ವಿಷಯಕ್ಕೆ ಹೋಗು

ಪುಟ:Aramane.pdf/೫೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಯಿಟುಕೊಂಡಿದ್ದನಷ್ಟೆ.. ತನ್ನ ಪ್ರಿಯತಮೆಗೆ ಪ್ರೇಮ ಪತ್ರಗಳನು ಬರೆಯು ವಸಲುವಾಗಿ.. ಪ್ರೇಮದ ಮಾತುಗಳನು ಅನ್ನುವ ಸಲುವಾಗಿ, ಆಡುವ ಸಲುವಾಗಿ ಕಷ್ಟಪಟ್ಟು ಕನ್ನಡ ಭಾಷೆಯನ್ನು ಕಲಿತುಕೊಂಡಿದ್ದನಷ್ಟೆ.. ತನ್ನ ಕರುಮಮೋ ಯಂಬಂತೆ ಅವನೆದೆಯೊಳಗಿನ ಕನ್ನಡ ಭಾಷೆ, ಪ್ರೇಮ ಸಂಬಂಧೀ ಭಾವನೆಗಳೂ ಸಾಂಬವಿಯ ಆಗ್ನೆಯನ್ನು ಪಾಲಿಸದೆ ಯಿರಲಿಲ್ಲವಂತೆ.. ಯಲ್ಲವೂಬಂದವು.. ಅವುಗಳ ಪಯ್ಕಿ ವಂದೇ ವಂದು ಭಾವನೆಯು ಬಂದು ಅವನೆದೆಗೂಡನು ಸೇರಿಕೊಳ್ಳಲಿಲ್ಲವಂತೆ....

ಗೊಂದಲಿಗರ ದುರುಗೋಜಿ ತಾನು ಕಟ್ಟಿದ ಕದಿ‹ಯೊಳಗ ಅವುಗಳ ಕುರಿತಂತೆ ನವರಸಭರಿತವಾಗಿ ವರಣ ಮಾಡಿದ್ದಾನೆ ಸಿವನೇ.. ಅಂತೆಕಂತೆಯ ಹಂಗು ತೊರೆದು ನೇರವಾಗಿ ಹೇಳುವುದಾದರೆ..

ಕೂಡ್ಲಿಗಿ ತಹಸೀಲಿಗೆ ಅನತಿದೂರದಲ್ಲಿ ಅಂದರ ಮೂರು ಸಲಕ ನಿಂಬೇಹಣ್ಣನ್ನು ವಗೆಯುವಷ್ಟು ದೂರದಲ್ಲಿ... ಕಕ್ಕುಪ್ಪಿ ಯಂಬ ಗ್ರಾಮವು ಯರಡು ಗುಡಾರಗಳಷ್ಟ ಗಲಕಿರುವುದು. ಹೊನ್ನುರುಕಿ, ಬಂದುರುಕಿ, ಕಾಸರುಕಿ ಯಂಬ ಮೂರು ನಮೂನೆಯ ಕುರುಚಲು ಕಾಡುಗಳಿಂದದು ಸಯ್ತೋಪಚಾರ ಮಾಡಿಸಿಕೊಳ್ಳುತಲಿರುವುದು. ಅಲ್ಲೊಂದಿಲ್ಲೊಂದು ಕಡುಬುಗಳಂತೆ ಕಾಣಬರುವ ಝೋಪಡಿಗಳು ಹೆಚ್ಚೆಂದರೆ ಅಯವತ್ತರ ಮ್ಯಾಲ, ಅರವತ್ತರವಳಗೆ.. ಅವುಗಳಲ್ಲಿ ವಾಸಸ್ಥರು ಯಾರಪ್ಪಾ ಅಂದರೆ ಬುಡುಬುಡುಕ್ಯೋರು. ಅವರಿಗಂಟಿಕೊಂಡಿರುವ ನಾಮಧೇಯಗಳು ಯಾವ್ಯಾವಪ್ಪ ಅಂದರ ಸೀಮಡ, ಕಾವಡ, ತೇವಡ, ಜಾರಡ, ತೀರುಡ, ಯಾರಡ, ಬೇಕಡ, ಬೇರಡ ಮುಂತಾದ ಡಕಾರಂತಗಳು, ಅವರವರ ಹೆಂಡಂದಿರ ಹೆಸರುಗಳೂ ಡಿಕಾರಂತಗಳಾಗಿರುವವು. ಅವರ ಕುಲಕಸುಬು ಯಾವುದಪ್ಪ ಅಂದರ ಕಯ್ಯೊಳಗೊಂದು ಟಮಣಕ ಟಮಣಕಯಂದು ಸಬುಧಮಾಡುವ ಬುಡುಬುಡಕೆಯಂಬ ಗಾತುರದ ಚರುಮವಾದ್ಯ ಹಿಡಕೊಂಡು, ಬಲಗೊಂದು ಯೇಳು ಬಣ್ಣದ ತ್ಯಾಪೆಯ ಜೋಳಿಗೆ ಯಿಳಿಬಿಟುಕೊಂಡು, ಹಾಸಲಕೂ, ಹೊದೆಯಲಕೂ ಬರುವಂಥ ಅಯಿದೂವರೆ ಮೊಳದ ಮುಂಡಾಸು ಸುತುಕೊಂಡು, ಮಂಗಣ್ಣವಂದನ್ನು ಹೆಗಲ ಮ್ಯಾಲ ಕುಂಡ್ರಿಸಿಕೊಂಡು ಮುನ್ನೂರಾ ಮುವ್ವತ್ತುಕಾಲ ವÆರೂರು ಅಲೆಯುವುದು. ಅವರ ಪಯ್ಕಿ ತಿಕ್ಕಡಯಂಬಾತ ತನ ಮಯ್ಯೊಳಗ ಆರಾಮಿಲ್ಲಯಂಬ ಕಾರಣಕ್ಕೋ, ತಾನು ಹೊಸದಾಗಿ ಸೀರುಡುಕೆ ಮಾಡಿಕೊಂಡು ತಂದಿರುವ