ವಿಷಯಕ್ಕೆ ಹೋಗು

ಪುಟ:Aramane.pdf/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬೊಡ್ಡೆಗೆ ಮುತ್ತುಕೊಟ್ಟಳು, ಕಣ್ಣೀರು ಸುರಿಸಿದಳು, ವುಸ್ಸಂತ ಕೂತಳು, ವಂಚೂರು ಗೆಲುವಾದಳು. ಹಸು ಮಗೀನಂಗ ಸುತಮುತ್ತ ನೋಡಿದಳು. ಅಗೋ ಅಲ್ಲಿ ತನ್ನ ಗಂಡನ ಸರೀರ, ಸಂಬಂಧ ಬಿಡುಗಡೆ ಮಾಡಿಕೊಂಡಿರೋ ಹಂಗಯ್ತೆ.. ತನ್ನತ್ತ ವಂದು ಸಲನಾದರು ನೋಡುವಲ್ಲದು.. ಯೇನು ಬಂದಿದ್ದೀತು ಅದಕ? ಯೇನು ಬಡುಕೊಂಡಿರಬೌದು ಅದಕ? ಜಗಲೂರೆಜ್ಜ ನೋಡಿದ್ಯಾ.. ಯಂದು ಆ ದಿಕ್ಕಿಗೆ ಮುಖಮಾಡಿ ಕಯ್ನ ಮುಗುದಳು.

ನಿನ್ನರುದಯ ಯೀಟೋಂದು ತಟಗಯ್ತಂತ ಗೊತ್ತಿರಲಿಲ್ಲ ಯಂದಳಾಕೆ ತನ್ನ ಗಂಡನ ಕಡೇಕ ದುರುಗುಟ್ಟಿ ನೋಡುತ್ತ....

ಅಯ್ಲುಗೇಡಿಯಂತಾಡುತಲಿದ್ದ ಅವಯ್ಯನು ಆಗೊಮ್ಮೆ ಯಿಗೊಮ್ಮೆ ತನ್ನ ಹೆಂಡತಿಯ ಕಡೇಕ ಪಿಳಕೂ ಪಿಳಕೂ ಅಂತ ನೋಡುತಲಿದ್ದನು. ನೀನು ಯಾರೋ? ತಾನು ಯಾರೋ? ಯಂಬಂತೆ ಯಿದ್ದನು. ಅಷ್ಟು ಬಿಟ್ಟರೆ ಅವರಿಬ್ಬರ ನಡುವೆ ಯಾವುದೇ ಮಾತಾಗಲೀ, ಕಥಿಯಾಗಲೀ ಯಿರಲಿಲ್ಲ. ಹೋಗೋರು ಬರೋರು ಯಿದಿಲಿಖಿತ ಎಂಬೊಂದು ಸಬುಧವನ್ನು ಆಡೋದು ಬಿಟ್ಟರೆ....

  • * * *

ಅತ್ತ ಥಾಮಸು ಮನ್ರೋ ತನ್ನ ಮಯ್ಯೊಳಗ ಹುಳಾ.. ಹುಪ್ಪಡಿ ಹೊಕ್ಕೊಂಡು ಹರದಾಡಲಕ್ಕ ಹತ್ತಿರುವವೇನೋ ಯಂಬಂತೆ ವಂದಲ್ಲಾ ವಂದು ದಗದಗಳನ್ನು ಹಚಕಂಡು ಕುಂತಲ್ಲಿ ಕೂಡ್ರದೆ, ನಿಂತಲ್ಲಿ ನಿಲ್ಲದೆ ಸದಾ ಗಿಜಿಗಿಗಟ್ಟತೊಡಗಿದ್ದನು. ತನ ಕಯ್ಯಿ ಕೆಳಗಿನ ಅಧಿಕಾರಿಗಳಾದ ಅಂಥೋಣಿ, ರಾಬರ್ಟು, ಯಿಲ್ಲಿಯಮ್ಸೂ, ಜೇಕಬ್ಬೂ, ಜಾನು, ಗೀನು ಯಿವರೇ ಮೊದಲಾದವರನ್ನು ಯದುರಿಗೆ ಕುಂಡರಿಸಿಕೊಂಡು ಕುಂಪಣಿ ಸರಕಾರದ ಬಗ್ಗೆ ಜನರು ವಲವು ತೋರಿಸಬೇಕಾದರೆ ನೀವೆಲ್ಲ ಯಿಲ್ಲಿನ ಸ್ಥಳೀಕ ಭಾಷೆಯನ್ನು ಕಲುತುಕೊಳ್ಳಬೇಕೆಂದು ತಾಕೀತು ಮಾಡುತ್ತಿದ್ದನಲ್ಲದೆ ಅವರಿಗೆ ತೆಲುಗು, ಕನ್ನಡ ಭಾಷೆಗಳನ್ನು ಮೋದಲಕ.. ಬರೆಯಲಕ.. ಕಲಿಸಲಕಂತ ಮಾಸ್ತರರನ್ನು ನೇಮಕ ಮಾಡಿ ರಾತ್ರಿಸಾಲೆಗಳನ್ನು ತೆರೆದಿದ್ದನು. ಕಲುತೋರನ್ನು ಯದುರಿಗೆ ಕರೆಯಿಸಿಕೊಂಡು ಸೊತಹ ಬಹು ಭಾಷಾ ಕೋಯಿದನಾದ ತಾನು ಪ್ರಸ್ನೆಗಳನ್ನು ಕೇಳಿ ಪರೀಕ್ಷೆ ಮಾಡುತಲಿದ್ದನು. ಜಾನಪದ ಗಾಯಕರನ್ನು ಗವುರವ ಪುರುವಕವಾಗಿ ತನ್ನ ಆಸ್ಥಾನಕ ಬರಮಾಡಿಕೊಂಡು ಹಾಡಿಸಿ, ಕುಣಿಸಿ ಸಂತೋಷಪಟ್ಟು ಮಾನ ಸನುಮಾನ ಮಾಡಿ ಕಳುವುತಲಿದ್ದನು. ಹೀಗಾಗಿ