ಅದೇ ಹೊತ್ತಿಗೆ ಗಂಟಲಯ್ಯನು ಅಹಹಹಾ ತಾಯೇss.. ಆದಿ ಅನಾದಿ ಅನಂತ, ಅರ್ಭುಧ ತಮಂಧ, ತಂಡಜ, ವಾರಿಯುಕ್ತ, ಆಯುಕ್ತ, ಮುನಿರಣ, ಮಾನ್ಯರss ಯಂಬಿವೇ ಮೊದಲಾದ ಖಡುಗಾಲಾಪನೆ ಆರಂಬಿsಸಿದ ಹೊತ್ತಿನಲ್ಲಿ ತಮಗೆ ಕಣ್ಣು ಬಂದವೆಂದ ಕುರುಡರೆಷ್ಟೋ, ತಮಗೆ ಕಿವಿ ಬಂದವೆಂದ ಕಿವುಡ, ಕೆಪ್ಪರೆಷ್ಟೋ.
ಅವ್ವನ ಪವಾಡವು ಅಂದಿಗುಂಟು ಯಿಂದಿಗಿಲ್ಲಯಂಬುವ ರಣಹೇಡಿಗಳಿಗೆ ಖಡೇ.. ಖಡೇ.. ತಾಯಿ ಸಾಂಬವಿಯ ಪುಜೆ ಪುನಸ್ಕಾರಗಳು ಸಾಂಗೋಪಾಂಗವಾಗಿ ನೆರವೇರಲು.. ವಸ್ತಿಯು ಜಲನಿಧಿಯೊಳಗೆ ಮಿಂದು ಹೊಸ ಅರುವೆ ಧರಿಸಿಕೊಳ್ಳಲು.. ಪಯಿತ್ರಕೇಲು ತನ್ನೊಳಗ ಹೊಸ ವುದುಕು ತುಂಬಿಕೊಳ್ಳಲು..
- * * *
ಬಳ್ಳಾರಿ ಸೀಮೆಯೊಳಗ ತಲೆದೋರಿದ್ದ ಬೊಬ್ಬಿಲಿನಾಗಿರೆಡ್ಡಿಯನ್ನು ವುಪುಸಮ್ಮರಿಸಿದಷ್ಟು ಸುಲಭವಲ್ಲ ಕದಿರಿ ಸೀಮೆಯೊಳಗ ಹೊಸದಾಗಿ ತಲೆದೋರಿರುವ ಅಣಿಮಾಂಡವ್ಯ ಮಾಚಾರ್ಯರ ಸಾತ್ವಿಕ ವುಪಟಳವನ್ನು ಅಡಗಿಸುವುದು ಯಂದು ಯಸನ ಮಾಡುತಲಿದ್ದ ಥಾಮಸು ಮನ್ರೋ ಸಾಹೇಬನು ಅದೇ ತಾನೆ ಗೊನಗೊಂಡ್ಲ ಭೀಮರೆಡ್ಡಿಯ ಸುಪರ್ದಿಯಲ್ಲಿದ್ದ ಕರೂರರನ್ನು ವಶಪಡಿಸಿಕೊಂಡು ಅದಕ್ಕೆ ವಜ್ರಯಂಬ ಬಿರುದನ್ನು ದಯಪಾಲಿಸಿದನು. ಜನಸ್ತೋಮವು ಜಯಕಾರ ಮಾಡುತ ಬಿರುದನ್ನು ಸ್ವಾಗತಿಸಿತು. ಸರಕಾರಿ ದಪ್ತರುಕಡತಗಳಲ್ಲಿ ವಜ್ರದಕರೂರು ಯಂದು ನಮೂದಿಸಬೇಕೆಂದು ತನ್ನ ಕಯ್ಯಿಕೆಳಗಿನ ಅದಿsಕಾರಿಗಳನ್ನು ಆದೇಶಿಸಿದನು. ವಜ್ರದ ಗಣಿಗಾರಿಕೆಯಲ್ಲಿ ಸ್ಥಳೀಯರಿಗೆ ರೋಜಗಾರಿ ನೀಡುವುದಾಗಿಯೂ, ಬರಲಿರುವ ಆದಾಯದ ವಂದು ಭಾಗವನ್ನು ಸದರಿ ಗ್ರಾಮದ ಶ್ರೇಯೋಬಿರುದ್ಧಿ ಕೆಲಕಾರ್ಯಗಳಿಗಾಗಿ ವುಪಯೋಗಿಸುವುದಾಗಿಯೂ ಘೂೕಷಿಸಿದನು. ಭಾರಿ ಕರತಾಡನ ಕೇಳಿಬಂತು. ತನಗೆ ಪವುರ ಗವುರವ ನೀಡಲು ಬಂiÀÄಸಿದ ಯುವಕರಿಗೆ ಯಾವ ತಂಟೆತಕರಾರು ಮಾಡದೆ ವಜ್ರದ ಗಣಿಗಳನ್ನು ಕುಂಪಣಿ ಸರಕಾರಕ್ಕೆ ದೊಡ್ಡ ಮನಸ್ಸಿನಿಂದ ವಪ್ಪಿಸಿದ ಭೀಮರೆಡ್ಡಿಗಾರರನ್ನು ತಮ್ಮ ಪರವಾಗಿ ಗವುರವಿಸಬೇಕೆಂದು ಕಳಕಳಿಯಿಂದ ಯಿನಂತಿ ಮಾಡಿಕೊಂಡು ತನ್ನ ಮುತ್ಸದ್ದಿತನವ ಮೆರೆದನು. ಆದರಾತನು ಯಿನ್ನೂ ಕೆಲದಿನಗಳ ಕಾಲ ತಾನೊಂದೇ