ವಿಷಯಕ್ಕೆ ಹೋಗು

ಪುಟ:Aramane.pdf/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಯಡಬಲ ಅಲ್ಲಿ ಸೂಲದ ಹಬ್ಬವು ಬಲು ಯಿಜ್ರುಂಭಣೆಯಿಂದ ನಡೆಯುತಲಿತ್ತು. ಅದು ಮಾಮೂಲಿ ಸೂಲವಾಗಿರಲಿಲ್ಲ. ಭೂಲೋಕ ಕ್ಕದಿsಕವೆನಿಸಿದ್ದ ಕುಂತಳ ಪ್ರಾಂತದ ಆಸ್ತೀಕರನ್ನು ನೋಡುವ ಸಲುವಾಗಿ ಪರಮೇಸ್ಟರನು ಹೆಂಡತಿ ಮಕ್ಕಳ ಸಮೇತ ರುಷಭ ವಾಹನವನ್ನು ಯೇರಿ ಆಕಾಸ ಮಾರ್ಗವಾಗಿ ಹೋಗುತ್ತಿರ ಬೇಕಾದರೆ ಆತನ ಕಯ್ಯಲ್ಲಿದ್ದ ತ್ರಿಶೂಲ ಆಯ ತಪ್ಪಿ ವುದುರಿ ನೆಲದ ಮ್ಯಾಲ ಸಿಕ್ಕೊಂಡಿತ್ತಲ್ಲ.. ಅದೇ ಯಿದಾಗಿತ್ತು. ಅದಕ್ಕೆ ಬಿದ್ದು ಬಲಿಗೊಂಡವರಿಗೆ ಸೊರ್ಗ ಪ್ರಾಪ್ತವಾಗುತ್ತದೆ ಯಂಬ ನಂಬಿಕೆಯಿಂದಾಗಿ ಅನಾದಿ ಕಾಲದಿಂದಲೂ ದೂರ ದೂರದಿಂದ ಅಲ್ಲಿಗೆ ಆಗಮಿಸಿ ಅದಕ್ಕೆ ಆತುಮಾರ್ಪಣ ಮಾಡಿಕೊಂಡು ಸೊರ್ಗಲೋಕದ ಕಡೆ ನಡೆದಿದ್ದರು. ಯಿಂಥ ಸ್ಥಳ ಪುರಾಣ ದಿಂದಲಂಕ್ರುತಗೊಂಡಿದ್ದ ಸಿಡೇಗಲ್ಲಿನ ಸೂಲದ ಹಬ್ಬವನ್ನು ನೋಡಲೆಂದು ಚಿಗುರು ಮೀಸೆಯ ಭಯ್ರವ ನಾಯಕನೂ ಮಾರು ಯೇಷದಲ್ಲಿ ಅಲ್ಲಿಗೆ ಹೋಗಿದ್ದನು. ಅಲ್ಲಿ ಜನಮೋ ಜನ, ಅದರ ಮ್ಯಾಲ ಬಿದ್ದು ತಮ್ಮ ದೇಹದ ನಸ್ವರತೆಗೆ ಮಂಗಳ ಹಾಡಲಕೆಂದು ದೊಡ ದೊಡ್ಡ ಮನೆತನ ಹಿರೀಕ ಮಂದಿಯೂ ಅಲ್ಲಿಗೆ ಬಂದಿದ್ದರು. ಅವರು ನಾ ಮುಂದು ತಾ ಮುಂದು ಅಂತ ಕಿರೀಕರನು ಪೀಡಿಸುತಲಿದ್ದರು. ಹೋದ ಸಲ ಬಾಗುಳಿಯ ರಾಜಮಾತೆಯಾದ ವುಚ್ಚೆಂಗೆವ್ವ ತಾನೊಬ್ಬಳೆ ಪಾದ ಯಾತ್ರೆಹೊಂಟು ಬಂದು ಜಯನಮಂಪಾರೋತಿ ಪತಿ ಹರಹರ ಮಾದೇವ ಯಂದು ಕೂಗುತ್ತ ಸೂಲದ ಮ್ಯಾಲ ಬಿದ್ದು ಆತುಮಾಹುತಿ ಮಾಡಿಕೊಂಡಿದ್ದಳು. ಆದ್ದರಿಂದ ವರುಷೊಪ್ಪತ್ತಿನಲ್ಲಿ ಸಿಡೇಗಲ್ಲು ಕುಂತಳ ಪ್ರಾಂತದ ಸೀಮೋಲ್ಲಂಘನೆ ಮಾಡಿ ಪ್ರಸಿದ್ಧವಾಗಿತ್ತು. ದೂರ ದೂರದ ವÆರುಗಳಿಂದ ಜನರು ಬಂದು ಕಲೆತಿದ್ದರು. ಹರೇದ ಹುಡುಗರು ಜನರನ್ನು ರಂಜಿಸಲಕೆಂದು ಅನೇಕ ಕಸರತ್ತುಗಳನ್ನು ಪ್ರದರ್ಶನ ಮಾಡುತಲಿದ್ದರು. ಗೆದ್ದು ಯಿನಾಮುಗಳನ್ನು ಪಡಕೊಳ್ಳುತಲಿದ್ದರು, ಮಾರು ಯೇಷದಲ್ಲಿದ್ದ ಭಯ್ರವನಾಯಕನೂ ಹಿಂದೆ ಬೀಳಲಿಲ್ಲ, ಕುಸ್ತಿ, ಕತ್ತಿವರಸೆ, ಬಡಗೆ ತಿರುಮೋದು, ಮೋಡೋದು ಜಿಗಿಯೋದು, ಸರಸರನೆ ಹತ್ತೋದು, ಭರಭರನೆ ಯಿಳಿಯೋದು ಯಿವೇ ಮೊದಲಾದ ಪಂದ್ಯಾಟಗಳಲ್ಲಿ ಭಾಗವಹಿಸಿ ಯಿನಾಮುಗಳನ್ನು ಗೆದ್ದು ಸೋತವರಿಗೆ ಕೊಟ್ಟು ಯಲ್ಲಾರ ರುದಯಗಳನ್ನು ಗೆದ್ದು ಸಯ್ಯಿ ಅನ್ನಿಸಿಕೊಂಡನು.

ಆತನು ಹಂಗೇ ಸಾಂಪ್ರತು ಪರಿಶೆಯೊಳಗೆ ತಿರುಗಾಡುತ್ತಿರುವಾಗ್ಗೆ ತರುಣಿಯೋರ್ವಳ ರೂಪ ಲಾವಣ್ಯಕ್ಕೆ ಮರುಳಾದನು. ಆಕೆಯೂ ಅವನ ತಾರುಣ್ಯದಯಿಸಿರಿಗೆ ಮನ ಸೋತಳು, ತಾನಿಂಥವರ ಮಗಳೆಂಬುದನ್ನು