ವಿಷಯಕ್ಕೆ ಹೋಗು

ಪುಟ:Aramane.pdf/೫೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೪೧

ಅರಮನೆ

ಮಾಕವಿ ಅಯ್ಯಾಳೇಸ್ವರನು ಕಳೇಬರವನ್ನು ಕಾವ್ಯಮಯವಾಗಿ ಸಾಪಳಿಸುತ್ತಿದ್ದುದೇನು? ನೋಡಲಕ ವಂದು ಕಣ್ಣು ಸಾಲದು, ಕೇಳಲಕ ಯಲ್ಡು ಕಿವಿ ಸಾಲದು ಸಿವ ಸಂಕರ ಮಾದೇವss..

ಅವಧೂತನೋಪಾದಿಯಲ್ಲಿ ಜಂಬ ಯಂಬ ಮೂಲ ಹೆಸರಿನ ಸ್ರೀಮಂತನೆಂಬಾತನಲ್ಲಿ ಯಿದ್ದನಷ್ಟೆ. ಜಾವಜಾವಕ ವಯ್ರಾಗ್ಯ, ಅಲವುಕಿಕ ಅಣಿಮುತ್ತುಗಳನ್ನುದುರಿಸುತ್ತ.. ಜಾವ ಜಾವಕ ಕಳೇಬರ ಪುಜೆಯನ್ನು ಸಾಂಗೋಪಾಂಗವಾಗಿ ಮಾಡುತ್ತ.. ತೀರ್ಥ ಪ್ರಸಾದ ಯಿನಿಮಯ ಮಾಡುತ್ತ.. ರಾಜಮಾತೆ ಯಾರೊಬ್ಬರ ಹೊಟ್ಟೇಲಿ ಮತ್ತೆ ಹುಟ್ಟಿಬರಲಿರುವಳೆಂದೂ.. ತಮ್ಮ ಜೊತೆ ಆಕೆ ಮಾತಾಡುತ್ತಿರುವಳೆಂದೂ ಹೇಳುತ್ತ ಮರುಳು ಮಾಡುತ್ತಿದ್ದನು.

ಜಂಬನು ತಿನ್ನೋದರೊಳಗ, ಕುಡಿಯೋದರೊಳಗ ಯೇನು ಬೆರೆಸಿ ಕೊಟ್ಟನೋ ಯೇನೋ, ಅದು ಕೊಟ್ಟವನಿಗೆ ಗೊತ್ತು... ಸಿವನಿಗೇ ಗೊತ್ತು... ರಣಮಹಲಿನಲ್ಲಿದ್ದವರೆಲ್ಲರಿಗೆ ತೂಕಡಿಕೆ ಬಂತು. ಅವರ ತಲೆಗೆ ಯಿವರು ಯಿವರ ತಲೆಗೆ ಅವರ ಡಿಕ್ಕಿ ಹೊಡೆಯಲಕ ಹತ್ತಿದರು. ನೋಡು ನೋಡುತ್ತಿದ್ದಂತೆ ಹೆಣುಮಕ್ಕಳು, ಗಂಡು ಮಕ್ಕಳು ಯಲ್ಲರು ತಾವು ಯಲ್ಲೆಲ್ಲಿದ್ದರೋ ಅಲ್ಲಲ್ಲೆ ಗಪ್ಪಂತ ಮಲಗಿ ನಿದ್ದೆ ಮಾಡಲಕ ಹತ್ತಿದ್ದರು. ಸ್ರಿಂತನಾಗಿದ್ದಾತ ಜಂಬನಾಗಿ ಪಲ್ಲಟಗೊಂಡಂಥಾತನು ಯಲ್ಲರೂ ಗಾಢ ನಿದ್ದೆ ಹೋಗಿರುವುದನ್ನು ಖಾತರಿ ಮಾಡಿಕೊಂಡು ಬೆಳುವ ಪಕ್ಷಿಯಂತೆ ಕೂಗಿ ಸಂಗನೆ ಕೊಟ್ಟನು. ಯಿತ್ತ ಹಿಂದಲ ಗೋಡೆಗೆ ಅಷ್ಟೇ ಪ್ರಮಾಣದ ಕನ್ನ ಕೊರೆದದ್ದೂ ಆಯಿತು.. ಸಾಲಂಕ್ರುತ ಯಲುಗನನ್ನು ಕನ್ನದ ಮೂಲಕ ವಳಗೆ ತಳ್ಳಿದ್ದಾಯಿತು. ಸಾಲಂಕ್ರುತ ರಾಜಮಾತೆಯ ಕಳೇಬರವನ್ನೀಚೆ ಯಳಕೊಂಡಿದ್ದೂ ಆಯಿತು.. ಯವ್ವಾ ತಾಯಿ, ನಮ್ಮನ್ನ ಮಾಫ್ ಮಾಡು, ಗವುಡನ ಮಗಳು ಪಾರೊತಿಗೆ ನಿನ್ನಾಸೀರುವಾದ ಬೇಕಾಗಯ್ತೆ. ನಿನ ಮಕ್ಕಳಾಗಿ ನಿಂತುಕೊಂಡು ನಿಂಗೆ ನಾವೇ ಮಣ್ಣು ಕೊಡುತೀವಿ. ಮಣ್ಣಿನ ರಿಣಾ ತೀರಿಸಿಕಂತೀವಿ ಯಂದು ರಾಮಣ್ಣನು ಯಿನಯಪುರುವಕವಾಗಿ ಹೇಳುತಾ ಹೇಳುತಾ ಕಳ್ಳೇಪುರಿಯಷ್ಟು ಅಳಾರ ಯಿದ್ದ ಕಳೇಬರವನ್ನು ತನ್ನ ಹೆಗಲ ಮ್ಯಾಲ ಹೊತ್ತುಕೊಂಡನು. ಸುಡುಗಾಡು ಯಲ್ಲಯ್ತಲ್ಲಯ್ತಂತ.. ಆ ಚೋರಾಗ್ರೇಸರರು....

ವಂದು ಜಾವ ಕಳೀತು.. ಯಲ್ಡು ಜಾವ ಕಳೀತು.. ಮೂರನೇ ಜಾವ ಮೂಡುವ ಹೊತ್ತಿನಲ್ಲಿ ಮೂಡಲ ಕಡೇಕ ಸಾಸುವೆ ಕಾಳಿನಷ್ಟು ಬೆಳಕು ಸೂರ್ಯ