ವಿಷಯಕ್ಕೆ ಹೋಗು

ಪುಟ:Aramane.pdf/೫೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅರಮನೆಯೊ¼ಗೆ.. ನಾಗ ಮಿಥುನಗಳಿದ್ದ ಅರಮನೆಯೊಳಗ.. ವಳ ಹೊರಗಿನ ಯತ್ವಾಸ ಅಳಿಸಿ ಹಾಕಿದ್ದ ಅರಮನೆಯೊಳಗ.. ಹಿಂದಕ ಮುಂದಕ ವಾಲಾಡುತಲಿದ್ದ ತೊಟ್ಟಿಲುಗಳುಳ್ಳ ಅರಮನೆಯೊಳಗ.., ಜೋಗುಳದ ನಲ್ವಾಡುಗಳ ನಾದದ ಕೊಪ್ಪರಿಗೆಯಂತಿದ್ದ ಅರಮನೆಯೊಳಗ.. ಮೂಡದೆ ಮುಣುಗದೆ ವಂದೇ ಸಮನಾದ ಹೊತ್ತು ತುಳುಕಾಡುತಲಿದ್ದ ಅರಮನೆಯೊಳಗ.. ನಡೆಯುತಲಿದ್ದುದು ವಂದಾದರ ಭಕುತಾದಿ ಮಂದಿ ಕಲ್ಪನಾ ಮಾಡುತಾ ಮಾಡುತಾ ಕಟ್ಟುತಲಿದ್ದ ಕಟ್ಟಿ ಕಿವಿಯಿಂದ ಕಿವಿಗೆ ಹರಿಬಿಡುತಲಿದ್ದ ಕಥೆಗಳು ವಂದಾ ಯರಡಾ ಬರೋಬ್ಬರಿ ಸಾವುರಾರಿ ರಬಹುದು.. ಅವುಗಳನೊಂದೊಂದು ಹೇಳೂತ ಹೋದರ ರಾಮ್ಯಾಣವೇ ಆದೀತು ಸಿವನೇ..

ಕಾಸೀಗೆ ಹೋದವರು ಕವಡೆಮ್ಮನ ದರುಸನ ತಗೊಂಡ ಮ್ಯಾಲ ಯಿಸ್ನಾತನ ದರುಸನವನ ಹೆಂಗ ತಗೊಂತಾರೋ ಹಂಗ ಅಲ್ಲಿ ನಿನ್ನೆ ಮೊನ್ನೆ ಯದ್ದಿರುವ ಸಣಿದೇವರ ದರುಸನದ ನಂತರವೇ ಸಾಂಬವಿಯ ದರುಸನನ ಪಡಕೋ ಬೇಕಂತs.. ಸಾಂಬವಿ ಮತ್ತ ಸಣಿ ಮಾತುಮನ ನಡುವೆ ಅಂಥಾದ್ದೊಂದು ವಪ್ಪಂದ ಆಗಿರುವುದಂತ.. ಹೆಂಗ ನಂಬುವುದಂದರ ಹಂಗನ ನಂಬಬೇಕಪ್ಪಾ ಅಂಬುತಾರ ಕುದುರೆಡವ ಪಟ್ಟಣಾಕ ಹೋಗಿ ಬರುವ ಭಕುತಾದಿ ಮಂದಿ. ಸಣಿದೇವರಂದರ ತಿಗಣಿ ನೊರಜು ಯಿದ್ದಂಗ... ಆತ ಯಾಕಲ್ಲಿಗೆ ಬರಲಕ ಹೋದ.. ಅವರೀರ್ವರ ನಡುವೆ ಯೇನೇನು ನಡೀತು.. ಅಂಥ ವಪ್ಪಂದವನು ಆದಿ ಸಗುತಿಯಾಕ ವಪ್ಪಿಕೊಂಡು ತನ್ನ ಕಿಮ್ಮತ್ತು ಕಡಿಮೆ ಮಾಡಿಕೊಂಡಳು.. ಯೀ ಕಥಿಯನು ಕುಂತಳ ಸೀಮೆ ಮಂದಿ ಹೆಂಗ ನಮಲಿದರಂದರ....

ತನ್ನೆದೆ ಮ್ಯಾಲ ಚಿಂತೆ, ಯಾಕುಲ, ಯಸನ ಯಿವೇ ಮೊದಲಾದ ಆಭರಣಗಳನ್ನೂ ಧರಿಸಿಕೊಂಡು ಮುಂದುಗಡೆಯಿಳಿದ ಆತನೇ ಸಣಿದೇವ ಯಂದು ಸಾಂಬವಿ ಗುರುತು ಹಿಡಿಯಲಿಲ್ಲವಂತೆ ಮೊದ ಮೊದಲಿಗೆ, ಸಣಿಯೇ ತಾನು ಯಂದು ಪರಿಚಯ ಹೇಳಿಕೊಂಡನಂತೆ.. ನೀನೆದಕ ಬಂದೀ ಅಂತ ತಾಯಿ ಕೇಳಿದರೆ ಸಾಂಬಯ್ಯನ ಕಾಡಲಕ ಬಂದೀನಿ ಯಂದನಂತೆ.. ಕೇಳಿ ತಾಯಿ ಗಡಗಡ ನಡುಗಿದಳಂತೆ.. ಬ್ಯಾಡಪ್ಪಾ ಬ್ಯಾಡ ಯಂದು ಪರಿಪರಿಯಿಂದ ಕೇಳಿಕೊಂಡಳಂತೆ.. ಹಿಂಗ ಅವರಿಬ್ಬರ ನಡುವೆ ಮಸ್ತು ವಾದೋಪವಾದ ನಡೆಯಿತಂತೆ.. ಕೊನೀಕಿದ್ದು ತನಗೊಂದು ಗುಡಿ ಬೇಕೆಂದೂ.. ಅದರಲ್ಲಿ ತ್ರಿಕಾಲ