ವಿಷಯಕ್ಕೆ ಹೋಗು

ಪುಟ:Aramane.pdf/೫೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹೋಗಿ ನಿಜವಾದ ಹೆನ್ರಿಗೆ ತೋರಿಸಪ್ಪಾ.. ಅವನು ನಿನಗೆ ಯೇನಿಲ್ಲಾಂದರೂ ನೂರೆಕರೆ ಜಮೀನನ್ನು ವುಂಬಳಿಯಾಗಿ ಬಿಟ್ಟು ಕೊಡುತ್ತಾನೆ” ಯಂದು ಪುಸಲಾಯಿಸಿದ ಪರಿಣಾಮವಾಗಿ..

ತಿಕ್ಕಡನ ಸವಾರಿ ಬಂಡಿಯು ಸೇರೋದಕ್ಕೂ ಮೊದಲೆ ಕೂಡ್ಲಿಗಿ ಪಟ್ಟಣದ ಸರುವನ್ನೊಂದು ಮಂದಿಯು ಮರಕಟ ಸಂಬಂದಿsೕ ಸುದ್ದಿಯನ್ನು ತೊಂಬಲೋಪಾದಿಯಲ್ಲಿ ತಮ ತಮ್ಮ ಬಾಯೊಳಗೆ ಯಿಟ್ಟುಕೊಂಡು ತಿರುಗಾಡುತಲಿದ್ದರು. ಸದರಿ ಪಟ್ಟಣದ ಮನರಂಜನಾ ಕಾರ್ಯಕ್ರಮಗಳ ಗುತ್ತಿಗೆ ಹಿಡಿದು ವುಸ್ತುವಾರಿ ನೋಡಿಕೊಳ್ಳುತಲಿದ್ದ ವಪ್ಪತ್ತಪ್ಪನು ಕುದುರೆ ಮ್ಯಾಲ ಪುವ್ವಿನ ಪೊಸವಡಂಗಿಲೆಗೆ ಹೋಗಿ ತಿಕ್ಕಡನನ್ನು ಕಂಡು ವಂದು ಪ್ರದರ್ಸನಕ್ಕಿಷ್ಟಂತೆ ಮಾತಾಡಿ ವಟ್ಟು ಹತ್ತು ಪ್ರದರ್ಸನಗಳೆಂದು ಗೊತ್ತು ಮಾಡಿ ಮುಂಗಡವಾಗಿ ಅಯಿವತ್ತು ಬೆಳ್ಳಿ ರೂಪಾಯಿಗಳನ್ನು ಕೊಟ್ಟು ಬಂದಿದ್ದನು. ಮಾತಾಡುವ ಮಂಗನನ್ನು ನೋಡಲು ಮರೆಯಬೇಡಿ.. ಅದು ಆಡುವ ಮಾತುಗಳನ್ನು ಕೇಳಲು ಮರೆಯಬೇಡಿ, ಮರೆತು ನಿರಾಶರಾಗಬೇಡಿ ಯಂದು ಮುಂತಾಗಿ ಟಾಮು ಟಾಮು ಹಾಕಿಸಿದ್ದಲ್ಲದೆ, ಪಟ್ಟಣದಾದ್ಯಂತ ಗೋಡೆಗಳ, ಅದರಲ್ಲೂ ಮುಖ್ಯವಾಗಿ ಕುಂಪಣಿ ಸರಕಾರದ ಕಛೇರಿ ಸಮೀಪದ ಯಲ್ಲಾ ಗೋಡೆಗಳ ಮ್ಯಾಲ ಮಾತಾಡುವ ಮಂಗಣ್ಣನ ಚಿತ್ರಗಳನ್ನು ತ್ರೀವರ್ಣಗಳಲ್ಲಿ ಬರೆಯಿಸಿ ಪ್ರಚಾರ ಮಾಡದೆ ಯಿರಲಿಲ್ಲ. ವುದ್ಘಾಟನಾ ಪ್ರದರ್ಯನಕ್ಕೆ ಯಂಕೋಬಸಾಸ್ತ್ರಿಗಳನ್ನು ಮುಖ್ಯ ಅತಿಥಿಯಾಗಿ ಆಮಂತ್ರಿಸದೆಯಿರಲಿಲ್ಲ...

ಪ್ರದರ್ಸನದಂದು ನೂಕು ನಗ್ಗಲು ಹೇಳತೀರದು. ಮಂದು ರೂಪಾಯಿಯಲ್ಲ.. ಯರಡು ರೂಪಾಯಿ ತಕ್ಕೊಂಡು ವಳಗೆ ಬಿಡಿರಿ ಯಂದು ಕೂಗುತಲಿದ್ದ ಕಲಾಪ್ರೇಮಿಗಳನ್ನು ಸಮಾಧಾನಪಡಿಸಲು ವಪ್ಪತ್ತಯ್ಯನೂ, ಅವನ ಬಂಟರೂ ಮಿಕ್ಕು ಪ್ರಯತ್ನ ಮಾಡಿದರು. ನಿಗದಿತ ಸಮಯಕ ಸರಿಯಾಗಿ ಯಂಕೋಬ ಸಾಸ್ತ್ರಿಗಳು ಸಕುಟುಂಬ ಪರಿವಾರ ಸಮೇತ ಆಗಮಿಸಿದರು. ಕಿವಿಗಡಚಿಕ್ಕುವ ಕರತಾಡನದ ನಡುವೆ ರಂಗ ಪ್ರವೇಶ ಮಾಡಿದ ತಿಕ್ಕಡನು..

ಅವುಪಚಾರಿಕ ಕಾರ್ಯಕ್ರಮಗಳು ಮುಗಿದೊಡನೆ ತನ್ನ ಅಂಜಿಣಿ ವುರುಫ್ ಹೆನ್ರಿಯಿಂದ ಯಿಯಿಧ ಬಗೆಯ ಮಾತುಗಳನ್ನಾಡಿಸಿದನು. ಪ್ರಿಯತಮೆಗೆ ಅಣಕು ಪತ್ರಬರೆಯಿಸಿದನು. ಮೋದಿಸಿದನೂ ಸಹ. ಅದನ್ನು ನೋಡಿ ಸಾಸ್ತ್ರಿಗಳು ದಿಙ್ಮೂಢರಾದರು, ಭಾವಪರವಶರಾಗಿ ಕಣ್ಣಲ್ಲಿ ನೀರು ತಂದುಕೊಂಡರು.