ವಿಷಯಕ್ಕೆ ಹೋಗು

ಪುಟ:Aramane.pdf/೫೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಡ್ಡಬಿದ್ದು ಅವರು ಮೋಂ ಪ್ರಥವಾಗಿ ಆಟ ಸುರುವು ಮಾಡಿದ್ದು ರಾಂಪರ ಹಣಮಂದೇವರ ಗುಡಿಮುಂದ.. ಬುಡುಬುಡುಕೆ ಅಳ್ಳಾಡಿಸುತ, ತಿರುಗಿಸುತ ಠೆಮಠೆಮಣಕ್ಕ ಅಂತ ಸಬುಧ ಮಾಡುತ್ತ ನಿಂತ ಮಂದಿಯನ್ನು ಕುಳ್ಳರಿಸುತ್ತ, ಕುಂತ ಮಂದಿಯನ್ನು ನಿಲ್ಲಿಸುತ್ತ ಹೆನ್ರಿಸಾಬ ಬಂದಾನ್ನೋಡಿ, ಠಸ್ಸಾ ಪುಸ್ಸಾ ಮಾತಾಡತಾನ್ರೀ.. ವಂದು ರೂಪಾಯಿ ಕೊಟ್ಟವರಿಗೆ ವಂದು ಸಲಾಮು, ಯರಡು ರೂಪಾಯಿ ಕೊಟ್ಟವರಿಗೆ ಯರಡು ಸಲಾಮು.... ಮೂರು ಕೊಟ್ಟವರ ಮುಂದ ಮುಗ್ಗರಿಸಿ ಬೀಳುತಾನ, ನಾಕು ಕೊಟ್ಟವರ ಹಿಂದ ಕಾವಲು ಕಾಯತಾನ... ಠೆಮ ಠೆಮಣಕ್ಕ ಠೆಮಠೆಣಣ...

“ನೀನು ಯಾರಪ್ಪ”

“ನಾನು ಹೆನ್ರಿಸಾಹೇಬನದೀನಿ!”

“ನಿನ್ನ ರುದಯದೊಳಗ ಯಾರಿದಾರ?”

“ಚಂದುಳ್ಳಿ ಚಲುವೆ ಅದಾಳ”

“ಆಕೆಯ ನಾಮಾಂಕಿತ ಯೇನಪ್ಪಾ?”

“ಚಿನ್ನಸಾನಿ”

“ಆಕೇನಯೇನು ಮಾಡುತೀಯಪ್ಪಾ?”

“ಮದುವೆ ಆಗತೀನಿ”

“ಮದುವೆ ಆಗಿ ಯೇನು ಮಾಡುತೀs?”

“ಹತ್ತು ಮಕ್ಕಳಿಗೆ ತಂದೆ ಆಗುತೀನಿ”

“ಶಬ್ಬಾಷ್...ಹೆನ್ರೀ ಸಾಹೇಬ”

“ಹೆನ್ರಿಸಾಹೇಬನ ಹೆಸರು ಹೇಳಿಕೊಂಡು ಚಪ್ಪಾಳೆ ತಟ್ಟಿರುಪ್ಪಾ” ಯಂದು ತಿಕ್ಕಡ ಹೇಳುತ್ತಲೇ ಕುಂತ ನಿಂತ ಮಂದಿ ಕಿವಿಗಡುಚಿಕ್ಕುವಂತೆ ಚಪ್ಪಾಳೆ ತಟ್ಟುತಾರೆ. ನಮ ಹೆನ್ರಿಸಾಹೇಬಗೆ ಪಿಳ್ಳೆ ತೆಗೆಯೋದಯ್ತೆ.. ಯೀಳ್ಳೆನಾಮಾಚಾರ ಮಾಡೋದಯ್ತೆ.. ಚಿನ್ನಸಾನಿ ಸಂಗಾಟ ಧಾಂ ಧೂಂ ಅಂತ ಲಗ್ಗುನ ಮಾಡುವುದಯ್ತೆ ಕನರಪ್ಪಾ.. ಹೆನ್ರಿಅಂದರ ಮಾಮೂಲು ಮನುಶ್ಯಾ ಅಲ್ಲರಪ್ಪಾ. ಕುಂಪಣಿ ಸರಕಾರದ ಅದಿsಕಾರಿ ಅದಾನರಪ್ಪಾ. ಮದುವೆಗೆ ನೀವು ಬಂದು ಆಯಿರು ಮಾಡಬೇಕರಪ್ಪಾ. ಹುಗ್ಗಿ ಬೆಲ್ಲದಾಲು ವುಂಡುಕಂಡು ಹೋಗಬೇಕರಪ್ಪಾ. ಬಕ್ಕಣದಾಗ ಕಯ್ಯಿಟ್ಟು ರೊಕ್ಕಾನ ಕಿತ್ತು ಕೊಟ್ಟವರ ಮನೆವಳಗ ಬಂಗಾರದ ಹೊಗೆ ಆಡತಯ್ತೆ. ಮದುವೆ ಆಗಿರದವರಿಗೆ ಮದುವೆ ಆಗತಯ್ತೆ? ಮಕ್ಕಳಿಲ್ಲ