ಹಿಡಕೊಂಡರು.. ಯಂಟಸ್ವಾಮಿ ವಕ್ಕಲು ಮಂದಿ ಯೀಟಿಗಳನ್ನು ತೆಗೆದುಕೊಂಡರು.. ಅದನು ನೋಡುತಲಿದ್ದ ಕೆಚ್ಚುಗಾರ ಮುಂಡೇರು, ನೆಗಾರ ಮುಂಡೇರು “ತಾಯಿss ಸಾಂಬವೀsss ಭೂತಬಿಲ್ಲೆಯ ಹೆಂಡತಿಯ ಸವುಭಾಗ್ಯೇವ ಕಾಪಾಡವ್ವಾ” ಯಂದು ಕಯ್ನ ಮುಗುದು ಬೇಡಿಕೊಳ್ಳುತ್ತಿರುವಾಗ್ಗೆ, ಹುಟ್ಟು ಮಾರ್ಗದೆಸೇಲಿದ್ದ ಭೂತಬಿಲ್ಲೆಯು ವುರಿಭಂಡಾರದೋಪಾದಿಯಲ್ಲಿ ವÆರ ಮ್ಯಾರೆಗುಂಟ ನಡೆಯುತ್ತಿರುವಾಗ್ಗೆ ಆಕಾಸ ಮಾರ್ಗದಲ್ಲಿ ಚಂದ್ರಾಮನು ಅವಿತಿಟ್ಟುಕೊಳ್ಳಲು ವಂದು ತುಂಡು ಮೋಡಕ್ಕಾಗಿ ಹುಡುಕಾಡುತ್ತಿದ್ದಾನೆ ಸಿವನೇss..
ನಿನ್ನ ಮಾಯೇನ ಕಂಡವರಿಲ್ಲ ಸಾಂಬವೀ..
ನಿನ್ನ ಕೂಡೆ ಯುದ್ಧ ಮಾಡಿ ಗೆದ್ದೋರಿಲ್ಲ ಸಾಂಬವೀss...
ನೀನು ಬೂದಿ ಮುಚ್ಚಿದ ಕೆಂಡ ತಾಯೀss
ಭೂಲೋಕಕುದ್ದಂಡೆ ತಾಯೀsss..
ಸರುವರ ನಾಲಗೆ ವಳಗ ತುಳುಕಾಡುತ ನೀನು ಯಲ್ಲಲ್ಲಿದೀ ಅಂದರೆ ಅಲ್ಲೆಲ್ಲ ಅದೀ, ನಿನ್ನ ನೆನೆಯೋರ ಬಾಯಿ ಆರಬಾರದು.. ನಡೆವ ಅಂಗಾಲಲ್ಲಿ ಅಪ್ಪುಳಿ, ಬೊಬ್ಬುಳಿ ಯೇಳಬಾರದುss.. ಬೀಸುದೋಳು ಬಡವಾಗಬಾರದು.. ಬಾಯೊಳಗಿನ ತೊಂಬಲ ಕರಗಬಾರದು.. ಭಕುತಾದಿ ಮಂದಿಯನ್ನು ಹಂಗ ಸಲುವೇ ಮಂಗಳವಾರದ ಮಾಯಕಾರ್ತೇ.. ಬುಧವಾರದ ಬುದ್ಧಿವಂತೇ.. ಗುರುವಾರದ ಗುರುತ್ಮವಂತೆ.. ಸುಕ್ಕುರುವಾರದ ಸೂಸ್ತರ ರಮಣಿಯೇ.. ಸಣಿವಾರದ ಸನ್ನಡತೆಯೇ.. ಆಯ್ತವಾರದ ಆದಿಲಚುಮಿಯೇ.. ಹಿಂಗss ಮುಂತಾಗಿ ಮಿತ್ರೇರು ಹಾಡುತಲಿದ್ದ ಗುಣಗಾನವನ್ನು ಕೇಳಿಸಿಕೊಂಡ ಸರುವ ಮುನ್ನೂರು ಕೋಟಿ ದೇವಾನುದೇವತೆಗಳು ಅಗೋಚರ ಸ್ಥಿತಿಯಲ್ಲಿ ಸದರಿ ಪಟ್ಟಣದ ಕಡೇಕ ದಯಮಾಡಿಸುತಿರುವಾಗ್ಗೆ.. ವಂದೊಂದು ಜೀವವು ತಣ್ಣಗಾಗತಯ್ತೆ.. ಅನ್ನದ ಮದ ಅಳೀತಯ್ತೆ.. ತನುವಿನ ಮದ ತಣ್ಣಗಾಗತಯ್ತೆ.. ತಣ್ಣಗಾಗುತಲಿದ್ದಂಥ ಪ್ರತಿಯೊಂದು ಜೀವಿಯು ಭೂತಬಿಲ್ಲೆ ಅತ್ತ ಮರೆಯಾಗುತ್ತಲೇ ಅಮ್ಮವಾರಿ ನಿದಿsಸ್ಥಳಕ್ಕ ಹೋಗಿ ಜಗಾನುಜ್ಯೋತಿ ಯಂಬಂತೆ ನೋಡುತಲಿದ್ದ ಚಂಡಮಾಶಯನ ದರುಸನ ಪಡಕಂತು. ತರುವಾಯ ಪರಾನು ಜ್ಯೋತಿ ಹೆಂಗಾಳ? ಜಗಾನು ಜ್ಯೋತಿ ಹೆಂಗಾಳ? ಯಂದು ಕನವರಿಕೆ ಮಾಡುತ ಬಂದು ನೋಡುತದ....