ವಿಷಯಕ್ಕೆ ಹೋಗು

ಪುಟ:Aramane.pdf/೫೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅತ್ತ ಕೂಡ್ಲಿಗಿ ಪಟ್ಟಣದೊಳಗ ಹೆನ್ರಿಸಾಹೇಬನಿಗೆ ಚಿನ್ನಸಾನಿ ರೂಪದಲ್ಲಿ ತಿಕ್ಕಡಿ ಯೊಂದು ಕಾಡಲಕ ಹತ್ತಿತ್ತಲ್ಲ. ಆ ತಿಕ್ಕಡಿಯ ಮಯ್ಮೆಯನ್ನು ವರಣಿಸಲು ಆದಿಸೇಸನಿಗೂ ಅಸಾಧ್ಯವಾಗಿತ್ತು. ಪರಂಗಿಯವನು ತನ್ನ ಪ್ರಣಯ ಪ್ರೇಮ ಯಿರಹಗಳ ಹಾರಾಟವನ್ನು ಗುಟ್ಟಾತಿ ಗುಟ್ಟಾಗಿ ನಡೆಸಬೇಕೆಂದು ಯೇನೇನೋ ಪ್ರಯತ್ನಗಳನ್ನು ಮಾಡುತಲಿದ್ದನು. ಆದರದು ಸೋರಿಕೋತ ಪಟ್ಟಣದ ತುಂಬೆಲ್ಲ ಅಷ್ಟೇ ಯಾಕೆ, ಸುತಮುತ್ತಲ ಗ್ರಾಮಗಳೆಲ್ಲ ಹರಕೋತ ಹರಕೋತ ಹೋಗಿಬಿಟ್ಟಿತ್ತು. ಪ್ರತಿಯೋರ್ವರ ಬಾಯೊಳಗ ನಮಲುವ ತೊಂಬಲವಾಗಿತ್ತು, ಕಿವಿಯೊಳಗೆ ಗುಂಯ್ಗುಟ್ಟುವ ಕೂಕಣಿ ಆಗಿತ್ತು.. ತಲೆ ತುಂಬೆಲ್ಲ ಹರದಾಡುವ ಹೇನಾಗಿತ್ತು.. ಅವಯ್ಯನ ಪ್ರೇಮ ಕಲಾಪ ಆರಕ್ಕೇರಿರಲಿಲ್ಲ.. ಮೂರಕ್ಕಿಳಿದಿರಲಿಲ್ಲ, ಹಾಡುವ ಮಂದಿ ಹಾಡು ಕಟ್ಟಿಬಿಟ್ಟಿದ್ದರು, ಹೇಳೋ ಮಂದಿ ಕಥಿ ಕಟ್ಟಿಬಿಟ್ಟಿದ್ದರು. ಹಾಡು ಕಥೆಗಳೊಳಗೆ ಹೆನ್ರಿಗಂಧರ್ವಲೋಕದವನಾಗಿದ್ದರೆ ಚಿನ್ನಸಾನಿ ಕಿನ್ನರಲೋಕದ ಕಿನ್ನರಸಾನಿ ಆಗಿ ಆವತರಿಸಿದ್ದಳು. ಜೋಗೇರು, ಲಾವಣಿ ಗೀಗಿ ತಂಡದವರು ತಮ ತಮ್ಮ ಮೇಳಗಳಲ್ಲಿ ಅವನ್ನೆಲ್ಲ ಬಳಸಿಕೊಳ್ಳದೆ ಯಿರಲಿಲ್ಲ. ವಂದು ಯಿಚಿತ್ರಸತ್ಯ ಅಂದರೆ ಆಯಾ ಪ್ರಾಕಾರದ ಜಾನಪದ ರುತ್ತಿಗಾಯಕರು ಅವರೀರ್ವರ ಪ್ರೇಮವಸ್ತುವುಳ್ಳ ಹಾಡುಗಳನ್ನು ಹಾಡಿಕೋತ ವÆರಿಂದೂರಿಗೆ ಅಲೆಯತೊಡಗಿದ್ದದ್ದು. ಯಿನ್ನೂ ಯಿಚಿತ್ರಸತ್ಯ ಅಂದರೆ ಜಾನಪದ ಗಾಯಕರು ತಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಕೂಡ್ಲಿಗಿ ಪಟ್ಟಣದೊಳಗ ತಿಲ್ಲಾನ ತಾಯಕ್ಕನೆದುರು.. ಹೆನ್ರಿಸಾಹೇಬನ ಯದುರು ಹಾಡಿ ಮೆಚ್ಚುಗೆ ಪಡೆಯುತಲಿದ್ದುದು. ಯೀ ಕಥೆಯನ್ನು ಯಲ್ಲೋ ಕೇಳಿದಂಗಯ್ತಲ್ಲಾ... ನೋಡಿದಂಗಯ್ತಲ್ಲಾ.. ಯಂದು ಯೋಚಿಸುತಾ ಯೋಚಿಸುತಾ ಅರೆ ಯಿದು ನಮ್ಮ ಕಥಿಯೇ ಆಗಯ್ತಲ್ಲಾ ಯಂದವರು ವುದ್ಗಾರ ಹೊಂಡಿಸುವ ಹೊತ್ತಿಗೆ ಜಾನಪದ ಗಾಯಕರು ಯಿನ್ನೆಲ್ಲೋ ಯಿದ್ದುಬಿಡುತಲಿದ್ದರು. ಯೀ ಪ್ರಕಾರವಾಗಿ...

ಯೀ ನಿಜಸಂಗತಿಯ ಸೊಲುಪ ಹಿಂದಕ ಮುಂದಕ ಬಂದರ.... ಯಂಕೋಬಯ್ಯ ಸಾಸ್ತ್ರಿಗಳನ್ನು ದೂತನಾಗಿ ತಾಯಕ್ಕನ ಬಳಿಗೆ ಹೆನ್ರಿಯು ಕಳುವಿದ್ದನಷ್ಟೆ. ಅಲ್ಲಿಂದ...

ಅದರ ಪ್ರಕಾರ ಮಾರನೆಯ ದಿನ ತಾನು ಯಾವ ಮಾರಾಣಿಗೂ ಕಡಿಮೆಯಿಲ್ಲ ಯಂದು ತೋರ್ಪಡಿಸಲೋಸುಗ ಸರುವಾಲಂಕಾರಭೂಷಿತೆಯಾಗಿ ತಿಲ್ಲಾನ ತಾಯಕ್ಕ ಬುಗುಡಿ ನೀಲಕಂಠಪ್ಪನ ಮುಂದಾಳತ್ವದಲ್ಲಿ ಯೇಳೆಂಟು