೪೬೪
ಅರಮನೆ
ಮಾಮೂಲು ಮನುಷ್ಯರ ಪಾಡೇನು? ತನ್ನ ಹೆಂಡತಿ ಜೆನ್ನಿಫರು ಸಹ ವಳಗಿಂದೊಳಗೆ ಮೂಳೆ ಮೋಬಂiÀÄ್ಯನ ಕಟ್ಟಾ ಅಬಿsಮಾನಿಯಾಗಿರುವಂತಿರುವುದು.. ಲಂಡನ್ನಿನ ಪ್ರದರ್ಸನದಲ್ಲಿ ಆಕೆಯ ಕಲಾಕ್ರುತಿಗೆ ಪ್ರಶಸ್ತಿ ಬರದಿರುವಂತೆ ಮಾಡುವುದು ಹೇಗೆ? ಯಂದು ಯಸನದ ಮ್ಯಾಲ ಯಸನ ಮಾಡುತ ಆ ಅದಿsಕಾರಿಯು ಸತಪತ ಅಡ್ಡಾಡುತ್ತಿರುವನು.. ತಾನಿದ್ದ ಪಡಸಾಲೆಯ ವಂದು ಕಡೆ ಕಲೆಟ್ರುಸಾಹೇಬ ಥಾಮಸು ಮನ್ರೋನ ಆಳೆತ್ತರದ ತಯ್ಲವರಣ ಚಿತ್ರಯಿದ್ದಿತು.. ಅದು ವಂದು ಚಣ ನಕ್ಕಂತಾಯಿತು.. ಯಿನ್ನೊಂದು ಚಣ ತನ್ನ ಮ್ಯಾಲ ಮುನುಸುಕೊಂಡಂತಾಯಿತು. ಅದಕ್ಕೆ ಜೀವ ಬಂದಿರಬಹುದೆಂಬ ಭ್ರಮೆಗೆ ವಳಗಾಗಿ ಮಂಡೆವÆರಿ ಕುಳಿತೆದ್ದು ಗವುರವಿಸಿದನು. ಜೀವ ಭಯದಿಂದಾಗಿಯೋ.. ಅತ್ಯುಗ್ರಸ್ವಾಬಿsಮಾನದಿಂದಾಗಿಯೋ ಕುದುರೆಡವು ಕಡೇಕ ಹೋಗದೆ ಕೂಡ್ಲಿಗಿ ಅತಿಥಿಗ್ರುಹದಲ್ಲಿ ವಾಸ್ತವ್ಯ ಹೂಡಿರೋ ರಾಜಮಾತೆ ಭಯ್ರಮಾಂಬೆಯನ್ನೂ.. ಆಕೆಯ ಪರಿವಾರವನ್ನೂ ನೆನಪಿಸಿಕೊಂಡನು. ಯಿದ್ದಕ್ಕಿದ್ದಂತೆ ಕುಂಪಣಿ ಸರಕಾರವು ಸಮಸ್ತ ಅದಿsಕಾರವನ್ನು ಅವರಿಂದ ಕಿತ್ತುಕೊಳ್ಳಬಾರದಿತ್ತು. ಯೇನಾದರೊಂದು ಪರ್ಯಾಯ ಯವಸ್ಥೆಯನ್ನು ಆ ಕೂಡಲೆ ಮಾಡಿರಬೇಕಿತ್ತು. ತನಗಿನ್ನೂ ನೆನಪಿಲ್ಲದಿಲ್ಲ, ಪುವ್ವುಲ ರಾಜರ ಅದಿsಕಾರವನ್ನು ಮೊಟಕುಗೊಳಿಸಿದ್ದು, ತಾತ್ಕಾಲಿಕವಾಗಿ ಅಮಾನತ್ತಿನಲ್ಲಿಟ್ಟಿದ್ದಕ್ಕೆ ಕಾರಣಗಳು ಬೇರೆ ಯಿರುವವು. ಸಾಮಂತ ಸಾಮಂತರ ನಡುವೆ ಕಚ್ಚಾಟ, ಹಗೆತನ, ದ್ವೇಷ ಸದಾ ಯಿರುವಂತೆ ನೋಡಿಕೊಳ್ಳುವುದು ಸಹ ತನ್ನ ಯೀಸ್ಟ್ ಯಿಂಡಿಯಾ ಕಂಪನಿಯ ಕುಟಿಲ ತಂತ್ರಗಳಲ್ಲೊಂದು. ಯಿವರು ಅವರ ಮ್ಯಾಲ ಯೇರಿ ಹೋಗಲಕ, ಅವರು ಯಿವರ ಮ್ಯಾಲ ಯೇರಿ ಹೋಗಲಕ ಕಂಪನಿ ಧನದ ರೂಪದಲ್ಲೋ.. ಮದ್ದು ಗುಂಡು ಪಿರಂಗಿ ಯಿವೇ ಮೊದಲಾದ ಯುದ್ದ ಸಾಮಾಗ್ರಿಗಳನ್ನು ಸಾಲವಾಗಿ ಸರಬರಾಜು ಮಾಡುವ ರೂಪದಲ್ಲೋ, ಸಯ್ನಿಕರನ್ನು ಯಿಂತಿಷ್ಟು ರುಸುಮು ಯಂದು ಗೊತ್ತುಪಡಿಸಿ ಕಳಿಸುವ ರೂಪದಲ್ಲೋ.. ಸಹಾಯ ಹಸ್ತ ಚಾಚುವುದು, ತನ್ಮೂಲಕ ವುಭಯ ಬಣಗಳನ್ನು ದುರ್ಬಲಗೊಳಿಸುವುದು.. ಬಡ್ಡಿ, ಚಕ್ರಬಡ್ಡಿ ಸೇರಿ ಸೇರಿ ಅಗಾಧ ರೂಪದಲ್ಲಿ ಸಾಲ ಬೆಳೆಯುವಂತೆ ನೋಡಿಕೊಳ್ಳುವುದು, ಅದನ್ನು ತೀರಿಸಲು ನಿಶ್ಯಕ್ತರಾಗೋ ರಾಜರನ್ನು ಪದಚ್ಯುತಿಗೊಳಿಸುವುದು ತಮ್ಮ ಕಂಪನಿಯ ತಂತ್ರಗಾರಿಕೆಗಳಲ್ಲಿ ವಂದು. ಕುದುರೆಡವಿಗೆ ಸಂಬಂದಿsಸಿದಂತೆ ಆಗಿದ್ದೂ ಯಿದೆ. ಅವರು ನಿರ್ವೀರ್ಯರಾಗಲು