೫೨೪
ಅರಮನೆ
ನಡೆಸಿದ್ದು ಯಾರಿಗೆ ತಾನೆ ಗೊತ್ತಿಲ್ಲ?...
ಮರಣಾನಂತರ ತನ್ನ ಸಮಾದಿ sಯಷ್ಟುದ್ದ? ಯಷ್ಟಗಲ ಯಿರಬೇಕು? ಯಾವ ನಮೂನಿ ಕಲ್ಲುಗಳನ ತನ್ನ ಪಯಿತ್ರಕಳೇಬರದ ಸುತ್ತ ಪೇರಿಸಿಡಬೇಕು? ಅದಕ ವುಪಯೋಗಿಸುವ ಗಾರೆಯನ್ನು ನೀರಿನಿಂದ ತಯಾರಿಸುವುದೋ? ಹಾಲಿನಿಂದ ತಯಾರಿಸುವುದೋ? ಸಮಾಧಿವಳಗ ತನ್ನ ಸುತಮುತ್ತ ಪೇರಿಸಿಡಬೇಕಿರುವ ತನ್ನ ಪ್ರಿಯವಾದ ವಸ್ತುಗಳ್ಯಾವ್ಯಾವು? ಸಮಾಧಿ ಮ್ಯಾಲ ಪ್ರತಿಷಾವಿಪಿಸಬೇಕಿರುವ ತನ್ನ ಸುಂದರ ಮೂರ್ತಿಯನ್ನು ಸುಂದರವಾಗಿ ಕೆತ್ತುವಂಥ ಶಿಲ್ಪಿಗಳು ಯಲ್ಲಲ್ಲವರೆ? ಯಾರ್ಯಾರವರೆ?.. ಸಮಾಧಿ ಹಲವು ಅಂಕಣ.. ಬಾಗಿಲುಗಳ ಗುಡಿಯಂಗಿರಬೇಕು.. ಅದರ ಮ್ಯಾಲ ಬಿಸಿಲನು ಕಯ್ಯಿ ಬೀಸಿ ಕರೆಯುವಂಥ ಸಿಖರ ಕಳಸಯಿರಬೇಕು.. ತಾನು ಯಿಹಲೋಕ ತ್ಯಜಿಸಿದ ಮೂರನೆ ದಿವಸಕ್ಕೇನೆ ಕನಿಷ್ಟ ಮೂರು ಸಾವುರ ಮಂದಿ ಬ್ರಾಮ್ಮಣರಿಗೆ ಭೂರಿ ಭೋಜನ ಯವಸ್ಥೆ ಮಾಡಬೇಕು.. ತನ್ನ ಸಮಾಧಿಗೆ ತ್ರಿಕಾಲ ಪುಜಿ ಪುನಸ್ಕಾರ ನಡೆಯುತ್ತಿರಬೇಕು.. ತನ್ನ ಜೀವ ರುತ್ತಾಂತ ಕುರುತು ಪುರಾಣ ಬರೆಸಬೇಕು.. ಅದರ ಪುಣ್ಯ ಸ್ರವಣ ಪ್ರತಿ ಸಂವತ್ಸರ.. ಅದಕ್ಕಿದ್ದ ಆಸೆಗಳನು ವಂದರ ಮ್ಯಾಲ ವಂದರಂತೆ ಪೇರಿಸಿಟ್ಟರೆ ಆನೆ ಮ್ಯಾಲ ಆರೇಳು ಮೊಳವುದ್ದದ ಗಂಡಾಳು ನಿಂತು ಕವಡೇನ ತೂರಿದರೆ ಅದು ಯೇಟೆತ್ತರ ಹೋಗುವುದೋ ಆಟಾಗುವುದು.. ಆ ಆಸೆಗಳ ಪೊರೆಯಿಸಲಕ ಹೋದರೆ ಯಿಡೀ ಕುದುರೆಡವು ಸಾಮುರಾಜ್ಯವನ ಮಾರಿದರೂ ಪಾವಲಿ ಭಾಗದಷ್ಟು ರೊಕ್ಕ ದೊರಕಲಾರದು.. ರೊಕ್ಕ ಯಿದ್ದಿದ್ದರ ಯೀ ಮುದೇದು ಮನ್ರೋ ಸಾಹೇಬನ್ನೊಂದು ಯಾಕ ಸಾಂಬವೀನೂ ತನ್ನ ಸಮಾದಿs ಯೊಳಗಿಟುಕೊಂಡು ಬಿಡುತಲಿತ್ತೇನೋ? ಅದು ಬದುಕಿದ್ದಾಗ ಅಂದುಕೊಂಡಿದ್ದರ ಗೊಡವೆಗೆ ಹೋಗುವುದು ಬ್ಯಾಡ.. ಅದರ ಪಯ್ಕಿ ಮದಮುಸವನ್ನಾದರೂ ಕಾರ್ಯಗತ ಮಾಡೋದೂ ಕಣಸಿನ ಮಾತು. ಯೀಗಾಗಲೇ ರಾಜಪರಿವಾರದವರು ಯಲ್ಲಾ ಕಳಕೊಂಡು ದುರ್ಗತಿ ತಲುಪಿದ್ದಾರೆ. ಹೆಣ ಸಾಗಿಸಿದೊಡನೆ ಅವರವರು ಅವರವರ ವೂರುಗಳಲ್ಲೇ ಜಳಕ ಮಾಡುತಾರೋ.. ಯೇನೋ? ಸದ್ಯಕ ಮಾಡಬೇಕಿರುವುದನ್ನು ಮಾಡಬೇಕಲ್ಲ.. ಹೆಣನ ಅನಾಥ ಸ್ಥಿತೀಲಿ ಬಿಟುಕೊಟ್ಟು ಹೋಗಲಕಾಯ್ತದಾ? ಬದುಕುವುದು ಕಷ್ಟ.. ಸಾಯುವುದು ಯಿನ್ನೂ ಕಷ್ಟ.. ಸತ್ತ ಮ್ಯಾಲ ಹೆಣಕ ಸಮುಸ್ಕಾರ ಮಾಡಿ ಮುಗಿಸಿ ಜಳಕಾ ಮಾಡುವುದಂತೂ