ವಿಷಯಕ್ಕೆ ಹೋಗು

ಪುಟ:Aramane.pdf/೬೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾತ್ರುಭಾಷೆಯೇ ಔದು.. ಹಾವು ಚೇಳು ಯಿರುವೆ ಗೊದ್ದಿಗವೇ ಮೊದಲಾದ ಯಂಭತ್ನಾಕು ಕೋಟಿ ಜೀವರಾಸಿಗಳೆಲ್ಲ ನನ್ನ ರೂಪು ವಯಿವಿದ್ಯಗಳೇ. ವಂದು ಯರಡರ ನಡುವೆ ಫರುಕು ಯಿಲ್ಲ.. ವಂದಕ್ಕಿನ್ನೊಂದು ವಂದು ಸೇರಿಕೊಂಡರೆ ತಾನೆ ಯರಡಕ್ಕೆ ಯರಡರ ಗವುರವ ಪ್ರಾಪ್ತವಾಗುವುದು! ಹ್ಹಾ. ಹ್ಹಾ.. ಜವಾಬೇ....

ಮನ್ರೋನು ಸಂತರಸ್ತರನು ಸಯಿರಸಲಕೆಂದೇ ಚಿಲಕಲೂರಿ ವೆಂಪಾಟಿಗಳನ್ನು ಅಲಾಯದವಾಗಿ ಬಿಟ್ಟಿದ್ದನಷ್ಟೆ. ಚಿನ್ನೋಬುಳ ನರಸಿಮ್ಮಸ್ವಾಮಿಯ ದೇವುಳವನ್ನು ಪ್ರವೇಶ ಮಾಡಿದ್ದೂ ಅಲ್ಲದೆ ಸ್ವಾಮಿವಾರಿ ಯಿನಾಮು ಭೂಮಿಯನ್ನು ಬಡವರಿಗೆ ಅದರಲ್ಲೂ ಅಂತ್ಯಜರಿಗೆ ಹಂಚಲೆತ್ನಿಸಿದ ತಮ್ಮ ಅನ್ನದಾತನ ಬಗ್ಗೆ ಅವರ ಅಂತರಂಗದಲ್ಲಿ ಬಹಿರಂಗ ಪಡಿಸಲಿಕ್ಕಾಗದಂಥ ಅಸಹನೆಯು ಸೇಡಿನ ರೂಪದಲ್ಲಿರುವುದು. ಮನ್ರೋಗೆ ಅತ್ಯುಗ್ರಪಾಠ ಕಲಿಸು ಯಂದು ತಾವು ನರಸಿಮ್ಮಸ್ವಾಮಿಯನ್ನು ಬೇಡಿಕೊಂಡಿರದೆ ಯಿರಲಿಲ್ಲ.. ಕ್ರೈಸ್ತ ಧರ್ಮೀಯನ ಸ್ಪರುಷದಿಂದ ಅಪಯಿತ್ರಗೊಂಡಿರುವ ಸಾಲಿಗ್ರಾಮವು ಮುನಿದು ವುಗ್ರರೂಪ ತಾಳಿದೆ ಯಂದೇ ಭಾವಿಸಿದ್ದ ಅವರು ಕ್ಷೋಭೆಯ ಬೀಜಕ್ಕಾಗಿ ಅವರಿವರಲ್ಲಿ ಹುಡುಕಾಡುತಲಿದ್ದರು. ಮನ್ರೋನ ಯದುರಲ್ಲಿ ಸವಿನಯ ಪುರುವಕವಾಗಿ ಯಿಲಿಗಳ ಗರಭದೊಳಗೆ ಹುಲಿಗಳಿವೆ ಯಂದು ಹೇಳುತಲಿದ್ದರು.. ಯಿಲಿಯೊಳಗೆ ಹುಲಿಯಿರಲಿ, ಹುಲಿಯೊಳಗೆ ಯಿಲಿಯಿರಲಿ.. ಮನ್ರೋ ಮಾತ್ರಹ್ಹಾ.. ಅನ್ನುತ ಯಿರಲಿಲ್ಲ.. ಹ್ಹಾ.. ಹ್ಹಾ.. ಅನ್ನುತಲೂ ಯಿರಲಿಲ್ಲ..

ಹೀಗಿರುತ್ತಿರಲಾಗಿ ವಂದಿವಸ..

ಅತ್ತ ಕೂಡ್ಲಿಗಿ ಪಟ್ಟಣದೊಳಗ...

ಅಂಜಣಿ ಅರ್ಥಾತ್ ಹೆನ್ರಿಯಂಬ ಮರ್ಕಟಕ್ಕೆ ಪಟ್ಟಣಕ್ಕೇಕ ಕುಂತಳ ಪ್ರಾಂತಕ್ಕೇನೆ ಸುಂದರಿ ಯಂದಿನಿಸಿರ್ದ ಚಿನ್ನಸಾನಿಯು ಮನಸೋತಳೋ ಅಥವಾ ಆಕೆಗೆ ಅದೇ ಸಮರ್ಪಿಸಿಕೊಂಡಿತೋ? ಪರಸ್ಪೂರ ಜನುಮಾಂತರ ಸಂಬಂಧ ಅವರೀರ್ವರ ನಡುವೆಯಿತೋ? ಆ ಧರುಮಾರ್ಥ ವಡಕರಾಯನ ದೇವುಳ ಗೋಪುರ ಜೀರ್ಣೋದ್ಧಾರಾರ್ತ ಯೇರು ಪಡಿಸಿದ್ದ ಪ್ರದರ್ಸನ ರಾವುಕಾಲದೊಳಗ ಆರಂಭಗೊಂಡಿತ್ತೋ ಅಥವಾ.. ವಟ್ಟಿನಲ್ಲಿ ವಪ್ಪತ್ತಯ್ಯನ ಕರುಮಮೋ.. ತಿಕ್ಕಡ ದಂಪತಿಗಳ ಹತಭಾಗ್ಯಮೋ.. ಲಾಂದರಗಳ ಬೆಳಕೊಳಗೆ ಹಿಂಗss ನಡೆಯಿತೆಂದು ನಿಖರವಾಗಿ ಹೇಳಲಕ ಯಂಥವರಿಗೂ ಸಾಧ್ಯಯಿಲ್ಲ. ಆ ಹಿಡಿ ಬೆಳಕೊಳಗ ಗಂಡನಾದಾತ ಮಾಡಿಕೊಂಡ ಹೆಂಡತಿಯನ್ನು ಬಿರ್ರನೆ ಗುರುತಿಸುವುದು