೪೪೬
ಯಂದು ಸಾರೋಟು ಕುದುರೆಗಳತ್ತ ಬೊಟ್ಟು ಮಾಡಿದಳು. ಹುಬ್ಬಿಗೆ ಕಯ್ನ ಹಚ್ಚಿ ನೋಡಿದ. ಆಗಿದ್ದು ಆತನು “ಯೇನವ್ವಾ ಮುದುಕಿ? ಮುರುಕು ಬಂಡಿಯನ್ನು ಸಾರೋಟಂಬುತ್ತೀ.. ಕತ್ತೆಗಳನ್ನು ಕುದುರೆಗಳಂಬುತೀ.. ನಿನ್ನ ತಲಿ ಸಜ್ಜಿದ್ದಂಗಿಲ್ಲ.. ನಡ್ನಡೀ” ಯಂದು ಗದರಿದನು. ಆಕೆಯ ‘‘ಬರ್ರೆಪ್ಪಾ.. ಬರ್ರಿ... ನಮಗಿನ್ನೂ ದಯವದ ತಿಕ್ಕಡಿ ಬಿಟ್ಟೋದಂಗಿಲ್ಲ’’ ಯಂದು ನೀರಿದ್ದಲ್ಲಿ ಕುಡುದು, ನೆಳ್ಳಿದ್ದಲ್ಲಿ ದಣುವಾರಿಸಿಕೊಂಡರಾಯಿತೆಂದು ಭಾವಿಸಿ ತಿರುಗುತ್ತಲೂ ಆರು ಮೊಳದುದ್ದದ ಸೀನೋಜಿರಾವ್ ಘೂೕರ್ಪಡೆ ಯಂಬಾತನು ಆಚೇ ಕಡೇಲಿಂದ ಯಿಚ್ಚೇ ಕಡೇಕ ಬರೋದಕ್ಕೂ ಸರಿಹೋತು. ಆತ ನರಸಾಪುರವನ್ನಾಳುತ್ತಿದ್ದಂಥಾ ಮರಾಠಿ ಸರದಾರ ಯಂಬ ವಿಷಯ ಗೊತ್ತಿದ್ದರೂ ತರುಬಿ ಮಾತಾಡಿಸುವ ಗೋಜಿಗೆ ರಾಜಮಾತೆ ಹೋಗಲಿಲ್ಲ. ಆತಗ ತನ್ನ ಗುರುತು ಅಯ್ತೋ? ಯಿಲ್ಲಮೋ? ಗುರುತಿಸಿದರೂ ಮಾತಾಡಿಸುತ್ತಾನೋ ಯಿಲ್ಲಮೋ? ಆತನ ಕಣ್ಣಿಗೆ ಬೇರೊಂದು ಯಿದದಿ ಗೋಚರಿಸಿ ಅವಮಾನಗೊಳ್ಳೋದು ಯಾಕೆಂದು ಬಗೆದ ರಾಜಮಾತೆಯನ್ನು ಸರದಾರನೇ ಗುರುತಿಸಿ ಹತ್ತಿರ ಬಂದು ಮಜುರೆ ಸಲ್ಲಿಸಿದನು. ಕಲೆಟ್ರುಥಾಮಸು ಮನ್ರೋನ ಆದೇಸದಂತೆ ತಾಲೂಕಾದಿsಕಾರಿ ಯಡ್ಡವರ್ಡನಿಗೆ ಸಲ್ಲಿಸಲೆಂದು ದಾಸ್ತಾವೇಜುಗಳೊಂದಿಗೆ ಯೇಳೆಂಟು ದಿವಸಗಳ ಹಿಂದೆಯೇ ಬಂದು ಅದೇ ಧರುಮ ಛತ್ರದಲ್ಲಿ ಮುಕ್ಕಾಂ ಹೂಡಿದ್ದನು.
ರಾಜಮಾರಾಜರ ಬಿಡದಿಗೆಂದೇ ಕಟ್ಟಿಯಿಸಿದ್ದ ವಸತಿಗ್ರುಹ ಬೊಮ್ಮಘಟ್ಟದ ಹಾದಿಯಲ್ಲಿತ್ತು. ಆದರೆ ಪಿಂಚಣಿ ಗೊತ್ತಾದ ರಾಜರು ಅಲ್ಲಿ ವುಳಕೊಳ್ಳುವಂತಿರಲಿಲ್ಲ.. ರಾಜಸತ್ತೆಯಿಂದ ಅಮಾನುತು ಗೊಂಡೋರ ಹಣೆಬರಾವು ಅದೇ ಆಗಿತ್ತು. ಆದ್ದರಿಂದ ಸೀನೋಜಿರಾವ್ ಸಿಪಾರಸು ಮಾಡಿ ಅದೇ ಧರುಮ bsÀತ್ರದಲ್ಲಿ ರಾಜಮಾತೆಗೆ, ಮತ್ತಾಕೆಯ ಪರಿವಾರದ ಮಂದಿಗೆ ವಸ್ತಿ ಯೇರುಪಾಟು ಮಾಡಿದನು.
“ಮುಂದೇನು ಮಾಡಲಕಂತ ಮಾಡಿ?” ಯಂದು ರಾಜಮಾತೆಯು ಕೇಳಿದ್ದಕ್ಕೆ ಸೀನೋಜಿರಾವನು ಗೊಂದಲದಲ್ಲಿ ಸಿಲುಕಿದನು. ಅದು ಯಾವುದೆಂದರೆ ಮರಾಠ ದೇಸಕ್ಕೆ ಹೋಗೋದೋ? ಅಥವಾ ಸಂಡೂರು ಗಡ್ಡೆಯಲ್ಲಿ ಮಾಂಸದಂಗಡಿಯನ್ನು ತೆರೆಯುವುದೋ? ಸಂಡೂರೊಳಗೆ ಯಿದ್ದಂಥ ರಾವ್ ಬಹಾದ್ದೂರು ರಾಜಾ ಪಂಪನಗವುಡರು ಕುಂಪಣಿ ಸಯ್ನಿಕರ ಮೂಟಕ್ಕೆ