ವಾಯುಪುತ್ರನ ಯಿಯಿಧ ಭಂಗಿಗಳನ್ನು ಅಭ್ಯಾಸ ಮಾಡಿದ.. ಅಂತಿಮವಾಗಿ ಮಾರುತಿಯ ಸಾಕ್ಷಾತ್ಕಾರ ಪಡಕೊಳ್ಳುವಲ್ಲಿ ಯಶಸ್ವಿಯಾದ..
ಯಡಗಯ್ಲಿ ಗದೆಯನ್ನೂ, ಬಲಗಯ್ಲಿ ಸಂಜೀವಿನಿ ಪರುವುತವನ್ನೂ, ಹಿಡಕೊಂಡಿರುವ ಆಂಜನೇಯಯ ಸ್ವಾಮಿ ಆಕಾಶಮಾರ್ಗವಾಗಿ ವಂದೆರಡು ಮೋಡಗಳ ನಡುವೆ ಹಾರುತ್ತ ಸಾಗಿರುವನು. ವಪ್ಪಿಗೆ ಪಡೆಯುವ ನಿಮಿತ್ತ ಸೊಯಂ ಸೇವಕರೊಡನೆ ರಜತಾಚಾರ್ಯನು ಮೋಕ್ಷ ಅಗ್ರಹಾರಕ್ಕೆ ಹೋಗಿ ಅಣಿಯಾಂಡವ್ಯಮಾಚಾರ್ಯರಿಗೆ ತೋರಿಸಿದನು. ಅವರು ಅದನ್ನು ಪರಾಮರ್ಸಿಸಿದರು. ಮೆಚ್ಚಿದರು, ‘ದೀರ್ಗಾಯುಷ್ಮಾನ್ ಭವ’ ಯಂದು ಹರಿಸಿದರು, ಅದಕ್ಕೆ ‘ಜಯ್ ಭಜರಂಗಬಲಿ’ಯಂದು ನಾಮಕರಣ ಮಾಡಿದರು.. ಹೇಳುವುದ ಹೇಳಲಕ, ಕೇಳುವುದ ಕೇಳಲಕ ಸಮುಸ್ಕೃತ ಭಾಷೆಯನ್ನು ಬಳಕೆ ಮಾಡುವುದನ್ನು ಅಪ್ಪೀ ತಪ್ಪೀ ಮರೆಯಲಿಲ್ಲ..
‘ಜಯ್ ಭಜರಂಗಬಲಿ’ಯಂದು ನಿನಾದಗಯ್ದು ಅವರು ತಮ್ಮ ತಮ್ಮ ಅಗ್ರಹಾರಗಳನ್ನು ಸೇರಿಕೊಂಡರೋ ಸೇರಿಕೊಂಡರು. ತಮ ತಮ್ಮ ಅಗ್ರಹಾರದ ಬಾಲಕ, ಬಾಲಕಿಯರು ಹೆಂಗಿರಬೇಕು? ಹೆಂಗಿರಕೂಡದು? ಮುದುಕ ಮುದುಕಿಯರು ಹೆಂಗಿರಬೇಕು? ಹೆಂಗಿರಕೂಡದು? ಯಿವಾಹಿತರು ಹೆಂಗಿರಬೇಕು? ಹೆಂಗಿಕೂಡದು? ಗ್ರುಹಸ್ಥಾಸ್ರಮಧರ್ಮ: ವಾನಪ್ರಸ್ತಾಸ್ರಮಧರ್ಮ ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಯಂದು ಮುಂತಾಗಿ ನಿರ್ದೇಸನ ಮಾಡಲಾರಂಭಿಸಿದರು. ಪ್ರತಿಯೊಬ್ಬರೂ ಯಿಂತಿಷ್ಟೇ ಸಂಖ್ಯೆಯಲ್ಲಿ ರಾಮನಾಮ ಜಪಿಸಬೇಕೆಂದು ಆಗ್ನೆ ಮಾಡಲಾರಂಬಿsಸಿದರು. ಜೊತೆಗೆ ತಮ್ಮ ಅಗ್ರಹಾರದ ಸಮವಸ್ತ್ರವ ಕೇಸರಿಮಯ ವಾಗಿರಬೇಕೆಂದು ಕೂಡ. ತಮ್ಮ ನೇತಾಜಿ ಅಣಿಮಾಂಡವ್ಯಮಾಚಾರ್ಯರವರ ನಿರ್ದೇಸನದ ಪ್ರಕಾರ ತಮ ತಮ್ಮ ಅಗ್ರಹಾರಗಳದ್ದೇ ಆದ ಸಂಯಿಧಾನ, ನೀತಿಸಂಹಿತೆ, ದಂಡಸಂಹಿತೆ ರಚನೆ ಮಾಡಿಕೊಳ್ಳದೆಯಿರಲಿಲ್ಲ ಆ ಹಿಂದೂ ರಕ್ಷಕ ಭಟರು. ಯಾರು ಸಂಯಿಧಾನ ಯಿಧಿಯಿಧಾನಗಳನ್ನು ಚಾಚೂ ತಪ್ಪದೇ ಪಾಲಿಸುವುದಿಲ್ಲಮೋ, ಯಾರು ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಅಂಗ್ರೇಜಿಯ ಕಡೇಕ ವಲಿದು ಸಹಕರಿಸುವರೋ, ಅಂಥವರನ್ನು ತಮ್ಮ ಗೂಢಚಾರರಿಂದ ಪತ್ತೆಹಚ್ಚಿ ದಂಡ, ಶಿಕ್ಷೆ ಯಿಧಿಸಲಾರಂಭಿಸಿದರು. ಮೊದಲ ಮೊದಲು ತರೆಮರೆಯಲ್ಲಿ, ಗುಟ್ಟಾಗಿ ನಡೆಯುತಲಿದ್ದ ಯೀ ಸಂರಕ್ಷಣಾ ಕಾರ್ಯಸೂಚಿಯು ಬರುಬರುತ್ತ