ವಿಷಯಕ್ಕೆ ಹೋಗು

ಪುಟ:Aramane.pdf/೪೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹೊತ್ತು ಮುಂದಕ ಹೊಳ್ಳದಂಗಾಗಿತ್ತು, ಹಿಂದಕ ಹೊಳ್ಳದಂಗಾಗಿತ್ತು, ಅದು ನಿಂತಲ್ಲೆ ನಿಂತೇ ಯಿತ್ತು. ಅಂಥ ಮುಚ್ಚಂಜೆ ಮೂರುಗಳಿಗೆ ಹೊತ್ತಿನಲ್ಲಿ ಸಿಡೇಗಲ್ಲು ದ್ವಾರ ಬಾಕುಲಿಂದ ದಯಮಾಡಿದ ದಿಬ್ಬಣವು ಹತ್ತು ಮಾರು ದೂರದಲ್ಲಿದ್ದ ಮಾಸ್ತೀ ಬಾಕುಲು ತಲುಪೋ ಹೊತ್ತಿಗೆ ಮುಗುಲ ಆಕಾಸ ಮಾರ್ಗದಲ್ಲಿ ನಚ್ಫತ್ರಗಳು ಹೊತ್ತನ್ನು ಲೆಕ್ಕಿಸದೆ ನಡಕೋತss ನಡಕೋತ.. ಆಟು ದೂರಕ ಬಂದಿದ್ದವು.. ಮುಂದಲಕಿದ್ದ ನಚ್ಫತ್ರಗಳನ್ನು ಹಿಂದೇಸಿಂದ ಬಂದು ತಳ್ಳುತಲಿದ್ದ ನಚ್ಫತ್ರಗಳೆಷ್ಟೋ? ಹಿಂದಲಕಿದ್ದ ನಚ್ಫತ್ರಗಳನ್ನು ಮುಂದೇಸಿಂದ ನೂಕುತಲಿದ್ದ ನಚ್ಫತ್ರಗಳೆಷ್ಟೋ? ನಚ್ಫತ್ರಗಳ ವಡತಿಯಾಗಿದ್ದಂಥ ಸಿವಸರಣೆ ಚೆನ್ನವ್ವ ಮತ್ತು ಧರುಮ ದೇವತೇರು ಭೂಲೋಕದಿಂದ ಹೋಗಿ ಅಲ್ಲಿದ್ದಳಷ್ಟೆ. ಅವರು ಕಾಯಿದೆ ಶೀರಾ ಅವೆಲ್ಲವುಗಳ ಮುಖಂಡತ್ವ ವಹಿಸಿ ತಾಯಿ ದಿಬ್ಬಣ ಕಣ್ತುಂಬ ನೋಡಲಕ ಅನುವು ಮಾಡಿ ಕೊಟ್ಟಿದ್ದರು.

ಅಲ್ಲಿಗೆ ಮೂರೂವರೆ ಮಾರು ದೂರದಲ್ಲಿ, ಅಂದರೆ ವೂರಮ್ಮನ ಬಂiÀÄಲೂ ಅಂತ ಯೇನಿತ್ತೋ? ಅಲ್ಲಿ ಪೆದೋಬಂiÀÄ್ಯ ನಾಯಕ ಪಟ್ಟ ಯೇರುವ ಸಮಯಕ್ಕ ಯಾವ ಜಾಗದಲ್ಲಿ ಹತ್ತಿಪ್ಪತ್ತೂರ ಜಟ್ಟಿಗಳು ಮಲ್ಲಯುದ್ಧ ಮಾಡಿ ಪವುರುಷ ಮೆರೆದಾಡಿದ್ದರೋ, ಅವರ ಪಯ್ಕಿ ಅಯಿದಾರು ಮಂದಿ ಯೀರ ಮರಣ ಅಪ್ಪಿದ್ದರೋ, ಅಲ್ಲಿ ತಾಯಿ ಸಾಂಬವಿ ಹಾದಿ ಆಯಾಸ ಪರಿಹಾರ ಮಾಡಿಕೊಳ್ಳೋ ಸಲುವಾಗಿ ವಂಬತ್ತು ಘನ ಮೊಳ ವುದ್ದಗಲ ಯತ್ತರದ ವಂದು ಕಟ್ಟೆ ನಿರುಮಾಣ ಮಾಡಿದ್ದರು. ತಾಯಿಯ ಬಾಯಾರಿಕೆ ತೀರಿಸಲಕೆಂದು ಕೊಳಗಗಟ್ಟಲೆ ನೊರೆವಾಲು ಯಿಟ್ಟಿದ್ದರು, ತಾಯಿಯ ಹಸುವೆ ಪರಿಹಾರಾರ್ತವಾಗಿ ಹೋಳಿಗೆ, ಕರಿಗಡುಬು, ಹುಗ್ಗಿ, ಕರಚೀಕಾಯಿ ಮೊದಲಾದ ಪದಾರ್ಥಗಳನ್ನು ಯಿಟ್ಟಿದ್ದರು. ತಾಯಿ ಚಾವತ್ತು ವರಕ್ಕೊಂಡು ಜೋಂಪು ನಿದ್ದೆ ಮಾಡಲೀ ಅಂತ ಕವುದಿ, ಗುಡಾರ, ಚಾದರ, ತಲೆದಿಂಬು ಯಿವೇ ಮೊದಲಾದ ಹಾಸಿಗೊದ್ದಿಕೆಗಳನ್ನು ಯಿಟ್ಟಿದ್ದರು, ಅವ್ವನ ಸೆಕೆ ನೀಗಿಸಲಕಂತ ಚಾಮರಗಳನ್ನು, ಬೆಳದಿಂಗಳು ಬಿಸಿಲಾಗಿ ಸುರಿದಲ್ಲಿ ನೆರಳು ಮಾಡಲಕಂತ ಮುತ್ತಿನ ಗೊಂಡೇವ ಛತ್ರಿಗಳನ್ನೂ ಯಿಟ್ಟಿದ್ದರು. ಅವ್ವಗೆ ಬ್ಯಾಸರಿಕೆ ಆದಲ್ಲಿ ಅದನ್ನು ಕಳೆಯಲಕಂತ ಗೊಟ್ಟು ಪಾಪವ್ವ, ಪುಂಗಿ ನುಂಗವ್ವ, ಬಜ್ಜಿ ಕರಚವ್ವರೇ ಮೊದಲಾದ ಯಿಪ್ಪತ್ತೊಂದು ಮಂದಿ ಸೊಗಸುಗಾತಿಯರನ್ನು ಹಾಡಿಪಾಡಲಕಂತ, ನರ್ತನ ಮಾಡಲಕಂತ ಯಿಟ್ಟಿದ್ದರು. ಯೀ ಯೇರುಪಾಡಿನ ವುಸ್ತುವಾರಿ ನೋಡಲಕಂತ