ಸಾಲದು ಬಿದ್ದಾವು....
ಆ ಯಲ್ಲಾ ಮವುಖಿಕ ಕಾವ್ಯಗಳ ರಸಾಯನವ ತಯಾರಿಸಿ ವಾಚಕ ಮಹಾಶಯರಿಗೆ ವುಣ ಬಡಿಸುವುದಾದರೆ ಆ ಯೇಳೆಂಟು ದಿವಸಗಳ ಪರ್ಯಂತ ಮಂದಿಯೊಂದೇ ಯಾಕೆ ಸಚರಾಚರ ಗೊಂಬಿ ಹಂಗಾಗಿ ಬಿಟ್ಟಿತ್ತಂತೆ.. ಪ್ರಕ್ರುತಿಯ ನಿಗದಿsತ ಯೇಳಾಪಟ್ಟಿ ಹಿಂದಕು ಮುಂದಕಾಗಿ ಬಿಟ್ಟತ್ತಂತೆ.. ವಂದು ಹರಾ ಯಿರಲಿಲ್ಲವಂತೆ, ವಂದು ಸಿವಾ ಯಿರಲಿಲ್ಲವಂತೆ.. ಕೊಂಗರ ಸೀಮೆ ಪರಗಣದಲ್ಲಿನ ತ್ರೀಷಷಿವೀ ಪುರಾತನರೂ ಕುದುರೆಡವಿದ್ದ ದಿಕ್ಕಿನ ಕಡೇಕ ತಮ ತಮ್ಮ ಕಯ್ಯಿಗಳನೆತ್ತಿ ಸಾಂಬವೀವುಘೕ ವುಘೕ ಅಂದರಂತೆ... ಅನಂತಪುರ ಸನೀಕದ ಹಂದರಾದ ಮಗ್ಗುಲು ಡೇರೆ ಹಾಕಿದ್ದ ಥಾಮಸು ಮನ್ರೋ ಸಾಹೇಬ ಮತ್ತವನ ವÆಳಿಗ ಮಾನ್ಯರೂ ಸಿಲಾ ಯಿಗ್ರಹಗಳಂತಾಗಿ ಬಿಟ್ಟಿದ್ದರಂತೆ.. ಮನ್ರೋನ ಆಪ್ತಕಾರ್ಯದರ್ಸಿಗಳಾದ ಚಿಲಕಲೂರಿ ವೆಂಪಾಟಿಗಳೂ ಕವುಡು ಬಗೆ ಹರಿದ ಮ್ಯಾಲ ಯೀಸೇಷ ಸ್ನಾನ ಸಂದ್ಯಾವಂದನೆ ಮಾಡಿ ನವಗ್ರಹಗಳನು ಸ್ತುತಿಸಿದರಂತೆ.... ಹೀಂಗ ವಬ್ಬೊಬ್ಬರದು ವಂದೊಂದು ಕಥಿವುಂಟು...
ಲಾಲ್ಯಾ ನಾಯಕನ ಲಾವಣಿಗಳಲ್ಲಿ...
ಅತ್ತ ಯಲ್ಲಾಪ್ರಕೊರಚರಟ್ಟಿಯೊಳಗೆ ಆಕಾಸ ರಾಮಣ್ಣನು ತಮ್ಮ ವಮುಸ ಪಾರಂಪರ್ಯದಿಂದ ಬಂದಿರುವ ಚೋರಕಸುಬನ್ನು ಬಿಡಬೇಕೇ? ಬ್ಯಾಡವೇ? ಯಂಬ ಸಂದಿಗ್ದಕ್ಕೆ ಸಿಲುಕಿದ್ದನಷ್ಟೆ, ಯಿದನ್ನು ಆತನ ಸಂಗಡಿಗರು ಯಿರೋಧಿಸಿದ್ದರಷ್ಟೆ. ತಿರುಕಪ್ಪಗವುಡನೇ ತಮ್ಮನ್ನು ಕುಂಪಣಿ ಸರಕಾರಕ್ಕೆ ಹಿಡಿದು ಕೊಡಲು ಸಂಚು ಹೂಡಿದನೆಂದ ಮ್ಯಾಲ ಯಾರನ್ನು ನಂಬುವುದು? ತಮ್ಮ ಕುಲದೇವತೆಯಾದ ಪೋಲಾರಮ್ಮ ಮಾತಾಯಿ ಪಾರೊತಿಯ ದ್ವಾರ ಕಾಪಾಡಿದಳು ಸರೆ.. ಯಿಲ್ಲದಿದ್ದಲ್ಲಿ ತಾವು ಕುಂಪಣಿ ಸರಕಾರದ ತುರಂಗಗಳಲ್ಲೋ ಅಥವಾ ಮರಣದಂಡನೆಗೊಳಗಾಗಿ ಸತ್ತು ನರಕದಲ್ಲೋ ಯಿರುತ್ತಿದ್ದೆ ವಲ್ಲಾ... ಅದಲ್ಲದೆ ಚೋರ ಕೆಲಸವು ವಂದು ಕಸುಬೇನು? ಯಿದಕ ಯಾರಾದರು ಗವುರವ ಕೊಡುತಾರೇನು? ಚೋರ ಕೆಲಸ ಅಂದರ ಸಾಮಾನ್ಯವಾ? ತಾವ್ಯಾರಾದರು ಹೊಟ್ಟೆ ತುಂಬ ವುಂಡಿರುವುದುಂಟಾ, ರೆಪ್ಪೆಗೆ ರೆಪ್ಪೆ ಅಂಟಿಸಿ ಕಣ್ಣು ತುಂಬ ನಿದ್ದೆ ಮಾಡಿರುವುದುಂಟಾ? ಹೆಂಡರು ಮಕ್ಕಳು ಕೂಡೆ ಸರಿಯಾಗಿ ಬಾಳುವೆ ಮಾಡಿರುವುದುಂಟಾ? ಬ್ಯಾಡಿರಪ್ಪೋ ಬ್ಯಾಡಿರಿ ಕಣರಪ್ಪಾ.. ಕಳುವು ಮಾಡುವುದು ವಂದೇ, ಕತ್ತಿ ಮ್ಯಾಲ ಸಾಮು ತೆಗೆಯುವುದೂ ವಂದೇ.. ತಮ್ಮನ್ನು