೪೭೪
ಅರಮನೆ
ಮುರಿಯುತಲಿದ್ದ ಸದ್ದು, ನೀವಳಿಸಿ ದ್ರುಸ್ಟಿ ತೆಗೆಯುತಲಿದ್ದ ಸದ್ದು.. ಬೆಂಕಿ ಬಾಂಡೆಲೆಗೆ ಬಿದ್ದ ವುಪುŒ ಚಟಚಟನೆ ಸಿಡಿಯುತಲಿದ್ದ ಸದ್ದು.. ಕಸಬಾರಿಗೆ ನೀವಳಿಸಿ ಕಾಳಿಕಣ್ಣು, ಬೋಳಿಕಣ್ಣು ಮಾರಿಕಣ್ಣು, ಮಸಣೀ ಕಣ್ಣು.. ನಿನ ಕಡೀಕೆ ಸುಳಿಯದಾಂಗಿರಲಿ, ಸುಳಿದೊಡನೆ ಸೇದಿ ಹ್ವಾಗ್ಲಿ ಯಂದು ಮಣ ಮಣ ಅರಿತಿರೋ ಸದ್ದು.. ನಿಂಗೆ ಕೊಣ್ ಬುಡೋರ ಕಣ್ಣಿಗೆ ಕಾರೆ ಮುಳ್ಳು ಚುಚ್ಚಲೀ.. ನಿಂಗೆ ಕೊಣ್ ಬುಡೋರ ಕೊಣ್ಣೀಗೆ..
ಕೇಳಿಸಿಕೊಳುತಾss ಕೊಳುತಾ ಮಂದಿ ತಮ ತಮ್ಮ ಕಣ್ಣಾಲಿಗಳನ ಕಿರಿದುಗೊಳಿಸಿಕೊಳ್ಳ ತೊಡಗಿದರು..
ಚಲಿಸಲಾರದ ಚಲಿಸುತಲಿರುವ ಸರತಿ ಸಾಲು.. ಮುತ್ತಿನ ಪಲ್ಲಂಗದ ಮ್ಯಾಲ ಬಲಗಾಲ ಹೆಬ್ಬೊಟ್ಟನ ಬಾಯೊಳಗ ಯಿಟುಕೊಂಡು ವುಮ್ಚ ವುಮ್ಚ ಯಂದು ಜಮಡುತಲಿರುವ ಅರವತ್ತೆಪ್ಪತ್ತರ ವಯೋಮಾನದ ಮೋಬಯ್ಯನೆಂಬುವ ಕೂಸು.. ಅದರ ಯೇಕರಿಕೆ, ದೇಕರಿಕೆ ನೋಡಿಕೊಳ್ಳುತಲಿದ್ದ ಕಾರೆವ್ವ, ಬೋರೆವ್ವ, ಮಾಳವ್ವ, ಜಾಲಾಂದರದವ್ವ, ಮೆಂಬಾರವ್ವರೇ ಮೊದಲಾದ ಮುದುಕಿಯರು..
ಯೀ ಚೋಜಿಗವ ನೋಡಲು ಯಲ್ಲಾರು ಬಂದರು? ಯಲ್ಲಾರು ಹೋದರು? ಆದರ ಬರೋರು ಬಂದು ನೋಡಿಕೊಂಡು ಹೋಗಲಿಲ್ಲವಲ್ಲಾ.. ಯಂದು ಯಲ್ಲಾರು ಪೇಚಾಡಿ ಕೊಳ್ಳುತ್ತಿರುವಾಗ್ಗೆ..
ಮನಸನ ವಝಿ ಮಾಡಿಕೊಂಡು ಹೋಗಿರುವಾಕಿ ಅದೆಂಗ ಯೀಕಡೀಕೆ ಮುಖಮಾಡುತಾಳ ಯಂದೊಬ್ಬರು ಅನುವಾಗ್ಗೆ, ಪತ್ನಿ ಪದವೀನ ನಿಭಾಯಿಸುವುದೆಂದರ ಸುಮ್ಮನೇನರಪ್ಪಾ.. ಯಾದೇ ಪತ್ನಿ ತನ ಗಂಡಗ ಪತ್ನಿಯೂ ಆಗಬೇಕು, ತಾಯಿನೂ ಆಗಬೇಕು ಯಂದಿನ್ನೊಬ್ಬರು ಜವಾಬು ನೀಡುತಿರುವಾಗ್ಗೆ.. ವಟ್ಟಿನಾಗ ಆಕೆಗೆ ದಯವದ ತಿಕ್ಕಡಿ ಬಡಕೊಂಡಯ್ತೆ ಯಂದು ಮತ್ತೊಬ್ಬರು ಪೇಚಾಡಿಕೊಳುತಿರುವಾಗ್ಗೆ....
ರಣ ಬಯಲದೆಸೀಲಿಂದ ರಾಜ ಪರಿವಾರದವರ ಪಯ್ಕಿ ವಂದಿಬ್ಬರು ಬಂದು ಸಿಸುವಿನ ದರುಸನ ಪಡಕೊಂಡು ಹಿಮ್ಮುಖವಾಗಿ ಹೋದರು. ಅದಾದ ಸೊಲುಪ ಹೊತ್ತಿಗೆ ತನ್ನ ವಾರಿಗೆಯವನಾದ ಮೋಬಯ್ಯನು ತಾಯಿಯ ಪವಾಡದಿಂದ ಸಿಸುವಾಗಿ ಆಡುತಿರುವ ಅಲವುಕಿಕ ಯಿದ್ಯಾಮಾನವನ್ನು ಅರಗಿಸಿಕೊಳ್ಳಲಾಗದ ದಮ್ಮೂರು ಯಂಕಾವಧೂತರಿಂದ ಭೋದ ತಕ್ಕೊಂಡು