ವಿಷಯಕ್ಕೆ ಹೋಗು

ಪುಟ:Aramane.pdf/೪೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆತುಮವನ್ನು, ಪುರುಷತ್ವವನ್ನು. ಪುವ್ವುಲ ರಾಜವಮುಸದ ಬೆನ್ನೆಲುಬನ್ನು. ಚರಿತ್ರೆಯೊಳಗ ಯಾವುದೇ ಸಿಮ್ಮಾಸನವು ಸುಮಸುಮಕ ದಕ್ಕಿರುವುದುಂಟಾ? ಅದರ ವಶವರ್ತಿಗಾಗಿ ಘನಘೂೕರ ಕಾಳಗ ನಡೆಯೋದು ಬ್ಯಾಡವಾ? ನೆತ್ತರ ಹೊಳೆ ಹರಿಯೋದು ಬ್ಯಾಡವಾ? ಅಂಥ ಥಾಮಸು ಮನ್ರೋನಂಥಾತನೇ ಅದಕ ಸಣುಮಾಡಿ ಅಮಾನತಿನಲ್ಲಿಟ್ಟಿರುವನು. ಅಂಥಾದ್ದರಲ್ಲಿ ವಬ್ಬ ಯಕಃಶ್ಚಿತ್ ಪಿಕದಾನಿ ಹಿಡಿಯುತ್ತಿದ್ದೋನು, ಅರಮನೆಯ ಯಂಜಲುಂಡು ಬೆಳೆದೋನು ತಾನು ಕುಂಡ್ರಲಕ ಸಿಮ್ಮಾಸನ ಬಗಸಿರುವನಲ್ಲಾ.. ಅಯ್ಯೋ ಯಿದಿsಯೇ? ಯೇನಿದೇನಿದು ನಿನ್ನೀ ಆಟವು, ಮಾಯಮರ್ಮವು..?

“ಕೊಡೋದು ಬಿಡೋದು ದೊಡ್ಡ ಮಾತಲ್ಲ ಕನರಪ್ಪಾ. ಸೊಲುಪ ಯೋಚನೆ ಮಾಡಿರಿ!” ಯಂದು ರುದ್ದೆಯು ಗಿಣಿಗೆ ಹೇಳಿದಂತೆ ಹೇಳಿದಳು, ಅದಕ ಯೀರಯ್ಯನಾಗಲೀ, ಕಜ್ಜಾಲಯ್ಯನಾಗಲೀ ಮಣಿ ಹಾಕಲಿಲ್ಲ.. ಅದರ ಮ್ಯಾಲ ಯಿರಾಜಮಾನಳಾಗಲಕ ಯಿಚ್ಫಾ ಪಟ್ಟಿರುವುದು ಯೀರೇಳು ಲೋಕಗಳಿಗೊಡತಿಯಾಗಿರುವಂಥ ಲೋಕಮಾತೆಯು.. ವಂದೇ ಮಾತಿಗೆ ಕೊಟ್ಟು ಸಾಂಬವಿಯ ವಲುಮೆಗೆ ಪಾತ್ರಳಾಗುವುದು ಬಿಟ್ಟು ಮುದೇದು ಮಿಜಿಮಿಜಿ ಮಾಡುತ್ತಿರುವುದಲ್ಲ.. ಮುಹೂರ್ತವೆ ತಪ್ಪಿಸಲಕ ಯಿದು ಸಂಚು ನಡೆಸಿದಂಗಯ್ತೆ., ‘‘ಯೇನವ್ವಾ ವಳ್ಳೇ ಮಾತಿನಿಂದ ನೀನೇ ಸಂತೋಷದಿಂದ ಕೊಡುವಿಯೋ.. ಯಿಲ್ಲಾ ನಾವದನು ಬಲವಂತದಿಂದ ಹೊತ್ತೊಯ್ಯಬೇಕೋ!’’ ಯಂದು ಕಜ್ಜಾಲಯ್ಯ ನಿಷುವಿರವಾಗಿ ಕೇಳಿದೊಡನೆ ಮಂದಿ ಅವುದೂ ಯಂದು ಕೂಗಿತು, ಹಿಂದೇಸಿಂದ ನಿವನ್ನಾಮ ಪಾರೊತಿಯು..

ಅರಮನೆಯೊಳಗಿಂದ ಘನಸ್ತ ಸೊಸೆಯರ ಪಯ್ಕಿ ವಬ್ಬಾಕಿ ಮೋಡೋಡಿ ಬಂದು “ಭೇ ಯತ್ತೇ, ಅದರ ಮ್ಯಾಲ ಹತ್ತೋರಿಲ್ಲ, ಯಿಳಿಯೋರಿಲ್ಲ. ಅರಮನೆಯೊಳಗ ಅದನಿಟುಕೊಂಡು ಮಾಡೋ ದೇನಯ್ತೆ, ಅದೇನು ವುಂಬಲಕಿಡ್ತದಾ.. ಪ್ರಜೆಗಳಿದ್ದರ ಅರಮನೆ, ಪ್ರಜೆಗಳಿದ್ದರ ಸಿಮ್ಮಾಸನ, ಪ್ರಜೆಗಳೇ ಕೇಳಲಕ ಹತ್ತ್ಯಾರಂದ ಮ್ಯಾಕ ಕೊಟ್ಟು ಕಳುವು.. ಕೊಡೋದಾಗದಿದ್ದರ ತಗೊಂಡು ಹೋಗಿರಪ್ಪಾ ಅನ್ನು.. ಅದನು ಬಿಟ್ಟು ತಕರಾರು ಯತ್ತಿದ್ದೀಯಲ್ಲಾ..” ಯಂದು ಕೆಡ ಬಡ ನುಡಿದು ‘‘ಯತ್ತಲಕಾಗಲೀ, ಕೊಡಲಕಾಗಲೀ ನಮ್ಮ್ಯಾರ ಮಯ್ಯೊಳಗ ಕಸುವಿಲ್ಲ.. ಯೀ ಅರಮನೆ ನಿಮ್ದು, ನೀವೇ ವಳಗಡೀಕ ಬಂದು ತಗೊಂಡು ಹೋಗಿರಪ್ಪಾ.. ಅದು ದೇವರ ಕಾರ್ಯೇವಿಗೆ