ವಿಷಯಕ್ಕೆ ಹೋಗು

ಪುಟ:Aramane.pdf/೫೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೧೬

ಅರಮನೆ

ಹೆಂಡತಿಯೊಂದಿಗೆ ಪ್ರಯಾಣಕ್ಕಣಿ ಯಾಗುವುದು ಯಡ್ಡವರ್ಡನಿಗೆ ತಡಹಿಡಿಯಲಿಲ್ಲ. ವದ್ದೆಗೊಳ್ಳುತಲಿದ್ದ ಕಣ್ಣುಗಳ ಮ್ಯಾಲ ವಂದು ಕಯ್ಯಿ ಯಿಟುಕೊಂಡೇ ಸಿಬ್ಬಂದಿ ಮಂದಿ ಸಾಮಾನು ಸರಂಜಾಮನ್ನು ಕುದುರೆಗಾಡಿಗಳ ಮ್ಯಾಲ ಯೇರಿದರು. ಯಲ್ಲಾಪ್ರಕೊರಚರಟ್ಟಿ ಕಳ್ಳಕಾರರು ಹೋಗೋ ಹಾದೀಲಿ ಅಡ್ಡಗಟ್ಟಿ ದರೋಡೆ ಮಾಡಿಯಾರೆಂಬ ಹೆದರಿಕೆಯಿಂದ ಸಶಶ್ತ್ರನೂರಾರು ಮಂದಿ ಸಯ್ನಿಕರು ಹಿಂದೆ ಮುಂದೆ ಹೊರಡಲು ಅಣಿಗೊಂಡರು....

ಸಾವುರ ಕಣ್ಣುಗಳೊಳಗಿಂದುದುರೀವುದುರೀ ವದ್ದೆಯಾಗಿದ್ದ ನೆಲದ ಮ್ಯಾಲ ಘಳಕ್ಕನೊಂದೊಂದು ಹನಿ ಕಣ್ಣೀರುದುರಿಸುತ್ತ ಅವರಿವರ ತಲೆ ನೇವರಿಸುತ್ತ, ಸಣ್ಣ ಕಂದಮ್ಮಗಳನ್ನಪ್ಪಿಕೊಳುತ.. ಯಿಡಬೋಕೋ ಬ್ಯಾಡಮೋ ಅಂಬುವಂತೆ ಹೆಜ್ಜೆಗಳನ್ನೆಣಿಸುತ್ತಿಡುತ.. ಕೋನಿಕೆ ಕುದುರೆಡವಿದ್ದ ದಿಕ್ಕಿಗೆ ಕಯ್ನೆತ್ತಿ ಮುಗುದು ಜೆನ್ನಿಫರಮ್ಮ ಜೋಡು ಕುದುರೆಗಳನ್ನೂಡಿದ್ದ ಸಾರೋಟೊಳಗೆ ಗಂಡನ ಪಕ್ಕ ಕೂಕೊಂಡಳು. ಆಕೆ ಬಿಟ್ಟು ವುದ್ದಾನ ವುಸುರೊಂದು ಸುಂಟರಗಾಳಿ ರೂಪಧಾರಣ ಮಾಡಿ ಸುಳುದಾಡುತಾ ಸುಳುದಾಡುತಾ ಹಿಡಿದ ತೆಂಕಣ ಹಾದಿ ಯಾವುದೆಂದರೆ.....

ಅತ್ತ ಸೊಕ್ಕೆ ಗ್ರಾಮದಲ್ಲಿ ಭೀಮನೆಂಬ ಸುನಕದ ಗಂಟಲೊಳಗೆ ಚಂಡನ ತರಡು ಬೀಜಗಳು ವಡಲಿಗಿಳಿಯದೆ ಅಲ್ಲೆ ಅಂಟಿಕೊಂಡುಬಿಟ್ಟಿದ್ದವು. ಯಿದ್ದ ಸ್ಥಿತಿಯಲ್ಲಿಯೇ ಅದರ ಸರೀರದಾದ್ಯಂತ ತನ್ನ ಅಗಾಧ ಮಯ್ಮೆ ಬೀರಲು ತೊಡಗಿ ಯೇಸೋ ದಿವಸಗಳು ವುರುಳಿದ್ದವಷ್ಟೆ.. ಅದು ರಾಸಲೀಲಾ ಯಿಷಯದಲ್ಲಿ ತಕ್ಕುದಾದ ನಯಪುಣ್ಯವನ್ನು ಕೊನೆಕೊನೀಕೆ ನಷ್ಟ ಮಾಡಿಕೊಂಡಿತ್ತಷ್ಟೆ.. ಕಾಮತ್ರುಷೆ ಯನ್ನದುಮಿಡಲಾರದೆ ಅದು ಮುಗುಲಿಗೆ ಮುಖ ಚಾಚಿ ಬೊವ್ವಮ್ವೋ ಯಂದು ವೂಳಿಡುತಲಿದ್ದುದನ್ನು ಕೇಳೀ ಕೇಳಿ ಭೋ ಮಂದಿ ರೋಸಿಗೊಂಡು ಬಿಟ್ಟಿದ್ದರು. ಹೆಂಗಾದರು ಮಾಡಿ ಅದನು ಜೀವಧರಿಸಿರಲೆ ಹಿಡಿದು ಅದರ ಗಂಟಲು ಬಗೆದು ಚಂಡನ ತರಡು ಬೀಜಗಳನ್ನು ತೆಗೆದು ಜಳಜಳ ತೊಳೆದು ತಾವ್ಯಾರಾದರು ತಿಂದು ಯೀರ್ಯವಂತರಾಗಬೇಕೆಂದು ವಳಗೊಳಗೆ ನಿರ್ಧರಿಸಿದ್ದರು.. ಅಂಥ ತಮ್ಮ ಗಂಡಂದಿರಿಗೆ ಸಿಕ್ಕರೇನು ಗತಿಯಂದು ಅವರವರ ಹೆಂಡಂದಿರು ವುಸ್ಸೋss ಅಂತ ಅದನು ಗದುಮೋದು ಮಾಡುತಲಿದ್ದುದು ವಂದು ಕಡೀಕಿದ್ದರೆ.. ಯಿನ್ನೊಂದು ಕಡೀಕೆ ಅವರವರ ಗಂಡಂದಿರು ಹಿಡಿಯಲೆಂದು