ವಿಷಯಕ್ಕೆ ಹೋಗು

ಪುಟ:Aramane.pdf/೫೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೨೦

ಅರಮನೆ

ತೆಗೆತಾ ಅಯ್ದಾರೆ.. “ಯವ್ವಾ ಲಗೂನ ಪ್ರಾಣಾನ ಬಿಟ್ಟು ಪುಣ್ಯ ಕಟ್ಟಿಕೊಳ್ಳವ್ವಾ.. ಅದನ್ಯಾಕ ಯಿಟುಕೊಂಡದ್ದೀ ಸರೀರದಾಗ.. ಜೀವ ಪಚ್ಚೀಗೆ ಚಿತ್ರಹಿಂಸೆ ಕೊಡುತ್ತಿದ್ದೀಯಲ್ಲಾ ಯಿದು ನ್ಯಾಯಾನ.. ಯಿದರಿಂದ ನೀನು ಯಾವ ಸುಖ ವುಂಬುತೀ” ಯಂದು ಅಂಗಲಾಚುತಯ್ದಾರೆ.. ಆಚೇಕ ಯಿಚೇಕ ಕೂಕಂಡಿದ್ದ ಜೋತಿಷಿಗಳು ಯೀ ಗಳಿಗೇಲಿ ಪ್ರಾಣಬಿಟ್ಟರೆ ಪಾಡು.. ಆ ಗಳಿಗೇಲಿ ಪ್ರಾಣಬಿಟ್ಟರೆ ಪಾಡು ಯಂದು ಅಡಿಗ್ಗಡಿಗೆ ಹೇಳುತಯ್ದಾರೆ.. ಬಾಗಿಲ ಮುಂದುಗಡೆ ಕಾಳಾಪ್ರದ ಪ್ರಸಿದ್ಧ ಭಜನೆ ತಂಡದೋರು ಹೇಳದೆ ಕೇಳದೆ ಬಂದೋರು ಹೇಳದೆ ಕೇಳದೆ ಹೋಗಬೇಕು.. ಸಾಯೋದು ಕೂಡ ಪಯಿತ್ರಕಾರ್ಯ ಯಂದು ಅರ್ಥ ಬರುವಂಥ ಹಾಡುಗಳನ್ನು ಯೇರುದೊನಿ ತೆಗೆದು ಹಾಡುತಯ್ದಾರೆ.. ಅದೆಲ್ಲವನ್ನೂ ತನ್ನ ಚೂರುಪಾರು ನೆಟ್ಟಗಿದ್ದ ಕಿವಿ ಮೂಲಕ ರಾಜಮಾತೆ ಭಯ್ರಮಾಂಬೆಯು ಕೇಳಿಸಿಕೊಳ್ಳುತಯ್ದಾಳಂದರ ಅಯ್ದಾಳ....

ಆದರೂ ಪ್ರಾಣಬಿಡುವ ದೊಡ್ಡ ಮನಸ್ಸನ್ನು ತಾನು ಮಾಡುತ್ತಿಲ್ಲ. ವಬ್ಬರಾರ ತಾನು ಯಿನ್ನೊಂದೀಸು ಕಾಲ ಬದುಕಿರಬೇಕೆಂದು ಯಸನ ಮಾಡುತ್ತಿಲ್ಲವಲ್ಲಾ, ವಬ್ಬರಿಗಾರ ವುಪಕಾರ ಸ್ಮರಣೆ ಯಿಲ್ಲವಲ್ಲಾ ಯಂದಾಕೆ ಯಸನ ಮಾಡುತ್ತಿರುವುದು ಯಾರಿಗೂ ತಿಳಿದು ಬರುತಾಯಿಲ್ಲ...

ಹೆಂಗಪ್ಪಾ ಯೀಕೇಯ ಸರೀರದಿಂದ ಪ್ರಾಣ ಪಚ್ಚಿ ಹಾರಿಹೋಗೋ ಹಾಂಗ ಮಾಡಬೇಕು ಯಂದು ಚಿಂತಿಸುತ್ತಿದ್ದವರ ಪಯ್ಕಿ ಕಾಟನಾಯಕ ಪ್ರಮುಖನಾಗಿದ್ದನು. ತನ್ನ ಅಯ್ದು ಮಂದಿ ಹೆಂಡಂದಿರು ವಕ್ಕೊರಲಿನಿಂದ “ಯಾರಾದ್ರುತಿಳುವಳಿಕಸ್ಥ ಮಂದೀನ ಕರಕೊಂಡು ಬಂದು ಲಗೂನ ಪ್ರಾಣ ಬಿಡೂಂತ ಹೇಳಿಸಬಾರ್ದೇನು?” ಯಂದು ಗದರಿಸಿ ಹೇಳುತ್ತಿದ್ದುದರಿಂದ ಆತನು ತಾನು ರಾಜನೆಂಬ ಮಯ್ಯ ಚಳಿ ಬಿಟ್ಟು ವೂರೊಳಕ್ಕೆ ಹೋಗಿ ಬಂಗಾಳಯ್ಯನನ್ನು ಕಂಡು “ಯಜಮಾನ.... ನಿನ್ನಿಂದೊಂದುಪಕಾರ ಆಗಬೇಕಪ್ಪಾ” ಯಂದು ಕೇಳಿದನು. ಯೇಸೋ ವರುಷಗಳ ಹಿಂದೆ ಹುಟ್ಟಿದ್ದ ಆ ಮುದೇತನು “ಅಂಥಾದ್ದು ಯೇನು ನಾಯಕರಾ?” ಯಂದು ಕೇಳಿದ್ದಕ್ಕೆ ಯೀತನಿದ್ದು ಯಲ್ಲಾ ಯಿವರಿಸಿ “ಹೆಂಗಾರ ಮಾಡಿ ಪ್ರಾಣ ಬಿಡು ಅಂತಹೇಳಬೇಕಪ್ಪಾ” ಅಂದನು. ಅದಕ್ಕಾತನು ಗಹಗಹಿಸಿ ನಗಾಡುತ “ನಾನ್ಯಾವ ನರಕಕ್ಕೋಗ್ಲಿ ನಾಯಕರಾ.. ಯಿದು ನನ್ನಿಂದಾ ಗದು” ಯಂದು ಹೇಳಿದನು. ತದನಂತರ ಈತ ಕಂಡ ಬೊಮ್ಮಲಿಂಗಯ್ಯನೆಂಬ ಹಣ್ಣು ಹಣ್ಣು ಮುದೇತನು “ಪ್ರಾಣ ಬಿಡು ಅಂತ