ವಿಷಯಕ್ಕೆ ಹೋಗು

ಪುಟ:Aramane.pdf/೪೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೮೧

ಅರಮನೆ

ಬಸಪ್ಪನಾಯಕರ ಮಗ ಸೋಮಸೇಖರ ನಾಯಕನ ಆಸ್ಥಾನದಲ್ಲಿದ್ದು ಪುರೋಹಿತ ಕಾರ್ಯಗಳನ್ನು ಮಾಡುತ್ತಿದ್ದಂಥವರಾಗಿದ್ದರು. ಯಿವರದೋ ಅಪಸ್ತಂಭ ಕವುಂಡಿನ್ಯ ಗೋತ್ರವು, ಮಹಾ ನಾಯಕರಿಂದ ಪಾಂಡ್ಯವಾಡ ದೇಸದ ಕೋಗಳಿ ವೆಂಟರೆ ಸಲುವ ಕೊಟ್ಟೂರು ಸೀಮೆಯೊಳಗಣ ನಿಚ್ಚಾಪುರ ಪಟ್ಟಡಿಯೊಳಗಣ ಯಂಟಾಪುರ ಗ್ರಾಮವನ್ನು ಸರ್ವಮಾನ್ಯವಾಗಿ ಪಡಕೊಂಡಿದ್ದಂಥವರು.. ನಿಧಿ ನಿಕ್ಷೇಪ ಜಲ ತರು ಪಾಷಾಣ ಅಷಿಣಿ ಆಗಮ ಸಿದ್ದ ಸಾಧ್ಯಂಗಗಳೆಂಬ ಅಷ್ಟಾಂಗ ತೇಜೋಪಾರ್ಜನೆಯನ್ನು ಅನುಭೋಕೆ ಮಾಡುತ್ತಿದ್ದಂಥವರು. ಸವಾರಿ ಬಂಡಿ ಕಳಿಸಿ ಕರೆಯಿಸಿಕೊಂಡದ್ದು ತಡ ಆಗಲಿಲ್ಲ. ಯೇದಾಂತಿಗಳೂ, ಜ್ಯೋತಿಷ್ಯ ಮಾರ್ತಾಂಡರೂ ಆದ ಅವರು ಬರುಬರುತ್ತಲೆ ಸೀದ ಅರಮನೆಗೆ ಧಾವಿಸಿ, ಮೋಬಯ್ಯನ ದುರುಸನ ಪಡದು “ಯಂಥ ತೇಜಸ್ವಿ ಶಿಶುವಿದು, ಯಿದಕ್ಕೆ ತೊಟ್ಟಿಲು ಕಾರ್ಯ ನಾಮಕರಣ ಕಾರ್ಯ ಮಾಡುವ ಸುವರ್ಣಾವಕಾಶ ಲಭಿಸಿರುವುದು ನಮ್ಮ ಪುರ್ವಜನ್ಮದ ಸುಕ್ರುತವೇ ಸರಿ” ಯಂದು ವುದ್ಗಾರ ತೆಗೆದು ತಮ್ಮ ಬಿಡದಿ ಮನೆಗೆ ಹೋದರು....

ಅವರು ಯಿವತ್ತು ಬಂದರೆಂದರೆ ಕಾರಡಿಯಿಂದ ಯಪ್ಪತ್ತಿ ರಾಜನು ಮರುದಿವಸ ಬಂದನು, ಆತ ಯಿವತ್ತು ಮದ್ಯಾಣ ಬಂದನೆಂದರೆ ಮದರಂಗಿ ಕೋಟೆಯಿಂದ ಸುಬೇದುಲ್ಲಾಖಾನನ ರಾಯಭಾರಿಯಾದ ದಿವಾನ ಸಿವರಾಮ ರಾವ್ ಕಬಾಡಿಯು ಚಂಜೆ ಮುಂದುಗಡೆ ಬಂದನು. ತದ ನಂತರ ಕೂಡ್ಲಿಗಿಯಿಂದ ಯಡ್ಡವರ್ಡನ ಆಪ್ತ ಸಹಾಯಕನಾದ ದವಲತ್ರಾವ್ ಯೇಕಬೋಟೆ ಮುಚ್ಚಂಜೆ ಹೊತ್ತಿನಲ್ಲಿ ಬಂದ, ಯಿವರೊಂದೆ ಅಲ್ಲದೆ ಸುತಮುತ್ತಲ ಸಾಮಂತರು, ಮಾಂಡಲಿಕರು ಅವುದವುದೆಂಬಂತೆ ಬಂದರು. ವಂದು ಛಣದಲ್ಲಿ ಕುದುರೆಡವು ಪಟ್ಟಣವು ಪರತಾಪರುದ್ರಗಜಪತಿಯ ಮೋರಂಗಲ್ಲು ರಾಜಧಾನಿಯಂತೆ ಕಂಗೊಳಿಸಲಾರಂಭಿಸಿತು ಸಿವನೇs...

ಆ ಫಲಾನದಿನ ಬಂತೋ ಬಂತು! ಹ್ಹಾ.. ಹ್ಹಾ..

ಹುಗ್ಗಿಹೋಳಿಗೆ, ಪಾಯಸ, ಖೀರು, ಜೋಳದನ್ನ, ಗುಗ್ಗರಿ, ನವಣಕ್ಕಿ ಬಾನ, ನೆಲ್ಲಕ್ಕಿಬಾನ, ಯಿವೇ ಮೊದಲಾದ ಖಾದ್ಯಗಳನ್ನು ಯಂಥ ಬಡವರೂ ಮಾಡಿದ್ದು ತಡ ಆಗಲಿಲ್ಲ, ಮತ್ತೊಂದು ಪರಿಶೆ ಮರು ಹುಟ್ಟು ಪಡಕೊಂಡದ್ದು ತಡ ಆಗಲಿಲ್ಲ, ಮನೆಗೆ ಮನೆ, ಮೋಣಿಗೆ ಮೋಣಿ ಹೆಗಲುಕೊಟ್ಟು ನಿಂತುಬಿಟ್ಟವು. ಸೊಯಂಸೇವಾ ಕಾರ್ಯಕರ್ತರು ಸಾಯಿರ ಸಂಖೆಯಲ್ಲಿದ್ದು ಪುರುಸೊತ್ತಿಲ್ಲದೆ ಅಡ್ಡಾಡಿ