ವಿಷಯಕ್ಕೆ ಹೋಗು

ಪುಟ:Aramane.pdf/೩೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಾದ್ವಿಯು ಪತಿಯ ಜೀವ ಸಂರಕ್ಷಣೆ ಮಾಡುವುದು ಸತಿಧರ್ಮಯಂದು ಭಾವಿಸಿದಳು.. ನೂರಾರು ದೇವರು ದಿಂಡಿರುಗಳ ಮೊರೆ ಹೋದಳು. ದುರ್ಗಕ್ಕೆ ಹೋಗಿ ವುಚ್ಚೆಂಗೆವ್ವನ ಗುಡೀಲೊಂದು ಅರ್ಧಮಣ ತೂಕದ ಗಂಟೆ ತೂಗುಬಿಟ್ಟಳು, ಹಂಪೆಯ ಭುವನೇಸ್ವರಿ ದೇವಿಗೆ ವಂದು ವಕ್ಕಳದ ಗದ್ದೆಯನ್ನು ಧಾರಾಪುರ್ವಕವಾಗಿ ಕೊಟ್ಟಳು, ಪ್ರಾಪ್ತ ಷಡ್ಡರ್ಸನಾಚಾರ್ಯ ವ್ಯಾಖ್ಯಾನ ಸಿಂಹಾಸನಾಧೀಸ್ವರ ಸ್ರುಂಗೇರಿ ಸ್ತ್ರೀ ನರಸಿಂಹ ಭಾರತೀ ಸ್ವಾಮಿಗಳ ಸನ್ನಿದಿsಗೆ ಬೆಳ್ಳಿಯ ಪುಜಾ ಸಾಮಾನುಗಳನ್ನು ಭಕುತಿಪುರಕವಾಗಿ ಕಳುವಿಕೊಟ್ಟಳು, ಯದುರು ಮುಖಾಂಜನೇಯ ಸ್ವಾಮಿಗಂತೂ ಸರೇ ಸರ್ರೆ...

ತನ್ನ ಧರ್ಮಪತ್ನಿ ಭುವನೇಸ್ವರಿಯ ಅಲವುಕಿಕ ವರ್ತನೆಗೆ ರೋಸಿ ಆರ್ಥಿಕ ದಿಗ್ಬಂಧನ ಯಿಧಿಸಿದ ಹಂಪರಸಪ್ಪಯ್ಯನವರು ಬಾಗುಳಿಗೆ ಕಾರ್ಯನಿಮಿತ್ತ ಹೋಗಿ ದೇಮೋತ್ತಮ ಭಟ್ಟ, ಹನುಮಂತ ಭಟ್ಟ, ನ್ರುಸಿಂಹಭಟ್ಟರನ್ನು ಬೆಳಗಿನ ಮೂರನೇ ಜಾವದಲ್ಲಿ ಕಂಡು ಶತ್ರುನಾಶಕ್ಕೆಂದೇ ಯಿಶೇಷ ಜಪತಪ ಮಾಡಬೇಕೆಂದು ಯಿನಂತಿ ಮಾಡಿಕೊಳ್ಳದೆಯಿರಲಿಲ್ಲ. ನಿಧಿ, ನಿಕ್ಷೇಪ, ಜಲತರು, ಪಾಷಾಣ, ಅಕ್ಷಿಣಿ, ಆಗಮಸಿದ್ದ ಸಾಧ್ಯಗಳೆಂಬ ಅಷ್ಟಭೋಗ ಯಿದ್ಯೆಗಳನ್ನು ಕರಾತಲಮಲಕ ಮಾಡಿಕೊಂಡಿದ್ದ ಮತ್ತು ಪುತ್ರಪವುತ್ರಪಾರಂಪರ್ಯದಲ್ಲಿ ಸ್ವಾಸ್ಥಿಯನ್ನು ಅನುಭವಿಸುತಲಿದ್ದ ಅವರು ತಮ್ಮ ಆ ಹತ್ತಿರದ ಬಂಧುವಿನ ಪ್ರಾಣ ಭಯವನ್ನು ಅರ್ಥಮಾಡಿಕೊಂಡು ವಡನೆ ಮನವಿಯನ್ನು ಪುರಸ್ಕರಿಸಿದರು. ಸದ್ಯಕ್ಕೆ ವಂದು ತಾಯತವನ್ನು ಮಂತ್ರಿಸಿ ಬಲದೋಳಿಗೆ ಕಟ್ಟಿ, ಯಿನ್ನು ನಿಶ್ಚಿಂತರಾಗಿರಿ ಯಂದು ಧರ್ಯ ತುಂಬಿ ಕಳುವಿಕೊಟ್ಟರು. ಮಾರು ಯೇಷದಲ್ಲಿ ಹಂಪರಸಪ್ಪಯ್ಯನು ಅಂಗರಕ್ಷಕರೊಂದಿಗೆ ಹರಪನಹಳ್ಳಿ ಕಡೇಕ ಹೊಳ್ಳಿದರು. ಆ ತನ್ನ ಅಂಗರಕ್ಷಕರ ಪಯ್ಕಿ ಯಾವ ಬ್ರಹ್ಮಹತ್ಯಾದೋಷಕ್ಕೆ ಸೊಪು ಹಾಕದವನೂ, ಭರಮನಗವುಡನ ಕಟ್ಟಾಬಿsಮಾನಿಯೂ ಮತ್ತು ಹರಿಯಮ್ಮಾಜಿಯ ನುಡಿಸೇವಕನೂ ಆಗಿದ್ದಂಥ ಬಲವಂತನೆಂಬ ಯೀರ ಸಿಪಾಯಿಯು ಯಿದ್ದನು. ಅವನು ನಯವಂಚಕ ಹಂಪರಸಪ್ಪಯ್ಯನವರನ್ನು ಯೀಗ ಕೊಲ್ಲಬೇಕು.. ಆಗ ಕೊಲ್ಲಬೇಕು ಯಂದು ದಾರಿವುದ್ದಕ್ಕೂ ಪ್ರಯತ್ನಪಡದೆ ಯಿರಲಿಲ್ಲ.. ಆದರ ಪ್ರಧಾನ ಕಾರಖೂನನ ನಸೀಬು ಹರಪನಹಳ್ಳಿ ತಲುಪುವವರೆಗೆ ನೆಟ್ಟಗಿತ್ತು..

ತಲುಪಿದ ಯರಡೇ ದಿವಸ ಬ್ರಾಹ್ಮಿ ಮುಹೂರ್ತದಲ್ಲಿ ಯಂದಿನಂತೆ ಪತಿ ದಯವದ ಪಾದಕ್ಕೆ ಹಣೆ ಮುಟ್ಟಿಸಲಕೆಂದು ಭುವನೇಸ್ವರಿ ಹಲವು ವರುಷಂಗಳಿಂದ