ವಿಷಯಕ್ಕೆ ಹೋಗು

ಪುಟ:Aramane.pdf/೫೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೨೨

ಅರಮನೆ

ನಿವಾರಿಸಲೋಸುಗ ನಾ ಮುಂದು, ತಾ ಮುಂದು ಅಂತ ಮುನುಗ್ಗಿ ಬಲಿಗೊಳ್ಳುತ್ತಿದ್ದರು.. ಅಥವಾ ತಮ್ಮ ಪ್ರೀತಿಪಾತ್ರರ ಪಯ್ಕಿ ಯಾರಾದರು “ಸಾಯ್ಲಿಕ್ಕೇನಾಗಯ್ತೆ ಧಾಡಿ” ಯಂದು ಗದರಿಸಿದೊಡನೆ ಹನುಮಪ್ಪನ ಬತೇರಿಯಿಂದ ಕೆಳಗೆ ಬಿದ್ದೋ.. ಜಯ್ನ ಮುನಿಗಳಂಗ ಸಲ್ಲೇಖನ ರೊತ ಕಯ್ಕೊಂಡೋ ಪ್ರಾಣ ಬಿಡುತ್ತಿದ್ದರು ಅಥವಾ ಬದುಕೋದು ಬಲು ಬ್ಯಾಸರಾಗಯ್ತೆ ಯಿದರಿಂದ ನನರುಂಡ ಕಡಿಯಂದು ಅವರಿವರಲ್ಲಿ ಅಂಗಲಾಚುತ್ತಿದ್ದರು.. ಹೇಳದೆ ಕೇಳದೆ ಅಟ್ಟಂಬಟ್ಟಾರಣ್ಯೇವಿನ ಗರುಭಸ್ಥಾನ ತಲುಪಿ ಮಟ್ಟಸ ಜಾಗದಲ್ಲಿ ಕೂಕಂಡು ಪುಣ್ಯ ಬರತಯ್ತೆ ನಮ್ಮನ್ನ ತಿಂಬ್ರೀ ಯಂದು ಕ್ರೂರ ಮ್ರುಗಗಳೆದುರು ಬೇಡಿಕಂತಿದ್ದರು ಸಿವನೇ....

ಅದೊತ್ತಟ್ಟಿಗಿರಲಿ.....

ಅಗೋ ಅಲ್ಲಿ ಹೊಂಗೆ, ಬೇವು, ವುಂಚಿ ಮರಗಳಾದವಲ್ಲ.. ಆ ತೋಪಿನೊಳಗ ಬರುತಲಯ್ದಾನ, ಯಡಕ ಗೊಂಜಾಡರಲಡುವಯ್ಯನೂ, ಬಲಕ ಕಾಡುಗೊಲ್ಲರೀರಯ್ಯನೂ.. ಯಿರುವಂಗದ.. ಹ್ಹಾ...ಹ್ಹಾ.. ಅವುದು.. ಆ ಮುವ್ವರು ಬಂದೇ ಬಿಟ್ಟರು.. ರಣಮಹಲ ಸನೀಕ ಬಂದೇ ಬಿಟ್ಟರು.. ಸಿವನೇ, ಹೊಳ್ಳಾಗಿರಿ ಅನಲಿಲ್ಲ.. ದಾರಿ ಬಿಡರಿ ಅನಲಿಲ್ಲ.. ಅಲಲಲಾ ಅಂಬುವಷ್ಟರೊಳಗ.. ಪರ ಯಿರೋಧ ನಿಲುವು ತಳೆವುದರೊಳಗ.. ಯಿವರಿಗೆ ಹೇಳಿ ಕಳುವಿದವರ್ಯಾರು ಯಂಬ ಅನುಮಾನ ತಾಳುವುದರೊಳಗ....

ಕಾಡುಗೊಲ್ಲರೀರಯ್ಯನು ಸೀದ ರುಗ್ಣ ಶಯ್ಯೆಗೆ ಬಂದು “ಯಕ್ಕಾss ನಾನವ್ವಾ.. ಕಾಡುಗೊಲ್ಲ ವೀರಯ್ಯ.. ಬಂದೀನಿ ನೋಡು..” ಯಂದನಕಂತ ಕಣ್ಣೊಳಗ ವಂಥಟಗು ನೀರನು ತಂದುಕೊಂಡನು. ಅದರ ಹಿಂದೆಯೇ ಬಂದ ಸಾಂಬಂiÀÄ್ಯನು “ಯವ್ವಾ ನೋಡು” ಯಂದೇಟಿಗೆ ಮುದುಕಿ ತ್ರಾಸು ಪಟ್ಟು ಕಣ್ಣು ಬಿಟ್ಟು ಪಿಳಿ ಪಿಳಿ ನೋಡಿ “ಪಿಕದಾನಿ.. ಅಯ್ಯೋ ನನ ಪಿಕದಾನಿ ಮಾತಾಡು ತಯ್ತಲ್ಲಾ.. ಯೇನೋ ಅಂದುಕೊಂಡಿದ್ದೆ.. ಪಿಕದಾನಿಗೂ ರುದಯ ಅಯ್ತಲ್ಲಾ” ಯಂದು ಯಲ್ಲಾರನು ಗಾಬರಿಗೊಳಿಸಿತು....

ಸಾಂಬಯ್ಯಗ ನಡಕೋತಿದ್ದ ಸೊಸೆ ತಿರುಮಲಾಂಬೆಗೆ ತಮ್ಮತ್ತೆಗೆ ದಯವದ ತಿಕಡಿ ಬಡಕೊಂಡು ದೆವ್ವ ಆದರೇನು ಯಂಬ ಚಿಂತೆ ಕಾಡಲು ಹೇಳುತ್ತಾಳೆ.. “ಯತ್ತೀ..ಯಂಥಾ ಅಯ್ಲುಗೇಡಿ ಅದೀಯಲ್ಲ ನೀನು.. ಖುದ್ದ ಸಾಯುಜ್ಯ ಕರುಣಿಸಲಕಂತ ಸಾಂಬವಿಯ ಸಿಸುಮಗಗ ಪಿಕದಾನಿ