿಯ ತರಂಗಗಳು ಬಯಲು ತುಂಬಿ ಜೀಕರಿಸಲು.. ಅದರಿಂದ ಪುಳಕಗೊಂಡ ಸೂರನು ನ್ರುತ್ಯ ಗತಿಯಲ್ಲಿ ಥೋಂ ತನನನ ಹೆಜ್ಜೆ ಹಾಕುತ ತನ್ನ ಪ್ರಿಯತಮೆಯರ ಕಡೇಕ ವಾರೆ ನೋಟ ಬೀರಿದನು.. ಅವರಾದರೋ ಆನಂದಾತಿಶಯದಿಂದ ತುಂಬಿತುಳುಕಾಡುತಲಿದ್ದರು....

ಹೊಗಳು ಪದಗಳ ಸಲುವಾಗಿ ತಡಕಾಡಿದರೆಲ್ಲದು ತನ್ನನ್ನು ಕೋಡುಗಳಿಂದ ಯತ್ತಿ ವಗೆವುದೋ ಯಂದು ಹೆದರಿದ ರಾಜುವು ಛಟ್ ಛಟೀಲ್ ಯಂಬ ಸೀಸಪದ್ಯವನ್ನೂ, ಗುಡ್ ಗುಡಿಲ್ ಯಂಬ ಕಂದ ಪದ್ಯವನ್ನೂ ಸುಶ್ರಾವ್ಯದಿಂದ ಹಾಡಿದನು. ತದನಂತರ ಮತ್ತೇಭಯಿಕ್ರೀಡಿತದಲ್ಲಿ ‘ನೀನು ಕ್ರುತಯುಗದಲ್ಲಿ ಯಿಸ್ವಾಮಿತ್ರಮುನಿವರೇಣ್ಯನ ನೇತ್ರಗಳೊಳಗಡಗಿದ್ದೀ.. ತ್ರೇತಾಯುಗದಲ್ಲಿ ದಶಾನನ ಹತ್ತೂ ತಲೆಗಳೊಳಗ ಅಡಗಿದ್ದೀ..ದ್ವಾಪರದಲ್ಲಿ ದುರ್ಯೋಧನನ ತೊಡೆಯೊಳಗಡಗಿದ್ದೀss.. ಮನುವಂತರಗಳನು ಲೀಲಾಜಾಲವಾಗಿ ದಾಟುತ್ತ ಕಲಿಯುಗ ಪ್ರವೇಶ ಮಾಡಿರೋ ನೀನು ಅಸಾಮಾನ್ಯ ಪರಾಕ್ರಮಿಯು.. ಕವುರವಾsss.. ಮಹಾ ಕವುರವಾsss... ಕಾಲಸೂತ್ರಾsss.. ಅಸಿ ಪತ್ರವನಾsss.. ಸೂಕರ ಮುಖಾsss.. ಅಂಧ ಕೂಪಾsss.. ಕ್ರಿಮಿ ಭೋಜನಾsss.. ತಪ್ತ ಸೂರ್ಮೀsss.. ವಜ್ರಕಂಟಿಕಾssss.. ಯಿವೇ ಮೊದಲಾದ ಯಿಪ್ಪತ್ತೊಂದು ನರಕಗಳನ್ನು ಲೀಲಾಜಾಲವಾಗಿ ದಾಟಿ, ಸುಖಸಂಪತ್ತುಗಳಿಗಾಗರಮಾದ ಸೊರ್ಗಲೋಕದ ಮೂಲಕ ಹಾದು ಕಲಿಯುಗವನ್ನು ಪ್ರವೇಶ ಮಾಡಿರುವಂಥಾ ನೀನು...

ಮಹಾಸ್ರಗ್ಧರಾದಲ್ಲಿ...

ಯಲಯ್ ಸೂರ ಮಹಾಶಯನೇ.. ನಿನ್ನ ಪವುರಾಣಿಕ ಹಿನ್ನಲೆಯನ್ನು ಯೀ ಪ್ರಕಾರವಾಗಿ ಯಿವರಿಸುತ್ತೇನೆ. ಚಿತ್ತವಿಟ್ಟು ಆಲಿಸುವಂಥವನಾಗು. ದಕ್ಷಬ್ರಮ್ಮನಿಂದ ಧರಣಿಯಲ್ಲಿ ಜನಿಸಿದಾಕೆಯಾದ ದಿತಿಯೇ ನಿನ್ನ ಆದಿಮಾತ್ರುಮೂರ್ತಿಯು, ಆಕೆಯ ಪುಣ್ಯವುದರದಿಂದ ಜನಿಸಿದವರು ಯಾರು