ಮಾತು ಕೊಟ್ಟಿದ್ದನು ತಾನು ಬಹದ್ದೂರನಾಗುವ ಬಯಕೆಯಿಂದಾತನು....
ಅಯ್ಯೋ ಯಲ್ಲಾರು ವುಂಡು ಹೋದರು, ಆದರ ರಾಮಣ್ಣ ಮತ್ತಾತನ ಸಂಗಡಿಗರು ವಂದು ತುತ್ತು ಕೂಳು ಮುಟ್ಟಿಲ್ಲವಲ್ಲಾ, ವಂದು ಗುಟುಕು ನೀರು ಕುಡಿದಿಲ್ಲವಲ್ಲಾ.. ಯತ್ತಲಾಗ ಹೋದರು ಯಂದು ಸೊನ್ನ ಗ್ರಾಮದ ಯಂಟು ದಿಕ್ಕುಗಳನ್ನು ಜಾಲಾಡುತ್ತಿರುವಾಗ್ಗೆ.. “ವಡ ಹುಟ್ಟುದೋರಿಗಿಂತ ಮಿಗಿಲಿದ್ದೋರನ್ನು ನೀವು ನೋಡಿದಿರೇನ್ರಪ್ಪಾ?” ಯಂದು ಅವರಿವರನ್ನು ಆತನು ಕೇಳಾಡುತ್ತಿರುವಾಗ್ಗೆ, ಕಯ್ಗೆ ಬಂದ ತುತ್ತು ಬಾಯೀಗ ಬರಲಿಲ್ಲವಲ್ಲ ಯಂದಾವಯ್ಯನು ಪೇಚಾಡಿಕೊಳ್ಳುತ್ತಿರುವಾಗ್ಗೆ...
ಯಿತ್ತ ಫಾದರಿ ಅಂಥೋಣಿಯು ಕುದುರೆಡವು ಪಟ್ಟಣಕ ಯಾಕ ಬಂದಿದ್ದನೆಂದರ ಚರ್ಚು ಕಟ್ಟಿಸಲಕ...
ಯಿದೇ ಸದರಿ ಪಟ್ಟಣದಲ್ಲಿ ವÆರವ್ವನ ಗುಡಿ ಹಿಂದಕ ಯಿದ್ದ ಮನೆವಳಗ ಬಟಾಬಯಲವ್ವ ಯಂಬ ಮುಪ್ಪಾನು ಮುದೇದು ಯಾರು ಬಂದರೂ ಯಮನೆಂದು ತಿಳಿದು ತರುಬಿ “ನನ್ನನ್ಯಾವಾಗ ತಗೊಂಡೀತೀಯಪ್ಪಾ” ಯಂದು ಕೇಳಾಡುತಲಿತ್ತು.. ವಂದಲ್ಲಾ ವಂದು ಕಾಳಗದಲ್ಲಿ ಅದು ತನ್ನ ಮಕ್ಕಳು ಮರಿಗಳನ ಕಳಕೊಂಡು ವಬ್ಬಂಟಿಯಾಗಿತ್ತು. ತನ್ನ ಮಯ್ಯಿ ಮ್ಯಾಲ ಯೇಸು ಸುಕ್ಕಿನ ಗೆರೆಗಳಿವೆಯೋ ಆಸು ವರುಷಗಳ ಹಿಂದೆ ಹುಟ್ಟಿರೋ ಅದು ಯೇನು ತಿಂಬುತ್ತಿತ್ತೋ? ಯೇನು ಕುಡಿಯುತ್ತಿತ್ತೋ? ಅದು ದೇವರಿಗೇ ಗೊತ್ತು. ಅದಕ ಹಿಂದಿರಬೇಕಾದ, ಮುಂದಿರಬೇಕಾದ ವಬ್ಬನೇ ವಬ್ಬಾತ ಮರಿ ಮೊಮ್ಮಗ ಯಿರುವನೆಂದರೆ ಯಿರುವನು, ಯಿಲ್ಲ ಅಂದರ ಯಿಲ್ಲ. ಜರುಮಲಿಗೂ, ನಿಚ್ಚಾಪುರಕೂ ನಿಲುವಂಜಿಯಲ್ಲಿ ನಡೆದ ನಿರಣಾಯಕ ಕಾಳಗದಲ್ಲಿ ಯೀರ ಮರಣವನ್ನು ಅಪ್ಪಿದ ತನ್ನ ಗಂಡ ಟಾಕಯ್ಯ(ಯೀತನ ನಿಜ ನಾಮಧೆಯ ಕರರಾಯನೆಂದಿತ್ತು, ಮಂದಿ ಬಾಯೊಳಗೆ..)ನ ಹೆಣ ಹುಡುಕೋ ಸಲುವಾಗಿ ಅದರ ಮೊಮ್ಮಗಳಾದ ಬತೇರವ್ವ ನಡಕೊಂಡು ಹೋದಳು. ಆಗ್ಗೆ ಆಕೆ ತುಂಬು ಗರುಬಿಣಿಯಿದ್ದಳು. ಯಿದು ತನ ಗಂಡನ ಹೆಣ ಯಿರಬೌದೇ, ಅದು ತನ ಗಂಡನ ಹೆಣ ಯಿರಬೌದೇ ಯಂದು ಹುಡುಕ್ಕೋತ ಹುಡುಕ್ಕೋತ ಬ್ಯಾನೆ ತಿಂಬಲಕ ಹತ್ತಿದಳು. ಯಿನ್ನೇನು ಹೆಣ ಸಿಕ್ಕೇಬುಟ್ಟುತು ಅಂಬುವಷ್ಟರಲ್ಲಿ ವಂದು ಗಂಡುಕೂಸನ್ನು ಹಡದುಬುಟ್ಟಳು. ಹಸಿ ಹಸಿಗೂಸನ್ನು ಬೆನ್ನಿಗೂ, ಗಂಡನ ಹೆಣದ ವಂದು ತುಂಡನ್ನು ಹೆಗಲ ಮ್ಯಾಲೂ ಹಾಕ್ಕೊಂಡು ಕುದುರೆಡವಿಗ