ವಿಷಯಕ್ಕೆ ಹೋಗು

ಪುಟ:Aramane.pdf/೪೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಲು ವಯ್ಯಾರದಿಂದ ತನ್ನ ಹಿಂದುಗಡೇಕ ಹೊರಟು ನಿಂತ ಅವರನ್ನು ಹೊನ್ನವ್ವ ಗವುರವೂರವಕವಾಗಿ ಕರದೊಯ್ದು ತನ್ನ ಹರವನ್ನು ತುಂಬಿಸಿಕೊಂಡಳು. ಅವ್ವ ಬರಲಕ ವಂದೆರಡು ತಾನು ಬಾಕಿವುಳುದಯ್ತೆ ಅನುವಾಗ್ಗೆ ಸುರುವಾಯಿತು ನೋಡು ಸಿವನೇ ಯಿವರ ಸಡಗರ ಸಂಭರಮ. ಕಾಲಿಗೆ ಕಯ್ಗೆ ಅಂಟುತಯ್ತೆ ಯಂಬ ಕಾರಣಕ್ಕೆ ಕೆಸರು ಬುರುದೆಯನ್ನು ತುರ್ತುರಜೆಯ ಮ್ಯಾಲ ಕಳುವಿದ್ದೇನು? ತಮ ತಮ್ಮ ತಳದಲ್ಲಿದ್ದ ಮುಳ್ಳುಕಂಟೆ, ಚೂಪನೆಯ ಕಲ್ಲು ಗಿಲ್ಲುಗಳನ್ನು ಆಯ್ದು ವಗದದ್ದೇನು? ಅಲ್ಲೆಲ್ಲಾ ಫಳಫಳ ಮಿರುಗೋ ಬಂಗಾರದ ನುಸಿಯಂಥ ಮರಳನ್ನು ಹರವಿದ್ದೇನು? ಹೇಡಿಗಳನ್ನಲ್ಲಿಂದ ವಕ್ಕಲೆಬ್ಬಿಸಿದ್ದೇನು? ಹುವ್ವಿನ ಯಸಳನ್ನು ಹೋಲುವ ಬಣಬಣ್ಣದ ಮೀನುಗಳನ್ನು ತಮ್ಮೊಳಗ ತುಂಬಿ ಕೊಂಡಿದ್ದೇನು? ತಮ ತಮ್ಮ ಯಿಕ್ಕಲದಲ್ಲಿದ್ದ ಮುಳ್ಳಿನ ಗಿಡಗಳನ್ನು ಹುವ್ವಿನ ಗಿಡಗಳ ಹಿಂದಕ ಗದುಮಿದ್ದೇನು? ಕಾವ್ ಕಾವ್ ಯಂದರಚಬಾರದೆಂದೂ, ಕುಡಿದು ಯಂಜಲು ಮಾಡಬಾರದೆಂದು ಕಾಗೆಗಳಿಗೆ ಆದೇಸ ನೀಡಿದ್ದೇನು? ಗೂಗುಕ್ ಗೂಗುಕ್ ಯಂದು ಅಪಸಗುನ ನುಡಿಯಯ ಕೂಡದೆಂದು ಗೂಗೆಗಳಿಗೆ ಆಗ್ನೆ ಮಾಡಿದ್ದೇನು? ಯೀ ಪ್ರಕಾರವಾಗಿ ಹೊನ್ನಮ್ಮನ ಹಳ್ಳವು ಅಚ್ಫೋದಿತ ಸರೋವರವೇ ತಾನೆಂಬಂತೆ ಬೀಗಲಕ ಹತ್ತಲು...

ಸಿವನ್ನಾಮ ಪಾರೊತೀ ಪತಿ ಹರ ಹರ ಮಾದೇವss ಜಗದಂಬಾ.. ಜಗದಂಬಾ..

ಕಳಸಗಳೊಂದಿಗೆ ಅಯ್ನೂರುಮಂದಿ ಕಳಸಗಿತ್ತೇರು, ಕುಂಭಗಳೊಂದಿಗೆ ಸಾವುರದೊಂದು ಮಂದಿ ನಿತ್ರೇರು.. ಸಹಸ್ರದೀವಟಿಗೆಗಳ ಬೆಳಕೊಳಗ ಮಿರಮಿರನೆ ಮಿಂಚುತ್ತಿರಲು ಸಿಮ್ಮಾಸನಾರೂಢೆ ಜಗಾನು ಮಾತೆಯು ತನಗೆಂದೇ ಯೇರುಪಾಟು ಮಾಡಲಾಗಿದ್ದ ಹುವ್ವಿನ ಮಂಟಪದೊಳಗೆ ಯಿರಾಜಮಾನಳಾದೊಡನೆ ವುಘೕ.. ವುಘೕ.. ಆಗೊ ಆಚ್ಚೇಕಡೇಕ ನಿಲುಗಲ್ಲುಗಳನ್ನೇರಿದವರೆಷ್ಟೋ? ಯೀಗ್ಗೆ ಯಿಚ್ಚೇಕಡೇಕ ಡಡಯೇರಿ ನಿಂತವರೆಷ್ಟೋ? ತಾಯೀಯ ನೆನೆಯೂತ ವಂದೆಲೆ ವಂದಡಕೆ ವಂದು ದಮ್ಮಡಿ ಯಿಟ್ಟು ಬೆಳುದಿಂಗಳನ್ನು ಬಿಂದು ಬಿಂದುವಿನಲ್ಲಿ ಮುಡುಕೊಂಡಿದ್ದ ಹೊನ್ನಮ್ಮ ತಾಯಿಗೆ ಹರಿಬಿಟ್ಟು ಸಣುಮಾಡಿದವರೆಷ್ಟೋ? ಆಕೆಯ ಅಗಾಧ ಅಂತಃಕರಣಕ್ಕೆ ಬೆರಗಾದವರೆಷ್ಟೋ!