ಅಂಜಣಿಯು ಕಯ್ಲಿ ಕೋಲನ್ನು ಬಲು ವಯನಾಗಿ ತಿರುಗಿಸುತ್ತಲೂ.. ಯಿವರಾರೀ ಅಪರಿಚಿತ ಆದಿವಾಸಿಗಳು ಯಂಬಂತೆ ನೋಡುತ್ತಲೂ ಆಟು ದೂರದಲ್ಲಿ ನಿಂತಿತ್ತು. “ಅರೇ ಕುಡುದ್ಯಾ ಯನ್ನ ಕುಳುಂದೈ, ಯನ್ನ ಅಪ್ಪ, ವಾಚಾರಲೇ ವಾಚಾರು” ಯಂದು ಆತ ಕೂಗಿದನು. ಕೂಗಿದೊಡನೆ ಸನೀಕ ಬರುವುದು ವತ್ತಟ್ಟಿಗಿರಲಿ, ಅಪರಿಚಿತರೆಂಬಂತೆ ದುರುಗುಟ್ಟಿ ನೋಡಿತು. ಪಟ್ಟು ಪಾಚಿರೇ ಪಟ್ಟು ಪಾಚಿರೇ ಯಂದು ಕೂಗುತ್ತ ಹಿಡಿಯಲೆಂದು ಹತ್ತಿರ ಹತ್ತಿರಕ್ಕೆ ಹೋಗಲು ಅದು ಹಿಂದಕ ಜರಗೋದು ಮಾಡಿತು. ಕೀರ್ ಕಿಚಾರೆ ಯಂದು ಅರಚಲಿಲ್ಲ. ಮರ ಯೇರಿ ಕುಣಿದಾಡಿ ಜಿಗಿದಾಡಿ ಮರ್ಕಟ ಸೊಭಾವವನ್ನು ಮೆರೆಯಲಿಲ್ಲ. ಆಶ್ಚರ್ಯ ಮತ್ತು ದುಕ್ಕದ ಅಮಲನ್ನು ತಡಕೊಳ್ಳಲಾಗದೆ ಕಾವ್ಕುರೇ... ಕಾವ್ಕುರೇ ಯಂದು ಕೇಳಿದ್ದಕ್ಕದು ಅಶ್ಚರ್ಯದ ಮ್ಯಾಲ ಬರೆಯಳದಂತೆ “ಖಬರ್ದಾರ್ ....ನಾನು ಯಾರಂತ ತಿಳಿಕೊಂಡೀಯಲೇ ರ್ಯಾಸ್ಕಲ್.... ನಾನು ಹೆನ್ರಿಸಾಹೇಬ ಅದೀನಿ.. ನನಗೆ ಸಲ್ಯೂಟ್ ಮಾಡುತೀಯೋ ಯಿಲ್ಲ.... ನಾಕು ಭಾರಿಸಲೋ” ಯಂದು ಕೋಲು ಝಳಪಿಸಿತು. ತಿಕ್ಕಡನು ಆ ಛಣ ಅಳಲಕ ಬಾರದಂಗಾದನು, ನಗಲಕೂ ಬಾರದಂಗಾದನು. ಯಿದ್ಯಾಕಿಂಗಾಡಲಕ ಹತ್ತಯ್ತೆ.. ಕಾಸರಕ ಕಾಡೊಳಗ ಯೇನಾಯ್ತಿದಕ್ಕೆ.. ಮಿಚ್ಚೇರಿ ಆಂಜನೇಯಸ್ವಾಮಿ ಯಿದಕ ತಗುಲಿರೋ ಭ್ರಾಂತಿ ಹೋಗಲಾಡಿಸಪ್ಪ ಯಂದು ತನ್ನ ಕುಲ ದೇವರನ್ನು ಪ್ರಾರ್ಥಿಸಿದನು. ಆಗಿದ್ದು ತಿಕ್ಕಡಿಯು ತನ ಬಾಯನ್ನು ಅವನ ಕಿವಿಯೊಳಗಿಟ್ಟು ಯಿದಕ್ಯಾಕ ಹಂಗ ಬೇಡಿಕಮ್ತೀ? ಪ್ಯಾಟಿ ಪ್ಯಾಟೀಲಿ ಆಡಿಸಿ ನಾಕು ಕಾಸು ಸಂಪಾದಿಸ ಬವುದಲ್ಲಾ.. ವುಪಾಯಾಂತರದಿಂದ ಹಿಡಿಯಬೇಕು ಯಂದು ಪಿಸುಗುಟ್ಟಿದಳು. ಅದು ಪಾಡೆನಿಸಿತು.
ಅವರಿಬ್ಬರೂ ತಾಸುಗಟ್ಟಲೆ ಪ್ರಯತ್ನಪಟ್ಟು ಅದನ್ನು ಬಂಧಿಸುವಲ್ಲಿ ಯಶಸ್ವಿ ಆದರು.. ಬಗೆಬಗೆಯ ಹಣ್ಣುಹಂಪಲನ್ನು ಅದಕ್ಕೆ ತಿಂಬಲಕಿಟ್ಟರು.. ಹೆನ್ರಿಸಾಹೇಬರೇ.... ನಿಮಗೆ ಬೇಕಾಗಿರುವುದಾದರು ಯೇನು? ಯಂದು ಕೇಳಿದ್ದಕ್ಕದು ಓರೆ ಅಕ್ಷರಗಳು ನನಗೆ ಚಿನ್ನಾಸಾನಿ ಬೇಕು ಯಂದು ಹೇಳಿತು. ಅದಕ್ಕವರು ಹೊಟ್ಟೆ ಹುಣ್ಣಾಗುವಂತೆ ನಗಾಡುತ ಆಯ್ತು ಸಾಹೇಬರೇ.. ಕೂಡ್ಲಿಗಿ ಪಟ್ಟಣಕ್ಕೆ ಹೋಗೋಣ... ಚಿನ್ನಾಸಾನಿ ಯನ್ನು ಕೊಡಿಸೋಣ ಯಂದರು...
ಅವರು ಮಾರನೆಯ ದಿವಸದಿಂದಲೇ ಮಂಗಣ್ಣನಾಡಿಸಲಕ, ಬಡುಬುಡಕೆ ಹೇಳಲಕ, ಕಾಸು ಬಳಕೊಳ್ಳಲಕ ಹೊಂಟರು. ಸಾಂಪ್ರತು ಆಂಜನೇಯಸ್ವಾಮಿಗೆ